ಕರೊನಾ: ಇದರಲ್ಲಿ ರಾಜ್ಯಕ್ಕೆ ಉತ್ತರಕನ್ನಡವೇ ಪ್ರಥಮ

ಕಾರವಾರ: ರಾಜ್ಯದಲ್ಲೇ ಅತಿಕಡಿಮೆ ಕರೊನಾ ಸಾವಿನ ಪ್ರಮಾಣ ಉತ್ತರಕನ್ನಡ ಜಿಲ್ಲೆಯಲ್ಲಿ ದಾಖಲಾಗಿದೆ. ಒಟ್ಟು 30 ಜಿಲ್ಲೆಯಗಳ ಏಳುದಿನ ಅಂಕಿ-ಅಂಶವನ್ನು ಪಡೆದ ರಾಜ್ಯ ಆರೋಗ್ಯ ಇಲಾಖೆ, ಈ ಮಾಹಿತಿಯನ್ನು ಪ್ರಕಟಿಸಿದೆ. ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ 0.0 ರಷ್ಟು ಸಾವಿನ ಪ್ರಮಾಣ ದಾಖಲಾಗಿದೆ, ದಕ್ಷಿಣ ಕನ್ನಡದಲ್ಲಿ ಅತಿಹೆಚ್ಚು ಸಾವಿನ ಪ್ರಮಾಣ ಕಂಡುಬಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 20 ಕರೊನಾ ಕೇಸ್ ದಾಖಲಾಗಿದೆ. ಇದೇ ವೇಳೆ‌ ಇಂದು ಜಿಲ್ಲೆಯಲ್ಲಿ ಎಂಟು ಜನರು ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಕರೊನಾ ಕುರಿತ‌ ತಾಲೂಕಾವಾರು ವಿವರ ಕೆಳಗಿನ‌ ಲಿಸ್ಟ್‌ನಲ್ಲಿದೆ.

ಕುಮಟಾದಲ್ಲಿ ಐದು ಪಾಸಿಟಿವ್:

ಕುಮಟಾ ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 5 ಕರೊನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ. ತಾಲೂಕಿನ ವಿವೇಕನಗರ, ಹೊಲನಗದ್ದೆ, ಮೂರೂರ್ ಮತ್ತು ಮಂಗೋಡ್ಲ್ ಭಾಗದಲ್ಲಿ ಕರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ವಿವೇಕನಗರದ 54 ವರ್ಷದ ಪುರುಷ, ಹೊಲನಗದ್ದೆಯ 54 ವರ್ಷದ ಮಹಿಳೆ, ಮೂರೂರಿನ 64 ವರ್ಷದ ಪುರುಷ, 30 ವರ್ಷದ ಮಹಿಳೆ ಹಾಗೂ ಮಂಗೋಡ್ಲದ 35 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಇಂದು 5 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1976 ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ ಇಬ್ಬರಿಗೆ ಸೋಂಕು:

ಇದೇ ವೇಳೆ, ಹೊನ್ನಾವರ ತಾಲೂಕಿನಲ್ಲಿ ಇಂದು ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಕಾಸರಕೋಡ ಟೊಂಕಾದ 18 ವರ್ಷದ ಯುವಕ, ಹೆಬ್ಬಾನಕೇರಿಯ 20 ವರ್ಷದ ಯುವತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 2 ಜನರು ಡಿಸ್ಚಾರ್ಜ್ ಆಗಿದ್ದಾರೆ. ವಿವಿದ ಆಸ್ಪತ್ರೆಯಲ್ಲಿ 2 ಜನರು ಮನೆಯಲ್ಲಿ 14 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿರಸಿಯಲ್ಲಿ 4 ಕೇಸ್ ದೃಢ

ಶಿರಸಿ: ತಾಲೂಕಿನಲ್ಲಿ ಸೋಮವಾರ ನಾಲ್ಕು ಕೊರೊನಾ ಕೇಸ್ ದೃಢಪಟ್ಟಿದ್ದು, ನಾಲ್ವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇಂದು ಉಂಚಳ್ಳಿಯಲ್ಲಿ 3 ಕೇಸ್, ರಾಮನಬೈಲಿನಲ್ಲಿ 1 ಕೇಸ್ ದೃಢಪಟ್ಟಿದೆ. ಈವರೆಗೆ 1600 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, 1568 ಮಂದಿ ಗುಣಮುಖಗೊಂಡಿದ್ದಾರೆ.

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ

Exit mobile version