
ಕೊನೆಗೂ ಸಿಕ್ಕಿಬಿದ್ದ ಕಿಲಾಡಿ ಅರ್ಚಕ
ಪೊಲೀಸರಿಂದ ತಪ್ಪಿಸಿಕೊಳ್ಳಲು ಪದೇ ಪದೇ ಸ್ಥಳ ಬದಲಾವಣೆ
ಭಟ್ಕಳ : ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ದೇವರ ಆಭರಣ ನಾಪತ್ತೆ ಪ್ರಕರಣಕ್ಕೆ ಸಂಬoಧಿಸಿದoತೆ ಪೊಲೀಸರು ಓರ್ವನನ್ನ ಸಾಗರದಲ್ಲಿ ಬಂಧಿಸಿದ್ದಾರೆ. ಪ್ರಕರಣವನ್ನ ಬೇಧಿಸಲು ಎಎಸ್ಪಿ ನಿಖಿಲ್ ಮಾರ್ಗದರ್ಶನದಲ್ಲಿ ತಂಡವನ್ನ ರಚಿಸಲಾಗಿತ್ತು. ಪೊಲೀಸರ ವಿವಿಧ ತಂಡ ಯಲ್ಲಾಪುರ, ಮೈಸೂರು, ಬೆಂಗಳೂರು ಹೀಗೆ ಆರೋಪಿ ಪತ್ತೆಗಾಗಿ ಜಾಲ ಬೀಸಲಾಗಿತ್ತು. ಆರೋಪಿ ಪೊಲೀಸರಿಂದ ತಪ್ಪಿಸಲು ಊರೂರು ಬದಲಾಯಿಸುತ್ತಿದ್ದ ಎನ್ನಲಾಗಿದೆ.
ಸಾಗರದಲ್ಲಿ ಈ ಹಿಂದೆ ಸಹಾಯಕ ಅರ್ಚಕರಾಗಿ ಕೆಲಸ ಮಾಡುತ್ತಿದ್ದ ಸತೀಶ ಭಟ್ ಎಂಬಾತನನ್ನ ವಶಕ್ಕೆ ಪಡೆಯಲಾಗಿದ್ದು ತನಿಖೆ ನಡೆಸಲಾಗಿದೆ. ದೇವರ ಬಂಗಾರವನ್ನ ಏಲ್ಲಿ ಇಡಲಾಗಿದೆ ಎಂಬುದರ ಬಗ್ಗೆ ಪೊಲೀಸರ ತನಿಖೆ ಮುಂದುವರಿದಿದೆ.
ತಾಲೂಕಿನ ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿರುವ ದೇವರ ಲಕ್ಷಾಂತರ ಚಿನ್ನಾಭರಣ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿತ್ತು. 670 ಗ್ರಾಂ ತೂಕದ ಚಿನ್ನಾಭರಣ ಹಾಗೂ 225 ಗ್ರಾಂ ತೂಕದ ಬೆಳ್ಳಿ ಆಭರಣಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು, ಇವುಗಳ ಮೌಲ್ಯ ಅಂದಾಜು 30 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಹಿಂದೆ ದೇವಾಲಯದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದ ಸತೀಶ್ ಭಟ್ ಅವರ ಮೇಲೆ ಅನುಮಾನ ವ್ಯಕ್ತವಾಗಿತ್ತು.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ
ಪ್ರಮುಖ ಸುದ್ದಿಗಳು: ಇದನ್ನೂ ಓದಿ
- ಮುರುಡೇಶ್ವರದಿಂದ ಭಟ್ಕಳದ ತನಕ ಅದ್ದೂರಿಯಾಗಿ ನಡೆದ ಶೌರ್ಯ ಜಾಗರಣ ರಥಯಾತ್ರೆ
- Mega Job Fair 2023: ಪ್ರತಿಷ್ಠಿತ 200ಕ್ಕೂ ಹೆಚ್ಚು ಕಂಪನಿಗಳು ಭಾಗಿ: ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶ
- Huge Python: ಮನೆಗೆ ಬಂದಿದ್ದ ಸುಮಾರು 10 ಅಡಿ ಉದ್ದ, 38 ಕೆಜಿ ಭಾರದ ಭಾರೀ ಹೆಬ್ಬಾವು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ತಂದೆ ಮತ್ತು ಮಗ