ಇಳಿಮುಖವಾದ ಕರೊನಾ
ಕುಮಟಾ, ಹೊನ್ನಾವರದಲ್ಲಿ ಇಂದು ನಿರಾಳ:
ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಕರೊನಾ ಸಂಖ್ಯೆ ಇಳಿಮುಖವಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ 22 ಕೇಸ್ ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13,372ಕ್ಕೆ ಏರಿಕೆಯಾಗಿದೆ. ಉಳಿದಂತೆ ಕಾರವಾರ 2, ಸಿದ್ದಾಪುರ 4, ಯಲ್ಲಾಪುರ 1,ಮುಂಡಗೋಡ 4, ಹಳಿಯಾಳದಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ. 304 ಸಕ್ರೀಯ ಪ್ರಕರಣಗಳಿವೆ.
ಶಿರಸಿಯಲ್ಲಿ 5 ಮಂದಿಗೆ ಕೋವಿಡ್
ಶಿರಸಿ: ತಾಲೂಕಿನಲ್ಲಿ ಶುಕ್ರವಾರ ಐವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, 5 ಮಂದಿ ಗುಣಮುಖರಾಗಿದ್ದಾರೆ. ಇಂದು ವಾನಳ್ಳಿ ಬಿಲ್ಲುಗದ್ದೆಯಲ್ಲಿ 1, ಓಣಿಕೇರಿ ಹೆಗಡೆಕಟ್ಟಾದಲ್ಲಿ 2, ಗೌಡಳ್ಳಿಯಲ್ಲಿ 1, ನಗರದ ಅಶ್ವಿನಿ ಸರ್ಕಲ್ನಲ್ಲಿ 1 ಕೇಸ್ ದೃಢವಾಗಿದೆ.
ಕುಮಟಾ, ಹೊನ್ನಾವರದಲ್ಲಿ ಇಂದು ನಿರಾಳ:
ಕುಮಟಾ, ಹೊನ್ನಾವರದಲ್ಲಿ ತಾಲೂಕಿನಲ್ಲಿ ಇಂದು ಯಾವುದೇ ಕರೊನಾ ಕೇಸ್ ದಾಖಲಾಗಿಲ್ಲ. ಇದೇ ರೀತಿ ಕೇಸ್ ಗಳು ಶೂನ್ಯ ಸಂಖ್ಯೆಗೆ ಇಳಿಯಲಿ ಎಂದು ಸಾರ್ವಜನಿಕರು ಪ್ರಾರ್ಥಿಸುತ್ತಿದ್ದಾರೆ.
ಅಂಕೋಲಾದಲ್ಲಿoದು ಮತ್ತೆ ಕೊವಿಡ್ ಬಿಡುವು
ಅಂಕೋಲಾ : ತಾಲೂಕಿನಲ್ಲಿ ಶುಕ್ರವಾರ ಯಾವುದೇ ಹೊಸ ಕೊವಿಡ್ ಪ್ರಕರಣಯಿಲ್ಲದೇ ಮತ್ತೆ ಬಿಡುವು ನೀಡಿದಂತಾಗಿದೆ. ಪಂಚಾಯತ ವ್ಯವಸ್ಥೆಯಲ್ಲಿ ತಾಲೂಕನ್ನು ಪ್ರತಿನಿಧಿಸಿ ಜಿಲ್ಲೆಯ ಮಹತ್ವದ ಹುದ್ದೆ ಪಡೆದಿದ್ದ ಮಾಜಿ ಜನ ಪ್ರತಿನಿಧಿಯೊರ್ವನಲ್ಲಿಯೂ ನಿನ್ನೆ ಪಾಸಿಟಿವ್ ಲಕ್ಷಣಗಳು ಕಂಡು ಬಂದಿದ್ದು, ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ತಪಾಸಣೆಗೆ ಒಳಪಟ್ಟಿದ್ದರು ಎನ್ನಲಾಗಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್, & ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.