ಉತ್ತರಕನ್ನಡದಲ್ಲಿ 37 ಕರೊನಾ ಕೇಸ್: 1 ಸಾವು

ಕುಮಟಾ: ತಾಲೂಕಿನಲ್ಲಿ ಇಂದು 1 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ಗೋಕರ್ಣದ 20 ವರ್ಷದ ಯುವತಿಗೆ ಕರೊನಾ ಪಾಸಿಟಿವ್ ಬಂದಿದ್ದು, ಇಂದು 1 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,923 ಕ್ಕೆ ಏರಿಕೆಯಾಗಿದೆ.

ಹೊನ್ನಾವರ : ತಾಲೂಕಿನಲ್ಲಿ ಇಂದು ಎರಡು ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದ್ದು, ಎರಡೂ ಪ್ರಕರಣ ಗ್ರಾಮೀಣ ಭಾಗದಲ್ಲೇ ಪತ್ತೆಯಾಗಿದೆ. ಗ್ರಾಮೀಭ ಭಾಗವಾದ ಖರ್ವಾದ 46 ವರ್ಷದ ಪುರುಷ. ನವಿಲಗೋಣದ 38 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂರು ಜನರು ಬಿಡುಗಡೆಯಾಗಿದ್ದಾರೆ. ಮನೆಯಲ್ಲಿ 14 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅಂಕೋಲಾದಲ್ಲಿಂದು 2 ಕೊವಿಡ್ ಪ್ರಕರಣಗಳಿಲ್ಲಾ : ಸಕ್ರಿಯ 22

ಅಂಕೋಲಾ : ತಾಲೂಕಿನಲ್ಲಿ ಸೋಮವಾರ ಯಾವುದೇ ಕೊವಿಡ್ ಕೇಸ್‍ಗಳು ಪತ್ತೆಯಾಗಿಲ್ಲಾ. ತಾಲೂಕಿನ ವಿವಿಧೆಡೆಯಿಂದ 18 ರ್ಯಾಟ್ ಮತ್ತು 177 ಆರ್‍ಟಿಪಿಸಿಆರ್ ಸೇರಿದಂತೆ ಒಟ್ಟೂ 195 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಹೋಂ ಐಸೋಲೇಶನ್‍ನಲ್ಲಿರುವ 17 ಮಂದಿ ಸಹಿತ ಒಟ್ಟೂ 22 ಪ್ರಕರಣಗಳು ಸಕ್ರಿಯವಾಗಿದೆ. ಸೋಂಕು ಮುಕ್ತರಾದ ನಾಲ್ವರನ್ನು ಬಿಡುಗಡೆಗೊಳಿಸಲಾಗಿದೆ.

ಶಿರಸಿಯಲ್ಲಿಂದು 6 ಕೇಸ್ ದೃಢ

ಶಿರಸಿ: ತಾಲೂಕಿನಲ್ಲಿ ಸೋಮವಾರ 6 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.
ಇಂದು ನಗರದ ಅಯ್ಯಪ್ಪ ನಗರದಲ್ಲಿ 1, ಕೆಇಬಿ ಕಾಲೋನಿಯಲ್ಲಿ 1, ಅಶೋಕ ನಗರದಲ್ಲಿ 2, ಅಂಬಾಗಿರಿಯಲ್ಲಿ 1, ಮಾರಿಕಾಂಬಾ ನಗರದಲ್ಲಿ ಒಂದು ಕೇಸ್ ದೃಢವಾಗಿದೆ.

ಜಿಲ್ಲೆಯಲ್ಲಿ 37 ಕರೊನಾ ಕೇಸ್:

ಉತ್ತರ ಕನ್ನಡದಲ್ಲಿ ಇಂದು ಒಟ್ಟು 37 ಕೊರೊನಾ ಪ್ರಕರಣಗಳು ದಾಖಲಾಗಿದೆ. ಇದೇ ವೇಳಸ 18 ಜನರು ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ‌ ಬಿಡುಗಡೆಯಾಗಿದ್ದಾರೆ. ಕಾರವಾರ 4, ಭಟ್ಕಳ 3, ಸಿದ್ದಾಪುರ 3, ಮುಂಡಗೋಡ 3, ಹಳಿಯಾಳ ‌ಕೇಸ್ ಕಾಣಿಸಿಕೊಂಡಿದೆ.‌ಕಾರವಾರದಲ್ಲಿ ಒಂದು ಸಾವಾಗಿದೆ.

ವಿಸ್ಮಯ ನ್ಯೂಸ್ ಯೋಗೇಶ್ ಮಡಿವಾಳ ಕುಮಟಾ, ಶ್ರೀಧರ್ ನಾಯ್ಕ ಹೊನ್ನಾವರ, ವಿಲಾಸ ನಾಯಕ ಅಂಕೋಲಾ

Exit mobile version