- ನದಿಭಾಗದ ಮಂಡದ ಮನೆ, ಕೋಗ್ರೆ ದೇವಸ್ಥಾನದಲ್ಲಿ ವಿಶೇಷ ಪೂಜೆ
- ಬೇಲೇಕೇರಿ ಮತ್ತು ಶಿರಕುಳಿಯಲ್ಲಿ ಅಯ್ಯಪ್ಪನ ಪೂಜೆ
- ಆರ್ಯಾದುರ್ಗಾ ದೇವಿಯ ಪಲ್ಲಕ್ಕಿ ಮೆರವಣಿಗೆ
ಅಂಕೋಲಾ : ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ಸಂಕ್ರಾಂತಿ ಹಬ್ಬವನ್ನು ವಿಶೇಷ ಪೂಜೆಯೊಂದಿಗೆ ಸಂಭ್ರಮ ದಿಂದ ಆಚರಿಸಲಾಯಿತು. ಕೋವಿಡ್ ಮಾರ್ಗ ಸೂಚಿ ಹಿನ್ನಲೆಯಲ್ಲಿ ಸರಳ ಆಚರಣೆಗೆ ಒತ್ತು ನೀಡಲಾಯಿತು. ನಾಗರಿಕರನೇಕರು ತಮ್ಮ ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತರಿಗೆ ಕುಸುರೆಳ್ಳು (ಸಂಕ್ರಾಂತಿ ಕಾಳು) ನೀಡಿ ಶುಭಾಶ ಯ ವಿನಿಮಯ ಮಾಡಿಕೊಂಡರು.
ಮಂಡದ ಮನೆ : ಎಂದೇ ಪ್ರಸಿದ್ಧವಾಗಿರುವ ಬೊಬ್ರುವಾಡ ಗ್ರಾಪಂ ವ್ಯಾಪ್ತಿಯ ನದಿಭಾಗದ ಮಾರಿಕಾಂಬಾ ದೇವಿ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಶ್ರೀ ದೇವಿಯನ್ನು ಹೂವು ಮತ್ತು ಆಭ ರಣ ತೊಡಿಸಿ ವಿಶೇಷವಾಗಿ ಅಲಂಕರಿಸಲಾಗಿತ್ತು. ಅನಾದಿ ಕಾಲದಿಂದಲ್ಲೂ ದಿ.ಶಿವಪ್ಪ ಮತ್ತು ಕುಟುಂಬದವರು ಪೂಜಿಸಿಕೊಂಡು ಬಂದಿದ್ದು, ಅವರ ಮಗ ಕುಪ್ಪಯ್ಯ ನಾಯ್ಕ ಪೂಜಾ ವಿಧಿವಿಧಾನ ನಡೆಸಿಕೊಟ್ಟರು. ಭಕ್ತರಿಗೆ ಹರಕೆ ಪ್ರಸಾದ ವಿತರಿಸಲಾಯಿತು. ಹಕ್ಕುದಾರರ ಮನೆಯಲ್ಲಿ ರಾತ್ರಿ ನಡೆಯುವ ಕೋಲಮಂಡಲದೊಂದಿಗೆ ಧಾರ್ಮಿಕ ಕಾರ್ಯಗಳು ಪೂರ್ಣಗೊಳ್ಳಲಿವೆ.
ದೇವಸ್ಥಾನ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಸುಧಾಕರ ಡಿ. ನಾಯ್ಕ, ಅಧ್ಯಕ್ಷ ರಾಜು ಡಿ.ನಾಯ್ಕ, ಉಪಾಧ್ಯಕ್ಷ ಶ್ರೀಧರ ಡಿ.ನಾಯ್ಕ, ಕಾರ್ಯದರ್ಶಿ ಸುಬ್ರಹ್ಮಣ್ಯ ಬಿ.ನಾಯ್ಕ, ಪ್ರಮುಖರಾದ ಚಂದ್ರಕಾಂತ ಯು.ನಾಯ್ಕ, ನಾಗೇಂದ್ರ ನಾಯ್ಕ, ರವಿ ನಾಯ್ಕ, ಶ್ರೀಧರ ನಾಯ್ಕ ಬೇಲೇಕೇರಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಊರ ನಾಗರಿಕರು ಮತ್ತು ಭಕ್ತಾಧಿಗಳು ಪಾಲ್ಗೊಂಡಿದ್ದರು.
ಆರ್ಯಾದುರ್ಗಾ ಸಂಸ್ಥಾನ : ದಿಂದ ಮಂಗಲ ವಾದ್ಯದೊಂದಿಗೆ ಹೊರಟ ಪಲ್ಲಕ್ಕಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ತಾಯಿ ಶಾಂತಾದುರ್ಗೆ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಾಸ್ಕರ ಕೇ. ನಾರ್ವೇಕರ್ ನೇತೃತ್ವದಲ್ಲಿ ನಡೆದ ಹರಕೆ ರೂಪದ ಸೇವೆಯಲ್ಲಿ ಹರಿಕಂತ್ರ ಸಮಾಜದ ಶ್ರೀಕಾಂತ ದುರ್ಗೇಕರ್ ಮತ್ತಿ ತರರು, ಸಹಕರಿಸಿದರು. ದೇವಸ್ಥಾನದ ಅರ್ಚಕರು, ಪ್ರಮುಖರು, ಭಕ್ತರು ಪಾಲ್ಗೊಂಡಿದ್ದರು.
ಬೇಲೇಕೇರಿ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಸ್ವಾಮಿ ಅಯ್ಯಪ್ಪನ ಆರಾಧನೆ ವಿಜ್ರಂಭಣೆಯಿಂದ ನಡೆಯಿತು. ದತ್ತಾತ್ರೇಯ ದೇವಸ್ಥಾನದ ಆವರಣದಲ್ಲಿ ಸ್ಥಳೀಯ ಮೀನುಗಾರ ಸಮಾಜದ ಹಿರಿಯರು, ಅಯ್ಯಪ್ಪ ವೃತಧಾರಿಗಳು ಮತ್ತು ಕುಟುಂಬ ಸದಸ್ಯರು, ಊರನಾಗರಿಕರು ವಿಶೇಷ ಪೂಜೆ ಸಲ್ಲಿಸಿದರು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸುವ ಮೂಲಕ ಉತ್ಸವದ ಮೆರಗು ಹೆಚ್ಚಿಸಿದರು.
ಶಿರಕುಳಿ : ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬಾಳೆಗುಳಿ ಅಂಚಿನ ಕೃಷ್ಣಾಪುರದ ಹತ್ತಿರ ಇರುವ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಸಂಕ್ರಾಂತಿ ನಿಮಿತ್ತ ಪ್ರತಿವರ್ಷದಂತೆ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿ ತ್ತು. ಗೋವಿಂದ ಗೌಡ, ದೀಪಕ ನಾಯ್ಕ ಮತ್ತಿತರ ಸ್ಥಳೀಯ ಪ್ರಮುಖರು, ಭಕ್ತಾಧಿಗಳು ಪಾಲ್ಗೊಂಡಿದ್ದರು.
ಕೋಗ್ರೆ : ಯ ಶ್ರೀ ಬೊಮ್ಮಯ್ಯ ದೇವಸ್ಥಾನದಲ್ಲಿ ಸಂಕ್ರಾಂತಿಯ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ನೂತನ ಶಿಲಾಮಯ ದೇಗುಲ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಜನವರಿ 20 ರಂದು ನಡೆಯಲಿರುವ ಪಾದುಕಾ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ದೇವಸ್ಥಾನ ನವೀಕರಣ ಸಮಿತಿ ಅಧ್ಯಕ್ಷ ದೇವಾನಂದ ಗಾಂವಕರ, ಕಾರ್ಯದರ್ಶಿ ಗುರುಪ್ರಸಾದ ಎನ್.ನಾಯಕ, ಸಹ ಕಾರ್ಯದರ್ಶಿ ನಾರಾಯಣ ನಾಯಕ ಶೀಳ್ಯ, ಕೋಶಾಧ್ಯಕ್ಷ ವೆಂಕಟರಾಯ ಎನ್.ನಾಯಕ, ಪ್ರಮುಖರಾದ ಹಮ್ಮಣ್ಣ ನಾಯಕ, ನಾರಾಯಣ ನಾಯಕ, ಗಣಪತಿ ನಾಯಕ, ವೆಂಕಟ್ರಮಣ ಗೌಡ, ಮೋಹನ ಗೌಡ, ಜಗದೀಶ ಆಗೇರ, ದುರ್ಗಪ್ಪ ಮಡಿವಾಳ, ಪ್ರಕಾಶ ನಾಯಕ, ಬೊಮ್ಮಯ್ಯ ನಾಯಕ, ರಾಜು ನಾಯಕ, ಕೀರಾ ಗೌಡ, ರಾಜೇಶ ನಾಯಕ, ಸಚಿನ ಗುನಗಾ, ನಾರಾಯಣ ಗೌಡ, ಗೊವಿಂದ್ರಾಯ ಗೌಡ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಆಡಳಿತ ಮಂಡಳಿಯ ಸದಸ್ಯರು, ಭಕ್ತಾಧಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ