Uttara Kannada
Trending

ರಸ್ತೆ ನಿಯಮ ಪಾಲಿಸದ ಸವಾರರಿಗೆ ಯಮಪಾಶ!

ಶಿರಸಿ: ರಸ್ತೆ ನಿಯಮ ಪಾಲಿಸದ ಸವಾರರಿಗೆ ಇಂದು ಯಮಪಾಶ ಬಂದು ಅಪ್ಪಳಿಸಿತ್ತು. ಅರೇ ಇದೇನಿದು ಅಂತ ಗಾಬರಿಯಾಗಬೇಡಿ.! ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ರಸ್ತೆ ನಿಯಮ ಪಾಲಿಸದೇ ಹೆಲ್ಮೆಟ್ ಧರಿಸದ ಸವಾರರಿಗೆ ಯಮನೇ ಕುದ್ದು ಬಂದು ಯಮಪಾಶವನ್ನ ಹಾಕಿ ಎಳೆದೊಯ್ಯಲು ಸಿದ್ದತೆ ನಡೆಸಿದ್ದ.!

ಈ ವೇಳೆ ಪೊಲೀಸರು ಸವಾರನಿಗೆ ಹೆಲ್ಮೆಟ್ ತಂದು ನೀಡಿದಾಗ ಯಮ ಆತನನ್ನು ಬಿಟ್ಟು ಹೋಗುತ್ತಾನೆ. ಜನರಲ್ಲಿ ಸಂಚಾರ ಸುರಕ್ಷತೆ ಜಾಗೃತಿಗಾಗಿ ಶಿರಸಿ ನಗರ ಪೊಲೀಸರು ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸಿದರು.

ಹೆಲ್ಮೆಟ್ ರಹಿತ ಬೈಕ್ ಸವಾರರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿರಸಿ ಪೋಲಿಸರು ಇಂದು ವಿನೂತನ ರೀತಿಯಲ್ಲಿ ಅಭಿಯಾನ ನಡೆಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ವಿಸ್ಮಯ ನ್ಯೂಸ್ ,ಶಿರಸಿ

Related Articles

Back to top button