Follow Us On

WhatsApp Group
Focus News
Trending

ವಿವಾಹಿತ ಮಹಿಳೆಯ ಅಶ್ಲೀಲ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಹಂಚಿಕೆ: 24 ಗಂಟೆಯಲ್ಲಿ ಆರೋಪಿ ಬಂಧನ

ಬೆoಗಳೂರಿನಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು
ಸಾಮಾಜಿಕ ಜಾಲತಾಣದಲ್ಲಿ ವಿವಾಹಿತ ಮಹಿಳೆಯ ಫೋಟೋ, ವಿಡಿಯೋ ಹರಿಬಿಟ್ಟಿದ್ದ

ಮುಂಡಗೋಡ: ಸಮಾಜಿಕ ಜಾಲತಾಣಗಳಲ್ಲಿ ಹಾಕಿದ ಪೋಟೊಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವವರ ಸಂಖ್ಯೆ ಇತ್ತಿಚಿಗೆ ಹೆಚ್ಚುತ್ತಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವವ ಸಂಖ್ಯೆ ಕೂಡಾ ಏರುತ್ತಿದೆ. ಹೌದು, ಜಿಲ್ಲೆಯಲ್ಲೂ ಇಂತಹ ಪ್ರಕರಣ ಇದೀಗ ಬೆಳಕಿಗೆ ಬರುತ್ತಿದೆ. ವಿವಾಹಿತ ಮಹಿಳೆಯೊಬ್ಬಳ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ಫೇಸ್ ಬುಕ್, ವಾಟ್ಸಪ್, ಇನ್ ಸ್ಟ್ರಾಗ್ರಾಮ ಜಾಲತಾಣದಲ್ಲಿ ಹರಿಬಿಟ್ಟಿದ್ದ ಯುವಕನನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಆಲಳ್ಳಿ ಗ್ರಾಮದ ವಿವಾಹಿತ ಮಹಿಳೆ ಪೊಲೀಸರಿಗೆ ಯುಕನೊಬ್ಬ ತನ್ನ ಫೋಟೋ, ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕುರಿತು ದೂರು ನೀಡಿದ್ದಳು. ದೂರು ನೀಡಿದ 24 ಗಂಟೆಯಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಯುವಕನನ್ನು ಬೆಂಗಳೂರಿನ ಕಂಪನಿಯೊoದರಲ್ಲಿ ಕೆಲಸ ಮಾಡುತ್ತಿದ್ದ . ಆರೋಪಿ ಜೀವನಕುಮಾರ ಧನಂಜಯ(21) ನನ್ನು ಬೆಂಗಳೂರನಿoದಲೇ ಬಂಧಿಸಿ ಕರೆ ತಂದಿರುವ ಮುಂಡಗೋಡ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರಪಡಿಸಿದ್ದಾರೆ.

ಉತ್ತರಕನ್ನಡ ಎಸ್ಪಿ ಶಿವ ಪ್ರಕಾಶ ದೇವರಾಜು, ಐ.ಪಿ.ಎಸ್ ಹೆಚ್ಚುವರಿ ಪೊಲೀಸ ಅಧೀಕ್ಷಕ ಎಸ್. ಬದರಿನಾಥ ಮತ್ತು ಶಿರಸಿ ಡಿಎಸ್ಪಿ ರವಿ ನಾಯ್ಕ್ ಮಾರ್ಗದರ್ಶನದಲ್ಲಿ ಮುಂಡಗೋಡ ಪಿಐ ಪ್ರಭುಗೌಡ ಡಿ.ಕೆ, ಪಿಎಸ್ಆಯ್ ಬಸವರಾಜ ಮಬನೂರ, ಮೋಹಿನಿ ಶೆಟ್ಟಿ ಹಾಗೂ ಸಿಬ್ಬಂದಿಯವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button