
ಭಟ್ಕಳ: ಗೆಳೆಯರೊಂದಿಗೆ ಹೊನ್ನಾವರ ಹೋಗಿ ಬರುತ್ತೇನೆ ಎಂದಿದ್ದ ಗ್ರಾಮಲೆಕ್ಕಾಧಿಕಾರಿಯೊಬ್ಬರು ಮನೆಗೆ ಮರಳದೆ ನಾಪತ್ತೆಯಾದ ಘಟನೆ ಭಟ್ಕಳದಲ್ಲಿ ನಡೆದಿದೆ. ಈ ಸಂಬAಧ ಅವರ ಪತ್ನಿ ಮುರ್ಡೇಶ್ವರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೂಲತಃ ಬೆಳಗಾವಿಯ ಸಹ್ಯಾದ್ರಿನಗರದ ನಿವಾಸಿ, ಪ್ರಸ್ತುತ ಭಟ್ಕಳ ತಾಲೂಕಿನ ಮುರ್ಡೇಶ್ವರದ ದಿವಗೇರಿಯಲ್ಲಿ ವಾಸಿಸುತ್ತಿರುವ, ಬೈಲೂರು ಗ್ರಾ.ಪಂ ಲೆಕ್ಕಾಧಿಕಾರಿ ಶೇಖರ ಜ್ಯೋತಿಬಾ ಕಾಲೇಕರ(32) ನಾಪತ್ತೆಯಾದ ವ್ಯಕ್ತಿ.
ಇವರು ಗುರುವಾರ ಗೆಳೆಯರೊಂದಿಗೆ ಹೊನ್ನಾವರ ಹೋಗಿ ಬರುತ್ತೇನೆ ಎಂದು ತೆರಳಿದ್ದರು. ನಂತರ ರಾತ್ರಿಯೂ ಕರೆ ಮಾಡಿ ನಾನು ರಾತ್ರಿ 9.30ರೊಳಗೆ ಮನೆಗೆ ಬರುತ್ತೇನೆ, ನನ್ನ ಮೊಬೈಲ್ ಚಾರ್ಜ್ ಇಲ್ಲ ಎಂದು ಹೇಳಿದ್ದರು. ನಂತರ ಈ ವರೆಗೂ ಕರೆ ಮಾಡಿಲ್ಲ. ಅವರ ಫೋನ್ ಸ್ವಿಚ್ ಆಫ್ ಆಗಿದೆ. ಈವರಿಗೆ ಕಿಡ್ನಿ ಸಮಸ್ಯೆ ಇದ್ದು ಕಳೆದ 2 ವರ್ಷದ ಹಿಂದೆ ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಹೋಗಿ ಬರುತ್ತಿದ್ದರು. ಅಲ್ಲದೆ ಬೆನ್ನು ನೋವಿನಿಂದ ಬಳಲುತ್ತಿದ್ದರು ಎಂದು ಅವರ ಪತ್ನಿ ಜ್ಯೋತಿ ಶೇಖರ ದೂರು ದಾಖಲಿಸಿದ್ದಾರೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ
[sliders_pack id=”1487″]ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ರೆಡ್ ಅಲರ್ಟ್ ಹಿನ್ನಲೆ; ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
- ಮಂದಾರಾ ಎಲೈಟ್ಸ್ ರೀಲ್ಸ್ ಮೇಕಿಂಗ್ ಕಾಂಪಿಟೇಷನ್: 15 ಸಾವಿರ ನಗದು ಗೆಲ್ಲುವ ಸುವರ್ಣಾವಕಾಶ
- ಬಸ್ ಕೆಳಗೆ ಸಿಕ್ಕಿಹಾಕಿಕೊಂಡಿದ್ದ ದನ: ಎರಡು ತಾಸು ಬಳಿಕ ಹೊರಟ ಬಸ್
- ತೋಟದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಆಯತಪ್ಪಿ ಬಾವಿಯೊಳಗೆ ಬಿದ್ದು ಮೃತಪಟ್ಟ ಯುವತಿ
- ದೊಡ್ಡ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ : ಅನ್ನಸಂತರ್ಪಣೆ.