ಹೋಮ್ ಗಾರ್ಡ್ ನಿಂದ ಪತ್ನಿಯ ಮೇಲೆ ಹಲ್ಲೆ

ತಪ್ಪಿಸಲು ಬಂದ ಅತ್ತೆ ಹಾಗೂ ಅತ್ತೆಯ ತಮ್ಮನಿಗೆ ಚಾಕುವಿನಿಂದ ಇರಿತ
ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

[sliders_pack id=”1487″]

ಭಟ್ಕಳ : ತಾಲೂಕಿನ ನಗರ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ ಮಾರುಕೇರಿಯ ಓರ್ವ ಹೋಮ್ ಗಾರ್ಡ್ ತನ್ನ ಹೆಂಡತಿಗೆ ಹಲ್ಲೆ ನಡೆಸುತ್ತಿರುವ ಸಮಯದಲ್ಲಿ ತಪ್ಪಿಸಲು ಬಂದ ಅತ್ತೆ ಹಾಗೂ ಅತ್ತೆಯ ತಮ್ಮನಿಗೆ ಚಾಕುವಿನಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯ ಪಡಿಸಿದ ಘಟನೆ ಗುರುವಾರ ತಡ ರಾತ್ರಿ ನಡೆದಿದೆ. ಮಾರುಕೇರಿಯ ಞಖಷ್ಣ ಹುವೈಯ್ಯ ಗೊಂಡ (ಹೋಮ್ ಗಾರ್ಡ್) ಕಳೆದ 7 ವರ್ಷದ ಹಿಂದೆ ತಾಲೂಕಿನ ಗಾಂಧಿನಗರ ನಿವಾಸಿ ಮಹಾಲಕ್ಷ್ಮಿ ಗೊಂಡ ಎನ್ನುವವನ್ನು ವಿವಾಹವಾಗಿದ್ದ.


ಕಳೆದ ಹಲವು ವರ್ಷಗಳಿಂದ ಕಿರುಕುಳ ನೀಡುತ್ತಾ ಬಂದಿದ್ದ ಎನ್ನಲಾಗಿದ್ದು, ಬುಧುವಾರ ರಾತ್ರಿ ಕುಡಿದು ಬಂದು ಅದೇ ಚಾಳಿ ಮುಂದುವರಿಸಿದ್ದಾನೆ. ಆಗ ತನಗೆ ಹಲ್ಲೆ ನೀಡುತ್ತಿರುವ ಬಗ್ಗೆ ಮಹಾಲಕ್ಷ್ಮಿ ತನ್ನ ತಾಯಿಗೆ ಕರೆ ಮಾಡಿ ತಿಳಿಸಿದ್ದಾಳೆ. ತಕ್ಷಣ ಮಹಾಲಕ್ಷ್ಮಿ ತಾಯಿ ನಾಗಮ್ಮ ರಾತ್ರಿ ತನ್ನ ತಮ್ಮನಾದ ವೆಂಕಟರಮಣನನ್ನು ಕರೆದುಕೊಂಡು ಮಾರುಕೇರಿಗೆ ತೆರಳಿದ್ದಾಳೆ. ತನ್ನ ಮಗಳಿಗೆ ಅಳಿಯ ಕೃಷ್ಣ ಗೊಂಡ ಹಲ್ಲೆ ನಡೆತ್ತಿರುದನ್ನು ತಪ್ಪಿಸಲು ಹೋದ ನಾಗಮ್ಮ ಮತ್ತು ವೆಂಕಟರಮಣ ಇವರಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ.

ಈ ವೇಳೆ ವೆಂಕಟರಮಣ ಇವರ ಕೈ ಬಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದು, ಅತ್ತೆಯ ನಾಗಮ್ಮ ಅವರ ಕೈಗೆ ಸಣ್ಣ ಪುಟ್ಟ ಗಾಯಗಳಾಗಿದೆ. ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಗ್ರಾಮೀಣ ಠಾಣೆ ಪಿ.ಎಸ್.ಐ ಓಂಕಾರಪ್ಪ ಪರಿಶೀಲನೆ ನಡೆಸಿದ್ದು.ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಆರೋಪಿಯ ಅತ್ತೆ ನಾಗಮ್ಮ ಪ್ರಕರಣ ದಾಖಲಿಸಿದ್ದಾರೆ.


ಹಿಂದೆ ಹೆಂಡತಿಗೆ ಕಿರುಕಳ ನೀಡುತ್ತಿರುವ ಸಂಬoಧ ಗ್ರಾಮೀಣ ಠಾಣೆಯಲ್ಲಿ ಮೂರು ಬಾರಿ ಎಚ್ಚರಿಕೆ ನೀಡಿ ಕಳುಹಿಸಿದ ಉದಾಹರಣೆಗೆ ಇದೆ. ಈತ ಹೋಮ್ ಗಾರ್ಡ್ ಕೆಲಸದಿಂದ ಕಳೆದ ಒಂದು ತಿಂಗಳಿನಿoದ ರಜೆಯಲ್ಲಿರುವ ಬಗ್ಗೆ ನಗರ ಠಾಣೆಯ ಪಿಎಸೈ ಹನುಮಂತಪ್ಪ ಕೂಡಗುಂಟಿ ತಿಳಿಸಿದ್ದಾರೆ.


ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version