ಉತ್ತರಕನ್ನಡ ಜಿಲ್ಲೆಯ ಇಂದಿನ ಕರೊನಾ ವಿವರ
ಹೊನ್ನಾವರ, ಕುಮಟಾ, ಶಿರಸಿಯಲ್ಲಿ ಎಷ್ಟು ಪಾಸಿಟಿವ್?
ವಿದ್ಯಾರ್ಥಿಗಳು ಹುಮ್ಮಸ್ಸಿನಿಂದಲೇ ಶಾಲೆಗಳಿಗೆ ಆಗಮಿಸುತ್ತಿದ್ದು ವಿದ್ಯಾಗಮಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ಆದರೆ ಶಾಲೆಗಳು ಪ್ರಾರಂಭವಾಗಿ ವಾರದೊಳಗೆ ಬರೋಬ್ಬರಿ 18 ಮಂದಿ ಶಿಕ್ಷಕರಲ್ಲಿ ಕರೊನಾ ಪಾಸಿಟಿವ್ ಪತ್ತೆಯಾಗಿರೋದು ಪಾಲಕರ ಆತಂಕಕ್ಕೆ ಕಾರಣವಾಗಿದೆ.
ರಾಜ್ಯ ಸರ್ಕಾರದ ಆದೇಶದಂತೆ ಜನವರಿ 1 ರಿಂದ ಉತ್ತರಕನ್ನಡ ಜಿಲ್ಲೆಯಲ್ಲೂ ಶಾಲೆಗಳು ಪ್ರಾರಂಭವಾಗಿವೆ. ಕೊರೊನಾ ಅಬ್ಬರದ ನಂತರ ಸಾಕಷ್ಟು ತಿಂಗಳ ಬಳಿಕ ಶಾಲೆಗಳು ತೆರೆದುಕೊಳ್ಳುತ್ತಿರುವ ಹಿನ್ನಲೆ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸರ್ಕಾರ ಮಾರ್ಗಸೂಚಿ ಹೊರಡಿಸಿತ್ತು. ಅದರಂತೆ ಜನವರಿ 1ರ ಪೂರ್ವದಲ್ಲೇ ಶಿಕ್ಷಕರುಗಳಿಗೆ ಕೋವಿಡ್ ಪರೀಕ್ಷೆಯನ್ನು ನಡೆಸಿದ್ದು ಇದರಲ್ಲಿ ಬಂದ ವರದಿ ಇದೀಗ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಚಿಂತೆಗೀಡು ಮಾಡಿದೆ.
ಕುಮಟಾದಲ್ಲಿ ಎರಡು, ಹೊನ್ನಾವರದಲ್ಲಿ ಎರಡು ಕೇಸ್:
ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 2 ಕರೊನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ. ತಾಲೂಕಿನ ಮೊರ್ಬಾದ 19 ವರ್ಷದ ಯುವತಿ ಹಾಗೂ ಕುಮಟಾದ 45 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಇಂದು 2 ಪ್ರಕರಣ ದಾಖಲಾಗಿದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 2,014 ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಹೊನ್ನಾವರ ತಾಲ್ಲೂಕಿನಲ್ಲಿಯೂ ಸಹ ಇಂದು ಎರಡು ಜನರಲ್ಲಿ ಕರೋನಾ ಪಾಸಿಟಿವ್ ಬಂದಿದೆ. ಹೊನ್ನಾವರ ತಾಲೂಕಿನ ಹಳದೀಪುರದ 18 ವರ್ಷದ ಯುವತಿ ಮತ್ತು ಹೊದ್ಕೆಶಿರೂರಿನ 55 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ ಓರ್ವರು ಗುಣಮುಖರಾಗಿದ್ದು, ಆಸ್ಪತ್ರೆಯಲ್ಲಿ ಒಬ್ಬರು ಹಾಗೂ ಮನೆಯಲ್ಲಿ 9 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿರಸಿಯಲ್ಲಿಂದು 4 ಮಂದಿಗೆ ಸೋಂಕು:
ಶಿರಸಿ: ತಾಲೂಕಿನಲ್ಲಿ ಶನಿವಾರ ನಾಲ್ಕು ಕೊರೊನಾ ಕೇಸ್ ದೃಢವಾಗಿದ್ದು, ಏಳು ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು ಹಾಡಲಗಿ, ತಾರೇಹಳ್ಳಿ, ಬಾಳೆಗದ್ದೆ, ಎಸಳೆಯಲ್ಲಿ ತಲಾ ಒಂದೊಂದು ಕೇಸ್ ಪಾಸಿಟಿವ್ ಬಂದಿದೆ. ಈವರೆಗೆ 1656 ಮಂದಿಯಲ್ಲಿ ಕೊರೊನಾ ದೃಢವಾಗಿದ್ದು, 1612 ಮಂದಿ ಗುಣಮುಖರಾಗಿದ್ದಾರೆ.
ಅಂಕೋಲಾದಲ್ಲಿಂದು 2 ಹೊಸ ಕೋವಿಡ್ ಕೇಸ್ : ಸಕ್ರಿಯ 8
ಅಂಕೋಲಾ : ತಾಲೂಕಿನಲ್ಲಿ ಶನಿವಾರ 2 ಹೊಸ ಕೋವಿಡ್ ಕೇಸ್ ದಾಖಲಾಗಿದೆ. ಬೊಬ್ರುವಾಡ ವ್ಯಾಪ್ತಿ ಯ 60 ಮತ್ತು 69ರ ವೃದ್ಧರಲ್ಲಿ ಸೋಂಕು ಲಕ್ಷಣಗಳು ಕಾಣಿಸಿಕೊಂಡಿದೆ. ಹೋಂ ಐಸೋಲೇಶನ್‍ನ ಲ್ಲಿರುವ 7 ಮಂದಿ ಸಹಿತ 8 ಸಕ್ರಿಯ ಪ್ರಕರಣಗಳು ಇವೆ. 5 ರ್ಯಾಟ್ ಮತ್ತು 168 ಆರ್‍ಟಿಪಿಸಿಆರ್ ಸೇರಿ 173 ಜನರ ಸ್ವ್ಯಾಬ್ ಟೆಸ್ಟ್ ನಡೆಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ