ಉತ್ತರಕನ್ನಡದಲ್ಲಿ 17 ಕರೊನಾ ಕೇಸ್ ದೃಢ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 17 ಕರೊನಾ ಕೇಸ್ ದಾಖಲಾಗಿದೆ. ಶಿರಸಿ 4, ಯಲ್ಲಾಪುರ 3, ಜೋಯ್ಡಾ 1, ಕಾರವಾರ 5, ಕುಮಟಾ ಮೂರು ಸೇರಿ ಒಟ್ಟು 17 ಏಸ್ ಪತ್ತೆಯಾಗಿದೆ.

ಕುಮಟಾ ತಾಲೂಕಾ ವ್ಯಾಪ್ತಿಯಲ್ಲಿ ಒಂದು ಒಟ್ಟು 3 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಉಪ್ಪಿನಪಟ್ಟಣ, ಮೂರೂರ್ ಮತ್ತು ವಿವೇಕನಗರ ಭಾಗದಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ. ಉಪ್ಪಿನಪಟ್ಟಣದ 22 ವರ್ಷದ ಯುವಕ, ಮೂರೂರಿನ 37 ವರ್ಷದ ಯುವಕ ಹಾಗೂ ವಿವೇಕನಗರದ 56 ವರ್ಷದ ಪುರುಷನಲ್ಲಿ ಕರೋನಾ ಪಾಸಿಟಿವ್ ಬಂದಿದೆ.

ಇಂದು 3 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1981 ಕ್ಕೆ ಏರಿಕೆಯಾಗಿದೆ.ಇದೇ ವೇಳೆ ಇಂದು ಹೊನ್ನಾವರ ತಾಲೂಕಿನಲ್ಲಿ ಯಾವುದೇ ಕೇಸ್ ಕಂಡುಬಂದಿಲ್ಲ.

ಅಂಕೋಲಾದಲ್ಲಿಂದು ಮತ್ತೆ ಕೋವಿಡ್ ಶೂನ್ಯ

ಪ್ರಕರಣ : ಸಕ್ರಿಯ ಪ್ರಕರಣಗಳು ಇಳಿಮುಖ
ಅಂಕೋಲಾ : ತಾಲೂಕಿನಲ್ಲಿ ಶುಕ್ರವಾರವು ಯಾವುದೇ ಹೊಸ ಕೋವಿಡ್ ಕೇಸ್‍ಗಳು ದಾಖಲಾಗದೆ ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಸಂಬಂಧಿತ ಇಲಾಖೆ ಹಾಗೂ ಸಾರ್ವಜನಿಕರ ನೆಮ್ಮದಿಗೆ ಕಾರಣವಾಗುತ್ತಿದೆ. ಸೋಂಕು ಮಕ್ತರಾದ 5 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್ ನಲ್ಲಿರುವ 3 ಮಂದಿ ಸಹಿತ ಒಟ್ಟೂ 4 ಪ್ರಕರಣಗಳು ಸಕ್ರಿಯವಾಗಿದೆ. 15 ರ್ಯಾಟ್ ಮತ್ತು 98 ಆರ್‍ಟಿಪಿಸಿಆರ್ ಸೇರಿ 113 ಸ್ವ್ಯಾಬ್ ಟೆಸ್ಟ್ ನಡೆಸಲಾಗಿದೆ.

ಜಿಲ್ಲಾವಾರು ಕೋವಿಡ್ ವಿವರ

ವಿಸ್ಮಯ ನ್ಯೂಸ್ ಯೋಗೇಶ್ ಮಡಿವಾಳ ಕುಮಟಾ ಮತ್ತು ವಿಲಾಸ ನಾಯಕ ಅಂಕೋಲಾ

Exit mobile version