ಹೊನ್ನಾವರ: ತಾಲೂಕಿನಲ್ಲಿ ಇಂದು 15 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಪಟ್ಟಣ ವ್ಯಾಪ್ತಿಯಲ್ಲಿ-3 ಗ್ರಾಮೀಣ ಭಾಗದಲ್ಲಿ-12 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಪಟ್ಟಣದ ಪ್ರಭಾತನಗರದ 44 ವರ್ಷದ ಮಹಿಳೆ, ಕೇಳಗಿನಪಾಳ್ಯದ 28 ವರ್ಷದ ಯುವತಿ, ಪಟ್ಟಣದ 40 ವರ್ಷದ ಮಹಿಳೆ, ಗ್ರಾಮೀಣ ಭಾಗವಾದ ಮಾಡಗೇರಿಯ 67 ವರ್ಷದ ಮಹಿಳೆ, 24 ವರ್ಷದ ಯುವತಿ, 35 ವರ್ಷದ ಪುರುಷ, ಹಡಿನಬಾಳದ 24 ವರ್ಷದ ಯುವಕ, 59 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ.
ಬಂಗಾರಮಕ್ಕಿಯ 30 ವರ್ಷದ ಯುವಕ, ಮೂಡ್ಕಣಿಯ 45 ವರ್ಷದ ಪುರುಷ, 20 ವರ್ಷದ ಯುವಕ, ಮಂಕಿ ಹಳೆಮಠದ 40 ವರ್ಷದ ಮಹಿಳೆ, ನೀಲಗೇರಿಯ 80 ವರ್ಷದ ಪುರುಷ, 70 ವರ್ಷದ ಮಹಿಳೆ, ಹಳದೀಪುರ ಕುದಬೈಲ್‌ನ 54 ವರ್ಷದ ಪುರುಷ ಸೇರಿದಂತೆ ಇಂದು 15 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇಂದು 15 ಕೇಸ್ ದಾಖಲಾದ ಬೆನ್ನಲ್ಲೆ, ತಾಲೂಕಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1214 ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗು 14 ಸಾವಿರಕ್ಕೂ ಹೆಚ್ಚು ಜನರಿಗೆ ಟೆಸ್ಟ್ ಮಾಡಲಾಗಿದೆ.
ಕುಮಟಾದಲ್ಲಿ 5 ಪಾಸಿಟಿವ್:
ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 5 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಮಾಸೂರ್‌ನಲ್ಲಿ 2, ಸೇರಿದಂತೆ ಮೂರೂರು, ಬಗ್ಗೋಣ, ಸಂತೇಗುಳಿ ಭಾಗದಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ.
ಮಾಸೂರಿನ 18 ವರ್ಷದ ಯುವತಿ, 40 ವರ್ಷದ ಮಹಿಳೆ, ಮೂರೂರಿನ 38 ವರ್ಷದ ಮಹಿಳೆ, ಸಂತೇಗುಳಿಯ 90 ವರ್ಷದ ವೃದ್ಧ ಹಾಗೂ ಬಗ್ಗೋಣದ 43 ವರ್ಷದ ಪುರುಷನಲ್ಲಿ ಕರೋನಾ ಸೋಂಕು ದೃಢಪಟ್ಟಿದೆ.
ಇಂದು 5 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,645 ಕ್ಕೆ ಏರಿಕೆಯಾಗಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ ಹೊನ್ನಾವರ ಮತ್ತು ಯೋಗೇಶ್ ಮಡಿವಾಳ ಕುಮಟಾ