ಅರಬ್ಬಿ ಸಮುದ್ರದ ಕುರಿತು ಸಿಗಲಿದೆ ಸಂಪೂರ್ಣ
ಮೀನುಗಾರರಿಗೆ ಸಿಗಲಿದೆ ಹಲವು ಅನುಕೂಲ
ಕಾರವಾರ: ಕಾರವಾರಕ್ಕೆ ಬಂದಿದ್ದಾನೆ ವೇವ್ ರೈಡರ್ ಬಾಯ್. ಹೌದು, ಹವಾಮಾನ ವೈಪರಿತ್ಯ ಸೇರಿದಂತೆ ದೇಶದ ಕಡಲಿನಲ್ಲಾಗುವ ಬದಲಾವಣೆಯನ್ನು ತಕ್ಷಣ ಗುರುತಿಸಿ ಮಾಹಿತಿ ರವಾನೆ ಮಾಡಲು ಹವಾಮಾನ ಇಲಾಖೆಗೆ ಕಷ್ಟಸಾಧ್ಯವಾಗುತಿತ್ತು. ಹೀಗಾಗಿ ಸಮುದ್ರದಲ್ಲಿ ವೈಪರಿತ್ಯ ಆಗುವ ಮೊದಲೇ ನಿಖರವಾಗಿ ಮಾಹಿತಿ ನೀಡಲಾಗುತ್ತಿರಲಿಲ್ಲ. ಆದರೀಗ, ರಾಜ್ಯದಲ್ಲೇ ಪ್ರಥಮ ಬಾರಿಗೆ ಕಾರವಾರದ ಅರಬ್ಬಿ ಸಮುದ್ರದಲ್ಲಿ ಎಂಕೆ 4 ಮಾದರಿಯ ಡೈರಕ್ಷನಲ್ ವೇವ್ ರೈಡರ್ ಬಾಯ್ ಅಳವಡಿಕೆ ಮಾಡಲಾಗಿದೆ.
ಇದು ಅತ್ಯಂತ ಹೆಚ್ಚಿನ ಮಟ್ಟದ ಕಾರ್ಯಕ್ಷಮತೆಯನ್ನ ಹೊಂದಿದೆ. ಹವಾಮಾನ ವೈಪರಿತ್ಯ, ಅಲೆಗಳ ಎತ್ತರ, ಅಲೆಗಳ ದಿಕ್ಕು, ಅಲೆಗಳ ಮಾದರಿ, ಸಮುದ್ರ ಮೇಲ್ಮೈ ಉಷ್ಣತೆ ಅಳೆತೆ,ಸಮುದ್ರಭಾಗದಲ್ಲಿ ಮೀನುಗಳ ಸಾಂದ್ರತೆಗಳ ಮಾಹಿತಿ ಶೀಘ್ರದಲ್ಲಿ ನೀಡಲಿದೆ. ಸ್ಯಾಟ್ ಲೈಟ್ ಮೂಲಕ ಅರಬ್ಬಿ ಸಮುದ್ರದ ಇಂಚಿoಚು ಮಾಹಿತಿ ಲಭ್ಯವಾಗಲಿದೆ.
ಈ ಮೂಲಕ ಕರ್ನಾಟಕ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಆಗುವ ಪ್ರತಿ ಬದಲಾವಣೆ, ಹವಾಮಾನ, ಮೀನುಗಳ ಸಾಂದ್ರತೆಯ ಮಾಹಿತಿಯನ್ನು ಇದು ನೀಡಲಿದ್ದು, ಇದೇ ಮೊದಲ ಬಾರಿಗೆ ಬ್ಯಾಟರಿ ಜೊತೆಗೆ ಸೋಲಾರ್ ಶಕ್ತಿ ಬಳಸಿಕೊಂಡು ಈ ಬಾಯ್ ಕಾರ್ಯ ನಿರ್ವಹಿಸಲಿದ್ದು ದೀರ್ಘ ಬಾಳಿಕೆ ಬರಲಿದೆ. ಮೀನುಗಾರರ ಸುರಕ್ಷತೆಯ ದೃಷ್ಟಿಯಿಂದ ಈ ಯಂತ್ರ ಅತ್ಯಂತ ಮಹತ್ವ ಪಡೆದುಕೊಂಡಿದೆ
ಬ್ಯೂರೋ ರಿಪೋರ್ಟ್, ವಿಸ್ಮಯ ನ್ಯೂಸ್
ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ
ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.