Follow Us On

WhatsApp Group
Focus News
Trending

ಸೋಡಾ ಬಾಟಲಿ& ಕಬ್ಬಿಣದ ರಾಡ್‌ನಿಂದ ಹಲ್ಲೆ: 12 ವರ್ಷಗಳ ನಂತರ ಸಿಕ್ಕಿಬಿದ್ದ ಆರೋಪಿ

ಶಿರಸಿ: ಸೋಡಾ ಬಾಟಲಿ ಹಾಗು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ ವ್ಯಕ್ತಿಯನ್ನು 12 ವರ್ಷಗಳ ನಂತರ ಬಂಧಿಸಿದ ಘಟನೆ ತಾಲೂಕಿನಲ್ಲಿ ನಡೆದಿದೆ. ಬರೊಬ್ಬರಿ 12 ವರ್ಷಗಳ ಹಿಂದೆ ಟಿಎಸ್‌ಎಸ್ ರಸ್ತೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಈ ಆರೋಪ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದ. ಹಲ್ಲೆಗೆ ಸೋಡಾ ಬಾಟಲಿ ಮತ್ತು ಕಬ್ಬಿಣ ರಾಡ್ ಬಳಸಿದ್ದ. ಈ ಸಂಬoಧ 12 ವರ್ಷಗಳ ಹಿಂದೆಯೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಲವು ಬಾರಿ ದಸ್ತಗಿರಿ ವಾರೆಂಟ್ ಹೊರಡಿಸಿದ್ದರೂ, ನ್ಯಾಯಾಲಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ.

ತನಿಖೆ ಆರಂಭಿಸಿದ್ದ ಪೊಲೀಸರು 12 ವರ್ಷಗಳ ಬಳಿಕ ಈಗ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ರಾಕೇಶ್ ಕೋಣಾರ ಎಂದು ಗುರುತಿಸಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button