Follow Us On

WhatsApp Group
Important
Trending

Teacher Suicide: ಕ್ಷುಲ್ಲಕ ಕಾರಣಕ್ಕೆ ಮನನೊಂದು ಶಿಕ್ಷಕಿ ಸಾವಿಗೆ ಶರಣು

ಸಿದ್ದಾಪುರ: ಕ್ಷುಲ್ಲಕ ಕಾರಣಕ್ಕೆ ಶಿಕ್ಷಕಿಯೊಬ್ಬಳು ಮನನೊಂದು ಆತ್ಮಹತ್ಯೆ (Teacher Suicide) ಮಾಡಿಕೊಂಡ ಘಟನೆ ಕೆಳಗಿನ ಸರಕುಳಿಯಲ್ಲಿ ನಡೆದಿದೆ. ವಿವಾಹದ ನಂತರ ದಾಂಪತ್ಯ ಜೀವನ ಸರಿ ಬಾರದೆ ಗಂಡನಿoದ ಡೈವೋರ್ಸ್ ಪಡೆದುಕೊಂಡು ತಾಯಿಯ ಮನೆಯಲ್ಲಿ ವಾಸವಿದ್ದು , ಕಿಬ್ಬಳ್ಳಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ನೇತ್ರಾವತಿ ಪುಟ್ಟ ಗೌಡ (41) ಮೃತಪಟ್ಟ (Teacher )ಶಿಕ್ಷಕಿ.

ಡೈವೋರ್ಸ್ (divorce) ಆದಾಗಿನಿಂದ ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ . ಈ ಮದ್ಯೆ ತನ್ನ ತಾಯಿಯ ಅರೋಗ್ಯ ಸರಿ ಇಲ್ಲದೆ ಚಿಕಿತ್ಸೆ ಪಡೆಯುತ್ತಿದ್ದು ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಮನೆಯ ಮೇಲ್ಚಾವಣಿ ಗಳಕ್ಕೆ ಚೂಡಿದಾರದ ವೇಲಿನಿಂದ ನೇಣು ಬಿಗಿದುಕೊಂಡು (Teacher ) ಸಾವಿಗೆ ಶರಣಾಗಿದ್ದಾಳೆ. ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಕoಡ ಸಿದ್ದಾಪುರ

Back to top button