Important
Trending

ಹೊನ್ನಾವರದ ಪ್ರಸಿದ್ಧ ಅಂಗಡಿಯೊಂದರಲ್ಲಿ ಬೆಂಕಿ ಅನಾಹುತ: ಅಪಾರ ಹಾನಿ

ಹೊನ್ನಾವರ : ತಾಲೂಕಿನ ಶರಾವತಿ ಸರ್ಕಲ್ ಹತ್ತಿರದ ಕೆಡಿಸಿಸಿ ಬ್ಯಾಂಕ್ ಮುಂಭಾಗದಲ್ಲಿ ಇರುವ ಗಣಪತಿ ಪ್ಲೆಕ್ಸ್ ಪ್ರಿಂಟರ್ ನಲ್ಲಿ ರಾತ್ರಿ ಅಗ್ನಿ ದುರಂತ ಸಂಭವಿಸಿದೆ .
ಈ ಅಗ್ನಿ ಅವಘಡದಿಂದಾಗಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತುಗಳು ಸುಟ್ಟು ಭಸ್ಮವಾದ ಬಗ್ಗೆ ವರದಿಯಾಗಿದೆ.

ಹರಸಾಹಸ ಪಟ್ಟು ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಸ್ಥಳಕ್ಕೆ ಹೊನ್ನಾವರ ಪಿ.ಎಸ್.ಐ ಶಶಿಕುಮಾರ್, ಕ್ರೈಂ ಪಿ.ಎಸ್.ಐ ಸಾವಿತ್ರಿ ನಾಯಕ, ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಭೇಟಿನೀಡಿದ್ದಾರೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ, ಹೊನ್ನಾವರ

Back to top button