ಉತ್ತರಕನ್ನಡ ಜಿಲ್ಲೆಯಲ್ಲಿ 25 ಪಾಸಿಟಿವ್: 36 ಮಂದಿ ಗುಣಮುಖ

ಶಿರಸಿಯಲ್ಲಿಂದು ಇಬ್ಬರಿಗೆ ಕೊರೊನಾ
ಹೊನ್ನಾವರದಲ್ಲಿ ಒಂದು ಸಾವು
ಕಾರವಾರ 6, ಭಟ್ಕಳದಲ್ಲಿ ಮೂರು ಕೇಸ್
ಅಂಕೋಲಾದಲ್ಲಿ ಕೊರೊನಾ ವಾರಿಯರ್ಸ್ ಅಧಿಕಾರಿಯಲ್ಲೂ ಸೋಂಕು ?

ಹೊನ್ನಾವರ: ತಾಲೂಕಿನಲ್ಲಿ ಇಂದು 9 ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಇದೇ ವೇಳೆ ಪಟ್ಟಣದ ರಜತಗಿರಿಯ 78 ವರ್ಷದ ಪುರುಷ ಸಾವನ್ನಪ್ಪಿದ್ದಾನೆ. ಪಟ್ಟಣದ ಪ್ರಭಾತನಗರದ 55 ವರ್ಷದ ಪುರುಷ, 23 ವರ್ಷದ ಯುವಕ, ಪಟ್ಟಣದ ರಥಬೀದಿಯ 58 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಗ್ರಾಮೀಣ ಭಾಗವಾದ ಹೊಸಾಕುಳಿಯ 54 ವರ್ಷದ ಪುರುಷ, 28 ವರ್ಷದ ಯುವಕ, 5 ವರ್ಷದ ಬಾಲಕ, ಕಡತೋಕಾದ 48 ವರ್ಷದ ಮಹಿಳೆ, ಮಹಿಮೆಯ 71 ವರ್ಷದ ಮಹಿಳೆ ಸೇರಿ ಇಂದು 9 ಜನರಲ್ಲಿ ಪಾಸಿಟಿವ್ ಪತ್ತೆಯಾಗಿದೆ. 33 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಕುಮಟಾದಲ್ಲಿ ನಾಲ್ಕು ಪಾಸಿಟಿವ್

ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು ನಾಲ್ವರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ತಾಲೂಕಿನ ನೆಲ್ಲಿಕೇರಿ, ಗೋಕರ್ಣದ ಮೇಲಿನಕೇರಿ, ತೆಪ್ಪಾ ಭಾಗದಲ್ಲಿ ಸೋಂಕಿತ ಪ್ರಕರಣ ಪತ್ತೆಯಾಗಿದೆ. ನೆಲ್ಲಿಕೇರಿಯ 72 ವರ್ಷದ ವೃದ್ಧ, ತೆಪ್ಪಾದ 41 ವರ್ಷದ ಪುರುಷ, ಗೋಕರ್ಣ ಮೇಲಿನಕೇರಿಯ 32 ವರ್ಷದ ಪುರುಷ, 30 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಇಂದು 4 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1718 ಕ್ಕೆ ಏರಿಕೆಯಾಗಿದೆ.

ಶಿರಸಿಯಲ್ಲಿಂದು ಇಬ್ಬರಿಗೆ ಕೊರೊನಾ

ಶಿರಸಿ: ತಾಲೂಕಿನಲ್ಲಿ ಶನಿವಾರ 2 ಕೊರೊನಾ ಕೇಸ್ ದೃಢಪಟ್ಟಿದ್ದು, 21 ಮಂದಿ ಗುಣಮುಖರಾಗಿದ್ದಾರೆ.
ಇಂದು ಚಿಪಗಿಯಲ್ಲೇ 2 ಕರೊನಾ ಕೇಸ್ ಪತ್ತೆಯಾಗಿದೆ. ಈವರೆಗೆ 1473 ಮಂದಿಯಲ್ಲಿ ಕೊರೊನಾ ಕೆಸ್ ಪತ್ತೆಯಾಗಿದ್ದು, 1378 ಜನರು ಗುಣಮುಖರಾಗಿದ್ದಾರೆ.

ಅಂಕೋಲಾದಲ್ಲಿಂದು ಕೊವಿಡ್ ಕೇಸ್3 : ಕೊರೊನಾ ವಾರಿಯರ್ಸ್ ಅಧಿಕಾರಿಯಲ್ಲೂ ಸೋಂಕು ?

ಅಂಕೋಲಾ : ತಾಲೂಕಿನಲ್ಲಿ ಶನಿವಾರ ಕೊರೊನಾ ವಾರಿಯರ್ಸ್ ಅಧಿಕಾರಿ ಸೇರಿದಂತೆ 3 ಹೊಸ ಕೊವಿಡ್ ಕೇಸ್‍ಗಳು ಪತ್ತೆಯಾಗಿದ್ದು, ಗ್ರಾಮೀಣ ಪ್ರದೇಶವಾದ ಬಳಲೆಯ 45ರ ಮಹಿಳೆ, ಪಟ್ಟಣ ವ್ಯಾಪ್ತಿಯ ಮಠಾಕೇರಿಯ 44 ರ ಮಹಿಳೆಯಲ್ಲಿ ಸೋಂಕು ಲಕ್ಷಣಗಳು ಧೃಡಪಟ್ಟಿವೆ.

ಗುಣಮುಖರಾದ ಓರ್ವರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್‍ಲ್ಲಿರುವ 15 ಮಂದಿ ಸಹಿತ ಒಟ್ಟೂ 26 ಸಕ್ರಿಯ ಪ್ರಕರಣಗಳಿವೆ. 7 ರ್ಯಾಟ್ ಮತ್ತು 92 ಆರ್‍ಟಿಪಿಸಿಆರ್ ಸೇರಿದಂತೆ 99 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇತ್ತೀಚೆಗಷ್ಟೇ ತಾಲೂಕಿನ ಪ್ರಮುಖ ಹುದ್ದೆಯನ್ನು ಅಲಂಕರಿಸಿರುವ ಕೊರೊನಾ ವಾರಿಯರ್ಸ್ ನಾಯಕನಲ್ಲಿ ಸೋಂಕು ಧೃಢ ಪಟ್ಟಿದ್ದು, ಹೊಂ ಕ್ವಾರಂಟೈನ್‍ಗೆ ಒಳಪಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಗಂಟಲು ದ್ರವ ತಪಾಸಣೆ ನಡೆಸಲಾಗುತ್ತಿದೆ.

ಜಿಲ್ಲೆಯಲ್ಲಿ 25 ಪಾಸಿಟಿವ್:

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 25 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಕಾರವಾರ 6, ಭಟ್ಕಳದಲ್ಲಿ ಮೂರು ಪ್ರಕರಣ‌ ದೃಢಪಟ್ಟಿದೆ. ಹಾಗು ಯಲ್ಲಾಪುರದಲ್ಲಿ ಎರಡು ಕೇಸ್ ದಾಖಲಾಗಿದೆ. ಇದೇ 36 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ ಹೊನ್ನಾವರ ಮತ್ತು ಯೋಗೇಶ್ ಮಡಿವಾಳ ಕುಮಟಾ ಮತ್ತು ವಿಲಾಸ್ ನಾಯಕ ಅಂಕೋಲಾ

Exit mobile version