ಉತ್ತರ ಕನ್ನಡದಲ್ಲಿ ಇಂದು 31 ಕೇಸ್

30 ಮಂದಿ ಗುಣಮುಖರಾಗಿ ಬಿಡುಗಡೆ
ಜಿಲ್ಲೆಯಲ್ಲಿ ಒಂದು ಸಾವು

[sliders_pack id=”1487″]

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 31 ಕರೊನಾ ಕೇಸ್ ದಾಖಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13,503ಕ್ಕೆ ಏರಿಕೆಯಾಗಿದೆ. 194 ಸಕ್ರೀಯ ಪ್ರಕರಣಗಳಿವೆ. ಕಾರವಾರ 6, ಭಟ್ಕಳ 5, ಸಿದ್ದಾಪುರ, ಯಲ್ಲಾಪುರ, ಜೋಯ್ಡಾದಲ್ಲಿ ತಲಾ ಒಂದು ಕೇಸ್ ಕಾಣಿಸಿಕೊಂಡಿದೆ. ಮುಂಡಗೋಡದಲ್ಲಿ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ.

ಇಂದು 30 ಜನರು ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅಂಕೋಲಾ 1, ಕುಮಟಾ 5, ಹೊನ್ನಾವರ 1, ಶಿರಸಿ 4, ಯಲ್ಲಾಪುರ 3, ಹಳಿಯಾಳದಲ್ಲಿ 16 ಮಂದಿ ಬಿಡುಗಡೆಯಾಗಿದ್ದಾರೆ. ಇದೇ ವೇಳೆ, ಇಂದು ಹಳಿಯಾಳದಲ್ಲಿ ಒಬ್ಬರು ಕರೊನಾದಿಂದ ಸಾವನ್ನಪ್ಪಿದ್ದಾರೆ.

ಕುಮಟಾದಲ್ಲಿ ಆರು ಕೇಸ್:

ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 6 ಕರೋನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಹಿರೇಗುತ್ತಿಯಲ್ಲಿ 4 ಪ್ರಕರಣ ಸೇರಿದಂತೆ ಕಾಗಲ್ ಹಾಗೂ ಅಳ್ವೆಕೋಡಿಯಲ್ಲಿ ತಲಾ ಒಂದೊAದು ಕೇಸ್ ಪತ್ತೆಯಾಗಿದೆ. ಹಿರೇಗುತ್ತಿಯ 65 ವರ್ಷದ ವೃದ್ಧ, 48 ವರ್ಷದ ಇಬ್ಬರು ಪುರುಷರು, 83 ವರ್ಷದ ವೃದ್ಧ, ಕಾಗಲ್‌ನ 22 ವರ್ಷದ ಯುವಕ ಮತ್ತು ಅಳ್ವೆಕೋಡಿಯ 53 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ. ಇಂದು 6 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 19011 ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ ಇಂದು ಯಾವುದೇ ಕೇಸ್ ಇಲ್ಲ

ಹೊನ್ನಾವರ ತಾಲೂಕಿನ ಒಂದು ವಾರದಿಂದ ಕರೊನಾ ಆತಂಕ ಕಡಿಮೆಯಾಗುತ್ತಿದೆ. ಇಂದೂ ಕೂಡಾ ಯಾವುದೇ ಪ್ರಕರಣ ತಾಲೂಕಿನಲ್ಲಿ ಕಂಡುಬoದಿಲ್ಲ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version