ಅಂಕೋಲಾ ತಾಪಂ. ಕೆಡಿಪಿ ಸಭೆ: ಹಲವು ವಿಷಯಗಳ ಚರ್ಚೆ

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಎಂದ ಅಧ್ಯಕ್ಷೆ ಸುಜಾತಾ ಗಾಂವಕರ
ಕೋವಿಡ್ ಸಂಖ್ಯೆ ಹೆಚ್ಚಳ : ಆರೋಗ್ಯಾಧಿಕಾರಿ ಡಾ. ನಿತಿನ್ ಕಳವಳ
ಹಳೇ ಕಟ್ಟಡಕ್ಕೆ ಶೃಂಗಾರ ಬೇಕೇ : ಮಂಜುನಾಥ ನಾಯ್ಕ ಪ್ರಶ್ನೆ

ಅಂಕೋಲಾ : ತಾಲೂಕು ಪಂಚಾಯತ ಸಭಾಭನದಲ್ಲಿ ಶುಕ್ರವಾರ ತಾಪಂ. ಅಧ್ಯಕ್ಷೆ ಸುಜಾತಾ ಗಾಂವಕರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು. ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿ ತರಿದ್ದು, ಹಲವು ವಿಷಯಗಳ ಕುರಿತು ಚರ್ಚಿಸಿದರು.
ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಎಂದ ಅಧ್ಯಕ್ಷೆ ತಾಲೂಕಿನಲ್ಲಿ ವಿವಿಧ ರೀತಿಯ ಅಕ್ರಮ ಚಟು ವಟಿಕೆಗಳು ಜೋರಾಗಿ ನಡೆಯುತ್ತಿವೆ ಎಂದು ನೇರವಾಗಿ ಹೇಳಿದ ತಾಪಂ. ಅಧ್ಯಕ್ಷೆ ಸುಜಾತಾ ಗಾಂವಕರ ಸಂಬಂಧಿಸಿದ ಅಧಿಕಾರಿಗಳು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಖಡಕ್ಕಾಗಿಯೇ ಎಚ್ಚರಿಸಿದರು.

ಕೋವಿಡ್ ಸಂಖ್ಯೆ ಹೆಚ್ಚಳ : ತಾಲೂಕಿನಲ್ಲಿ ಕೊರೊನಾ ಆರ್ಭಟ ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿಯೇ ಮತ್ತೆ ಕೆಲ ಹೊಸ ಪ್ರಕರಣಗಳು ದಾಖಲಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ತಾಲೂಕಾ ಆರೋಗ್ಯಾ ಧಿಕಾರಿ ಡಾ. ನಿತಿನ್, ಮಾಸ್ಕ ಮರೆತ ಜನರು, ಎಲ್ಲೆಡೆಯೂ ಹೆಚ್ಚುತ್ತಿರುವ ಜನದಟ್ಟಣೆ, ಹೇಗೂ ಕೋವಿ ಡ್ ಲಸಿಕೆ ಬಂದಿದೆಯಲ್ಲಾ ಎಂಬ ಮನೋಭಾನೆಯಿಂದ ವರ್ತಿಸುತ್ತಿರುವ ಜನರಿಗೆ ಕೋವಿಡ್ ಸುರಕ್ಷಾ ಮಾರ್ಗ ಸೂಚಿಗಳನ್ನು ಪಾಲಿಸುವಂತೆ ಕರೆ ನೀಡಿದರು.

ಹಳೇ ಕಟ್ಟಡಕ್ಕೆ ಶೃಂಗಾರ ಬೇಕೇ : ಬೊಬ್ರುವಾಡ ಗ್ರಾ.ಪಂ. ವ್ಯಾಪ್ತಿಯ ಶೇಡಿಕುಳಿಯಲ್ಲಿ ಈ ಹಿಂದೆ ನಿರ್ಮಿಸಿದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ವಸತಿ ಕೇಂದ್ರದಲ್ಲಿ ಕಳೆದ 7 ವರ್ಷಗಳಿಂದ ಯಾರೂ ಕೂಡ ವಸತಿ ಮಾಡಿಲ್ಲಾ. ಈ ಕಟ್ಟಡಕ್ಕೆ ದುರಸ್ತಿ ಮತ್ತಿತರ ಹೆಸರಿನಲ್ಲಿ ಅನುದಾನದ ಒದಗಿಸಿ ಹಣ ಪೋಲು ಮಾಡಲಾಗುತ್ತಿದೆ. ಸ್ಥಳೀಯರ ವಿರೋಧದ ನಡುವೆಯೂ ಮತ್ತೆ ಹೊಸದಾಗಿ 6 ಲಕ್ಷ ರೂ. ವೆಚ್ಚದಲ್ಲಿ ಸುಣ್ಣಬಣ್ಣ ಬಳಿಯುವ ಕಾಮಗಾರಿ ಆರಂಭವಾಗಿದ್ದು, ಜನರಿಗೆ ಕಿಂಚಿತ್ತು ಉಪಯೋಗ ವಾಗದ ಈ ಹಳೇ ಕಟ್ಟಡಕ್ಕೆ ಶೃಂಗಾರ ಬೇಕೇ ಎಂದು ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ದತ್ತಾ ನಾಯ್ಕ ಪ್ರಶ್ನಿಸಿದರು.

ಪ್ರಶ್ನೆಗೆ ಉತ್ತರಿಸಿದ ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಮಹೇಂದ್ರ ನಾಯಕ, ಈಗಾಗಲೇ ಬಿ.ಎಸ್ಸಿ.ನರ್ಸಿಂಗ್ ಮುಗಿದವರನ್ನು ನೇಮಕಾತಿ ಮಾಡಲಾಗಿದ್ದು, ತರಬೇತಿಗಾಗಿ ಹುಬ್ಬಳ್ಳಿಯ ಕೆ.ಎಂ.ಸಿ. ಯಲ್ಲಿದ್ದಾರೆ ಅವರು ಬಂದ ನಂತರ ಅಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದರು. ಸಭೆಯಲ್ಲಿ ವಿವಿಧ ಇಲಾಖೆಗಳ ಕುಂದು ಕೊರತೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ತಾಪಂ.ಇಒ ಪಿ.ವೈ.ಸಾವಂತ, ಉಪಾಧ್ಯಕ್ಷೆ ತುಳಸಿ ಗೌಡ, ಸದಸ್ಯರಾದ ಶಾಂತಿ ಆಗೇರ, ಸಂಜೀವ ಕುಚಿನಾಡ ಬೇಲೇಕೇರಿ, ನಂದಾ ನಾಯ್ಕ, ಪ್ರಿಯಾ ನಾಯ್ಕ, ಬೀರಾ ಗೌಡ, ವಿಲ್ಸನ್ ಡಿಕೋಸ್ತಾ ಇತರ ರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version