
ಟ್ಯಾಂಕರ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ
ಸ್ಥಳದಲ್ಲೇ ಬೈಕ್ ಸವಾರರ ದುರ್ಮರಣ
ಕಾರವಾರ: ಟ್ಯಾಂಕರ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ, ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರ ಬಿಣಗಾ ಬಳಿ ಈ ದುರ್ಘಟನೆ ಸಂಭವಿಸಿದೆ. ಡಿಕ್ಕಿ ಹೊಡೆತಕ್ಕೆ ಟ್ಯಾಂಕರ್ ಅಡಿಯಲ್ಲಿ ಬೈಕ್ ಸಿಕ್ಕಿಕೊಂಡಿದ್ದು, ಸವಾರರಿಬ್ಬರೂ ಸ್ಥಳದಲ್ಲೇ ಸಾವುಕಂಡಿದ್ದಾರೆ.
ಮೃತರು ಕೊಲ್ಲಾಪುರ ಮೂಲದವರಾಗಿದ್ದು ನೃತ್ಯ ತರಬೇತಿ ನೀಡುತ್ತಿದ್ದರು ಎನ್ನಲಾಗಿದೆ. ಅತೀ ಮಳೆಯಿಂದಾಗಿ ಈ ಅವಾಂತರ ಸಂಭವಿಸಿದೆ ಎಂಬ ಮಾಹಿತಿ ದೊರೆತಿದೆ. ಈ ಸಂಬoಧ ಕಾರವಾರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್, ಕಾರವಾರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಸಾಹಿತ್ಯ ಕ್ಷೇತ್ರದಲ್ಲಿ ಅಂಕೋಲೆ ಕೊಡುಗೆ ಅನನ್ಯ: ಕೆ.ವಿ.ನಾಯಕ
- Rain Update: ಹವಾಮಾನ: ಕರಾವಳಿಯಲ್ಲಿ ಮೂರು ದಿನ ಭಾರೀ ಮಳೆ: ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಸೂಚನೆ
- Job Alert: ಕ್ಯಾಶ್ಯೂ ಇಂಡಸ್ಟ್ರಿಸ್ ನಲ್ಲಿ ಉದ್ಯೋಗಾವಕಾಶ: 15 ಸಾವಿರ ಮಾಸಿಕ ವೇತನ