Important
Trending

ನಾಳೆ, ನಾಡಿದ್ದು ಎಲ್ಲಾ ಸ್ಕ್ಯಾನಿಂಗ್, ಝೇರಾಕ್ಸ್ ಮತ್ತು ಕಂಪ್ಯೂಟರ್ ಸೆಂಟರ್ ಬಂದ್!

ಜಿಲ್ಲೆಯ ಮತಗಟ್ಟೆ ವ್ಯಾಪ್ತಿಯಲ್ಲಿ ಇಂದಿನಿoದ ನಿಷೇಧಾಜ್ಞೆ
ಸ್ಕ್ಯಾನಿಂಗ್, ಝೇರಾಕ್ಸ್ ಮತ್ತು ಕಂಪ್ಯೂಟರ್ ಸೆಂಟರ್ ಮುಚ್ಚಿಸಲು ಕ್ರಮ
ಪೊಲೀಸರಿಗೆ ಜಿಲ್ಲಾಧಿಕಾರಿಗಳ ಸೂಚನೆ

ಕಾರವಾರ: ಪಶ್ಚಿಮ ಪದವೀಧರ ಚುನಾವಣೆಯ ಮತದಾನವು ಇದೇ ಅಕ್ಟೋಬರ್ 28 ರ ಬುಧವಾರದಂದು ನಡೆಯಲಿದ್ದು, ಈ ಒಂದು ಚುನಾವಣೆಯ ಮತದಾನವು ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಯುವಂತೆ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಅಲ್ಲದೆ,ಎಲ್ಲಾ ಸ್ಕ್ಯಾನಿಂಗ್, ಝೆರಾಕ್ಸ್ ಮತ್ತು ಕಂಪ್ಯೂಟರ್ ಸೆಂಟರ್‌ಗಳು ಚುನಾವಣಾ ಅವಧಿಯಲ್ಲಿ ಕಾರ್ಯನಿರ್ವಹಿಸಬಾರದೆಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಮತಗಟ್ಟೆಗಳ ಸಮೀಪದಲ್ಲಿ ಮತದಾರರಿಗೆ ಆಮೀಶ ಒಡ್ಡುವುದು, ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದರಿಂದ ಮತಗಟ್ಟೆಗಳ ಸಮೀಪದಲ್ಲಿ ಶಾಂತತೆಗೆ ಧಕ್ಕೆ ಉಂಟಾಗಿ, ಮತದಾನ ಕಾರ್ಯಕ್ಕೆ ಅಡಚಣೆ ಉಂಟಾಗುವ ಸಂಭವ ಇರುವದರಿಂದ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ 26 ಮತಗಟ್ಟೆ ಭಾಗಗಳ ಪ್ರಧೇಶದಲ್ಲಿ 48 ಗಂಟೆಗಳ ಕಾಲ ಪ್ರತಿಭಂದಕ ಆಜ್ಞೆಯನ್ನು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಹೊರಡಿಸಿದ್ದಾರೆ. 26 ರ ಸೋಮವಾರದ ಸಾಯಂಕಾಲ 5 ಗಂಟೆಯಿoದ ಪ್ರಾರಂಭಿಸಿ 28 ರ ಬುಧವಾರದ ಮಧ್ಯರಾತ್ರಿಯ ವರೆಗೆ 144 ನಿಷೇಧಾಜ್ಞೆಯನ್ನು ಜಾರಿಗೋಳಿಸಲಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಮತದಾರರ ಭಾವಚಿತ್ರವುಳ್ಳ ನಕಲಿ ಮತದಾರರ ಗುರುತಿನ ಪತ್ರ ಮುದ್ರಿಸಿರುವುದು ಕಂಡುಬoದಿರುವದರಿoದ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಆದ ಕಾರಣ ಪಶ್ಚಿಮ ಪದವೀಧರ ಚುನಾವಣೆಯ ನಡೆಯುವ ಸಮಯದಂದು ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಸ್ಕ್ಯಾನಿಂಗ್, ಝೇರಾಕ್ಸ್ ಮತ್ತು ಕಂಪ್ಯೂಟರ್ ಸೆಂಟರ್‌ಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗಳು ಸೂಚಿಸಿದ್ದಾರೆ.

ಅದರಂತೆಯೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸಹ 27 ರ ಮಂಗಳವಾರದ ಸಾಯಂಕಾಲ 5 ಗಂಟೆಯಿoದ 28 ರ ಸಯಂಕಾಲ 5 ಗಂಟೆಯವೆರೆಗೆ ಎಲ್ಲಾ ಸ್ಕಾö್ಯನಿಂಗ್, ಝೇರಾಕ್ಸ್ ಮತ್ತು ಕಂಪ್ಯೂಟರ್ ಸೆಂಟರ್‌ಗಳನ್ನು ಚುನಾವಣಾ ಅವಧಿಯಲ್ಲಿ ಕಾರ್ಯನಿರ್ವಹಿಸಬಾರದೆಂದು ಆದೇಶ ಹೊರಡಿಸಿ ಜಿಲ್ಲಾಧಿಕಾರಿ ಹರೀಶ ಕುಮಾರ ಕೆ. ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬ್ಯೂರೋ ರಿಪೋರ್ಟ್, ವಿಸ್ಮಯ ನ್ಯೂಸ್

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button