Uttara Kannada
Trending

ಮದಿರೆ ಮತ್ತಿನಲ್ಲಿ ಕಾರು ಚಾಲನೆ: ಸಿಕ್ಕಿಸಿಕ್ಕ ವಾಹನಕ್ಕೆ ಗುದ್ದಿ ಅವಾಂತರ

ಆಕ್ರೋಶಗೊOಡ ಸ್ಥಳೀಯರಿಂದ ಕುಡುಕ ಚಾಲಕನಿಗೆ ಥಳಿತ
ಕಾರಿನಲ್ಲಿತ್ತು ರಾಶಿ ರಾಶಿ ಸಾರಾಯಿ ಬಾಟಲ್!

[sliders_pack id=”1487″]

ಕಾರವಾರ: ಇತ್ತಿಚೆಗೆ ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿ ಅಪಘಾತ ಮಾಡುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲೂ ಇಂತಹದೇ ಒಂದು ಪ್ರಕರಣ ನಡೆದಿದ್ದು, ಕಂಠಪೂರ್ತಿ ಕುಡಿದು ಕಾರು ಚಾಲನೆ ಮಾಡಿದ ವ್ಯಕ್ತಿಯೋರ್ವ ಸಿಕ್ಕ ಸಿಕ್ಕ ವಾಹನಗಳಿಗೆ ಗುದ್ದಿದ್ದಾನೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಮದಿರೆ ಮತ್ತಿನಲ್ಲಿ ಕಾರು ಚಲಾಯಿಸಿದ ವ್ಯಕ್ತಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.


ರಾಜಸ್ಥಾನ ಮೂಲದ ರವೀಂದ್ರ ಶರ್ಮಾ ಎನ್ನುವವರು ಕುಡಿದು ಕಾರು ಚಾಲನೆ ಮಾಡಿದ ವ್ಯಕ್ತಿಯಾಗಿದ್ದು, ಸಾರ್ವಜನಿಕರಿಂದ ಸರಿಯಾಗಿ ಥಳಿಸಿಕೊಂಡಿದ್ದಾನೆ. ರಾಜಸ್ಥಾನ ಮೂಲದವನಾದ ಈತ ಕಾರವಾರದಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡ್ತಿದ್ದ. ಈತನ ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿ ಮತ್ತಷ್ಟು ಹೆಂಡದ ಬಾಟಲಿಗಳು ಕಂಡುಬoದಿದೆ. ಕಾರು ಮತ್ತು ಕಾರಿನಲ್ಲಿದ್ದ ಸಾರಾಯಿ ಬಾಟಲ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


ಜಿಲ್ಲಾ ಪಂಚಾಯ್ತಿ ಸದಸ್ಯೆ ಚೈತ್ರ ಕೊಟಾಲ್ಕರ್ ಪತಿಯ ಕಾರು ಸೇರಿದಂತೆ ನಾಲ್ಕೈದು ವಾಹನಗಳಿಗೆ ಡಿಕ್ಕಿ ಮಾಡಿದ್ದಾನೆ. ಇದನ್ನ ಗಮನಿಸಿದ ಸ್ಥಳೀಯರು ಈತನನ್ನ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button