ಮಾಹಿತಿ
Trending

ಶಿರಸಿ ನಗರಸಭೆ ಅಧ್ಯಕ್ಷರಾಗಿ ಗಣಪತಿ ನಾಯ್ಕ, ಉಪಾಧ್ಯಕ್ಷೆಯಾಗಿ ವೀಣಾ ಶೆಟ್ಟಿ ಆಯ್ಕೆ

ಶಿರಸಿ: ಶಿರಸಿ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶನಿವಾರ ಮುಕ್ತಾಯವಾಗಿದೆ. ಬಿಜೆಪಿಯ ಗಣಪತಿ ನಾಯ್ಕ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ವೀಣಾ ಶೆಟ್ಟಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಗಣಪತಿ ನಾಯ್ಕ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವೀಣಾ ಶೆಟ್ಟಿ ನಾಮಪತ್ರ ಸಲ್ಲಿಸಿದ್ದರು.ಸ್ಪಷ್ಟ ಬಹುಮತ ಇಲ್ಲದೇ ಹೋದರೂ, ಸ್ಪರ್ಧೆ ಇರಬೇಕು ಎನ್ನುವ ಕಾರಣಕ್ಕೆ ಕಾಂಗ್ರೆಸ್ ಪಕ್ಷದಿಂದ ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಮೀಮ್ ಭಾನು ಉಮೇದುವಾರಿಕೆ ಸಲ್ಲಿಸಿದ್ದರು.

ಒಟ್ಟು 31 ಮತಗಳಲ್ಲಿ ಬಿಜೆಪಿಯ ಗಣಪತಿ ನಾಯ್ಕ ಹಾಗೂ ಉಪಾಧ್ಯಕ್ಷೆ ವೀಣಾ ಶೆಟ್ಟಿ ತಲಾ 18 ಮತಗಳನ್ನು ಪಡೆದು ಗೆಲುವು ಸಾಧಿಸಿದರು. 2 ವರ್ಷಗಳ ನಂತರ ಅಧಿಕಾರ ದೊರೆತಿರುವುದಕ್ಕೆ ಬಿಜೆಪಿಯ ಸದಸ್ಯರು, ಬೆಂಬಲಿಗರು ಸಂಭ್ರಮಿಸಿದರು.

ವಿಸ್ಮಯ ನ್ಯೂಸ್ ಶಿರಸಿ

Related Articles

Back to top button