ಅಂಕೋಲಾ : ಸೋಮವಾರ ತಾಲೂಕಿನಲ್ಲಿ 1 ಹೊಸ ಕೊವಿಡ್ ಕೇಸ್‍ಗಳು ಪತ್ತೆಯಾಗಿದೆ. ಪುರಲಕ್ಕಿ ಬೇಣದ 51ರ ಮಹಿಳೆಯಲ್ಲಿ ಸೋಂಕು ಲಕ್ಷಣಗಳು ಧೃಡಪಟ್ಟಿದೆ. ಗುಣಮುಖರಾದ 11 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್‍ಲ್ಲಿರುವ 36 ಮಂದಿ ಸಹಿತ ಒಟ್ಟೂ 49 ಸಕ್ರಿಯ ಪ್ರಕರಣಗಳಿವೆ. 96 ಜನರ ಗಂಟಲು ದ್ರವ ಮಾದರಿ ಸಂಗ್ರ ಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.
ಶಿರಸಿಯಲ್ಲಿ 15 ಕೇಸ್:
ಶಿರಸಿ: ನಗರದಲ್ಲಿ 15 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಮೂವರು ಗುಣಮುಖರಾಗಿದ್ದಾರೆ.
ಇಂದು ಅಯ್ಯಪ್ಪ ನಗರದಲ್ಲಿ 3, ಬನವಾಸಿ ರೋಡಿನಲ್ಲಿ 1, ರಾಜೀವ ನಗರದಲ್ಲಿ 4, ಬನವಾಸಿಯಲ್ಲಿ 1, ಕೆರೆಕೊಪ್ಪದಲ್ಲಿ 1, ಪಡ್ತಿಗಲ್ಲಿ 1, ಹುಣಸೆಕೊಪ್ಪದಲ್ಲಿ 2, ಗುರುನಗರದಲ್ಲಿ 1, ವಿದ್ಯಾನಗರದ ಒಬ್ಬರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.
ಯಲ್ಲಾಪುರದಲ್ಲಿ ಏಳು ಪಾಸಿಟಿವ್:
ಯಲ್ಲಾಪುರ : ತಾಲೂಕಿನಲ್ಲಿ ಸೋಮವಾರ 7 ಜನರಿಗೆ ಕೊರೊನಾ ಧೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 51 ಕ್ಕೇರಿದೆ. ಇಂದು ಪಟ್ಟಣದ ನೂತನನಗರದಲ್ಲಿ 3, ಕೊಂಡೆಮನೆಯಲ್ಲಿ 2, ಕಿರವತ್ತಿ ಹಾಗೂ ಕಂಡ್ರನಕೊಪ್ಪಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ