ಕಳ್ಳನನ್ನು ಹಿಡಿದ ಶ್ವಾನ: ಕಳುವು ಮಾಡಿದ್ದ ವಸ್ತುಗಳು ಜಪ್ತಿ

ಶಿರಸಿ: ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನೋರ್ವ ಪೋಲೀಸ್ ಶ್ವಾನಕ್ಕೆ ಸಿಕ್ಕಿಬಿದ್ದ ಪ್ರಸಂಗವೊಂದು ಶಿರಸಿ ನಗರದ ಮಾರುಕಟ್ಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕುಶಾಲ ಲೋಕೇಶ ಜೊಗಳೇಕರ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತನು ನವೆಂಬರ್ 13 ರಂದು ಕಸ್ತೂರಬಾ ನಗರದ ಸುಲ್ತಾನ ಗಲ್ಲಿಯ ಶ್ವೇತಾ ಮಂಜುನಾಥ ಕೊರಚವರ ಎಂಬುವವರ ಮನೆಯ ಬಾಗಿಲು ಒಡೆದು ಮನೆಯ ಒಳಗಡೆ ಇದ್ದ ಗೋಲ್ಡ್ ಲಾಂಗ್ ನೆಕ್ಲೆಸ್, ತಾಳಿ ಸರ, ಬಂಗಾರದ ಉಂಗುರ. ಬೆಳ್ಳಿಯ ಕಾಲುಚೈನ್, ಕಿವಿಯೋಲೆ, ಹಾಗೂ 8 ಸಾವಿರ ನಗದನ್ನು ದೋಚಿಕೊಂಡು ಪರಾರಿಯಾಗಿದ್ದ ಎನ್ನಲಾಗಿದೆ.

ಒಟ್ಟು ಅಂದಾಜು 60,500 ರೂಪಾಯಿ ಮೌಲ್ಯದ ಬಂಗಾರ ಹಾಗೂ ನಗದನ್ನು ಕಳ್ಳತನಮಾಡಿ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಹಿಡಿಯಲು ಶಿರಸಿ ಪೋಲೀಸರು ಕಾರವಾರದಿಂದ ಶ್ವಾನದಳವನ್ನು ಕರೆಸಿದ್ದರು. ಜಿಲ್ಲಾ ಶ್ವಾನದಳ ಸ್ನೂಪಿ ಎಂಬ ಶ್ವಾನವು ಕಳ್ಳತನವಾದ ಸ್ಥಳವನ್ನು ಪರಿಶೀಲಿಸಿ ಅಲ್ಲೇ ಸಮೀಪದಲ್ಲಿದ್ದ ಆರೋಪಿಯನ್ನು ಪತ್ತೆ ಹಚ್ಚುವ ಮೂಲಕ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಆರೋಪಿತನಾದ ಕುಶಾಲ್ ಈತ ನಗರದ ಚಿಕನ್ ಅಂಗಡಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬಂಧಿತ ಆರೋಪಿಯಿಂದ 64,400 ರೂ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version