ಉತ್ತರಕನ್ನಡದಲ್ಲಿ 21 ಕೋವಿಡ್ ಕೇಸ್

ಕುಮಟಾ: ಕಳೆದ ಹಲವು ದಿನಗಳ ಬಳಿಕ ಕುಮಟಾ ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 5 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ವನ್ನಳ್ಳಿ, ವಕ್ಕನಳ್ಳಿ, ಗಾಂಧಿನಗರ ಭಾಗದಲ್ಲಿ ಇಂದು ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ವನ್ನಳ್ಳಿಯ 38 ವರ್ಷದ ಮಹಿಳೆ, ವನ್ನಳ್ಳಿಯ 11 ವರ್ಷದ ಬಾಲಕಿ, ವಕ್ಕನಳ್ಳಿಯ 41 ವರ್ಷದ ಪುರುಷ, ಗಾಂಧಿನಗರದ 26 ವರ್ಷದ ಯುವತಿ ಹಾಗೂ ಕುಮಟಾದ 20 ವರ್ಷದ ಯುವತಿಗೆ ಸೋಂಕು ತಗುಲಿದೆ. ಇಂದು 5 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1970 ಕ್ಕೆ ಏರಿಕೆಯಾಗಿದೆ.

ಅಂಕೋಲಾದಲ್ಲಿ ಶೂನ್ಯ ಪ್ರಕರಣ

ಅಂಕೋಲಾದಲ್ಲಿ ಇಂದು ಕೋವಿಡ್ ಶೂನ್ಯ ಪ್ರಕರಣ
ಅಂಕೋಲಾ : ತಾಲೂಕಿನಲ್ಲಿ ಇಂದು ಯಾವುದೇ ಹೊಸ ಕೋವಿಡ್ ಕೇಸ್‍ಗಳು ಪತ್ತೆಯಾಗದೆ ಶೂನ್ಯ ಪ್ರಕರಣ ದಾಖಲಾಗಿದೆ. ಈ ಹಿಂದಿನ ಸೋಂಕಿತರ ಪೈಕಿ ಗುಣಮುಖರಾದ ಈರ್ವರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್‍ನಲ್ಲಿರುವ 7 ಮಂದಿ ಸಹಿತ ಒಟ್ಟೂ 13 ಪ್ರಕರಣಗಳು ಸಕ್ರಿಯವಾಗಿದೆ. 5 ರ್ಯಾಟ್ ಮತ್ತು 10 ಆರ್‍ಟಿಪಿಸಿಆರ್ ಸಹಿತ ಒಟ್ಟೂ 15 ಸ್ವ್ಯಾಬ್ ಟೆಸ್ಟ ನಡೆಸಲಾಗಿದೆ.

ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ

ಶಿರಸಿಯಲ್ಲಿಂದು ಮೂರು ಕರೊನಾ

ಶಿರಸಿ: ತಾಲೂಕಿನಲ್ಲಿ ಶನಿವಾರ ಮೂವರಲ್ಲಿ ಕೊರೊನಾ ದೃಢಪಟ್ಟಿದ್ದು, ಇಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು ನಗರದ ಹುಬ್ಬಳ್ಳಿ ರಸ್ತೆಯಲ್ಲಿ 2, ಉಂಚಳ್ಳಿಯಲ್ಲಿ 1 ಕೇಸ್ ಪಾಸಿಟಿವ್ ಬಂದಿದೆ. ಈವರೆಗೆ 1595 ಮಂದಿಯಲ್ಲಿ ಕೊರೊನಾ ದೃಢವಾಗಿದ್ದು, 1564 ಮಂದಿಗುಣಮುಖರಾಗಿದ್ದಾರೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 21 ಕರೊನಾ ಕೇಸ್ ಕಂಡುಬಂದಿದೆ. ಕಾರವಾರ 9, ಜೋಯ್ಡಾ 1, ಸಿದ್ದಾಪುರ 1, ಯಲ್ಲಾಪುರ 1, ಹೊನ್ನಾವರ 1 ಕೇಸ್ ದಾಖಲಾಗಿದೆ.

ವಿಸ್ಮಯ ನ್ಯೂಸ್ ಕಾರವಾರ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Exit mobile version