Info
Trending

ಉತ್ತರಕನ್ನಡದಲ್ಲಿ 13 ಕರೊನಾ‌ ಕೇಸ್: 13 ಮಂದಿ ಗುಣಮುಖ

ಕಾರವಾರ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಇಂದು ಒಟ್ಟು 13 ಕೇಸ್ ದಾಖಲಾಗಿದೆ. ಕಾರವಾರ 1,ಭಟ್ಕಳ 1,ಯಲ್ಲಾಪುರ 3, ಶಿರಸಿ 1ಕೇಸ್ ದೃಢಪಟ್ಟಿದೆ.ಇಂದು 13 ಕೇಸ್ ದಾಖಲಾದ ಬೆನ್ನಲ್ಲೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13,884ಕ್ಕೆ ಏರಿಕೆಯಾಗಿದೆ.

ಇಂದು ಜಿಲ್ಲೆಯ ವಿವಿಧ ತಾಲೂಕಿನಿಂದ ಒಟ್ಟು 13 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರ 3, ಶಿರಸಿ , ಸಿದ್ದಾಪುರ 2, ಮುಂಡಗೋಡ 2 ಸೇರಿ ಒಟ್ಟು 13 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ಕುಮಟಾದಲ್ಲಿ ಎರಡು ಕೇಸ್:

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 2 ಕರೋನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಕೊನಳ್ಳಿ ಮತ್ತು ರಾಮನಗರದಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ. ಕೊನಳ್ಳಿಯ 60 ವರ್ಷದ ಪುರುಷನಿಗೆ ಹಾಗೂ ರಾಮನಗರದ 32 ವರ್ಷದ ಪುರುಷನಿಗೆ ಸೋಂಕು ತಗುಲಿದ್ದು, ಇಂದು 2 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1956 ಕ್ಕೆ ಏರಿಕೆಯಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಇದನ್ನೂ ಓದಿ:ಪ್ರಮುಖ ಸುದ್ದಿಗಳು

Back to top button