ಕರೊನಾ: ಜಿಲ್ಲೆಯ ಜನರಿಗೆ ಸಮಾಧಾನದ ಸುದ್ದಿ ಇಲ್ಲಿದೆ

ಜಿಲ್ಲೆಯಲ್ಲಿ ಇಳಿಕೆಯಾಗುತ್ತಿದೆ ಕರೊನಾ ತೀವ್ರತೆ?
ಇಂದು 94 ಪಾಸಿಟಿವ್, 105 ಮಂದಿ ಬಿಡುಗಡೆ

[sliders_pack id=”1487″]

ಕಾರವಾರ: ಸತತ ಏರಿಕೆ ಕಾಣುತ್ತಿದ್ದ ಕರೊನಾ ಸೋಂಕು ವಾರದಿಂದೀಚೆಗೆ ಜಿಲ್ಲೆಯಲ್ಲಿ ಸ್ವಲ್ಪ ಇಳಿಮುಖವಾಗಿದೆ. ಉತ್ತರಕನ್ನಡದಲ್ಲಿ ಇಂದು 94 ಕರೊನಾ ಕೇಸ್ ದಾಖಲಾಗಿದೆ. ಕಾರವಾರ 6, ಅಂಕೋಲಾ 5, ಕುಮಟಾ 8, ಹೊನ್ನಾವರ 7, ಶಿರಸಿ 10, ಸಿದ್ದಾಪುರ 2, ಯಲ್ಲಾಪುರ 1, ಮುಂಡಗೋಡ 49, ಹಳಿಯಾಳ 5 ಮತ್ತು ಜೋಯ್ಡಾದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ.

ಇದೇ ವೇಳೆ ಇಂದು ವಿವಿಧ ಆಸ್ಪತ್ರೆಯಿಂದ 105 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ., ಅಂಕೋಲಾ 5, ಕಾರವಾರ 8, ಕುಮಟಾ 11, ಹೊನ್ನಾವರ 29, ಶಿರಸಿ 14, ಮುಂಡಗೋಡಿನಲ್ಲಿ 38 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಹೋಮ್ ಐಸೋಲೇಷನ್ ನಲ್ಲಿ 461 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 94 ಪ್ರಕರಣ ದಾಖಲಾದ ಬೆನ್ನಲ್ಲೆ, ಸೋಂಕಿತರ ಸಂಖ್ಯೆ 12, 312ಕ್ಕೆ ಏರಿಕೆಯಾಗಿದೆ. ಇದುವರೆಗೂ 160 ಮಂದಿ ಮೃತಪಟ್ಟಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version