Uttara Kannada
Trending

ಉತ್ತರಕನ್ನಡದಲ್ಲಿ ಇಂದು 33 ಕರೊನಾ ಕೇಸ್

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು ಮೂರು ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಅಜ್ಜಿಹಕ್ಕಲ್, ಬಾಡ ಮತ್ತು ಕತಗಾಲ್‌ನಲ್ಲಿ ತಲಾ ಒಂದೊOದು ಪ್ರಕರಣ ಪತ್ತೆಯಾಗಿದೆ. ಅಜ್ಜಿಹಕ್ಕಲ್‌ನ 30 ವರ್ಷದ ಮಹಿಳೆ, ಕತಗಾಲ್‌ದ 32 ವರ್ಷದ ಪುರುಷ, ಬಾಡದ 59 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಇಂದು 3 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೊಂಕಿತರ ಸಂಖ್ಯೆ 1917 ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ ಐದು ಕೇಸ್:

ಹೊನ್ನಾವರ: ತಾಲೂಕಿನಲ್ಲಿ ಇಂದು 5 ಜನರಲ್ಲಿ ಕರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಪಟ್ಟಣದ ಕಿಂತಲಕೇರಿಯ 21 ವರ್ಷದಮಹಿಳೆ, ಜೋಗಮಟದ 65 ವರ್ಷದ ಮಹಿಳೆ, ಗ್ರಾಮೀಣ ಭಾಗವಾದ ಕಡತೋಕಾದ 20 ವರ್ಷದ ಯುವಕ, ಬೆರಂಕಿಯ 23 ವರ್ಷದ ಯುವಕ, ಮಾಗೋಡಿನ 20 ವರ್ಷದ ಯುವಕ ಸೇರಿ ಇಂದು 5 ಜನರಲ್ಲಿ ಪಾಸಿಟಿವ್ ಕಂಡುಬoದಿದೆ.

ಶಿರಸಿಯಲ್ಲಿ 13 ಮಂದಿಗೆ ಪಾಸಿಟಿವ್

ಶಿರಸಿ: ತಾಲೂಕಿನಲ್ಲಿ ಶುಕ್ರವಾರ 13 ಕೊರೊನಾ ಕೇಸ್ ಪತ್ತೆಯಾಗಿದೆ. ಇಂದು ಶ್ರೀನಗರದಲ್ಲಿ 1, ಕಳವೆಯಲ್ಲಿ 1, ಗಣೇಶ ನಗರದಲ್ಲಿ 4, ಕಸ್ತೂರ ಬಾ ನಗರದಲ್ಲಿ 2, ಶಾಂತಿ ನಗರದಲ್ಲಿ 1 ವಾನಳ್ಳಿಯಲ್ಲಿ 1, ನವನಗರದಲ್ಲಿ 1, ಯಕ್ಕಂಬಿಯಲ್ಲಿ 1, ದುಂಡಶಿ ನಗರದಲ್ಲಿ 1 ಕೇಸ್ ದೃಢಪಟ್ಟಿದೆ.

ಯಲ್ಲಾಪುರದಲ್ಲಿ ಯಾವುದೇ ಕೇಸ್ ಇಲ್ಲ:

ಯಲ್ಲಾಪುರ: ತಾಲೂಕಿನಲ್ಲಿ ಇಂದು ಯಾವೊಂದು ಕೊರೊನಾ ಕೇಸ್ ಪತ್ತೆಯಾಗಿಲ್ಲ.ಇಂದು ತಾಲೂಕಾ ಆಸ್ಪತ್ರೆ, ಕಳಚೆ, ನಂದೊಳ್ಳಿ ಹಾಗೂ ಚವತ್ತಿ ಸೇರಿದಂತೆ 87 ಜನರಿಗೆ ತಪಾಸಣೆ ನಡೆಸಲಾಗಿತ್ತು.

ಜಿಲ್ಲೆಯಲ್ಲಿ 33 ಕರೊನಾ ಕೇಸ್ ದಾಖಲು

ಕಾರವಾರ:

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 33 ಕರೊನಾ ಕೇಸ್ ದಾಖಲಾಗಿದೆ. 13,573ಕ್ಕೆ ಏರಿಕೆಯಾಗಿದೆ.
ಭಟ್ಕಳ 0, ಸಿದ್ದಾಪುರ 1, ಯಲ್ಲಾಪುರ 0, ಮುಂಡಗೋಡ 0, ಹಳಿಯಾಳ 1, ಜೋಯ್ಡಾ 0 ಪ್ರಕರಣ ದಾಖಲಾಗಿದೆ. ಇದೇ ವೇಳೆ ಇಂದು ಒಟ್ಟು 21 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ

Back to top button