Important
Trending

Dhareshwar Temple: ಪರಾಣ ಪ್ರಸಿದ್ಧ ಧಾರೇಶ್ವರದಲ್ಲಿ ಶಿವರಾತ್ರಿ ಸಡಗರ: ಧಾರಾನಾಥನ ದರ್ಶನ ಪಡೆದ ಅಪಾರ ಭಕ್ತರು

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಧಾರೇಶ್ವರ,,, ಐತಿಹಾಸಿಕವಾಗಿಯೂ ಪೌರಾಣಿಕವಾಗಿಯೂ ಮನ್ನಣೆ ಹೊಂದಿದೆ. ಆತ್ಮಲಿಂಗದ ಒಂದು ಭಾಗವಾದ ಈ ಧಾರೇಶ್ವರ ಲಿಂಗವು ತ್ರೇತಾಯುಗದ ಕಾಲದ್ದಾಗಿದೆ. ರಾವಣ ಆತ್ಮಲಿಂಗವನ್ನು ಚೂರು ಮಾಡಿದಾಗ ಗೋಕರ್ಣದಿಂದ ಧಾರೇಶ್ವರಕ್ಕೆ ಸಿಡಿದ ಒಂದು ಭಾಗವೇ ಧಾರಾನಾಥ ಲಿಂಗವಾಗಿದೆ. ಹೌದು, ಶಿವನ ಆತ್ಮಲಿಂಗವಿರುವ ಪಂಚಕ್ಷೇತ್ರಗಳಲ್ಲೊoದ ಧಾರೇಶ್ವರದ ಧಾರಾನಾಥನ ಸನ್ನಿಧಿಯಲ್ಲಿ ಶಿವರಾತ್ರಿ ಅತ್ಯಂತ ಸಡಗರ , ಸಂಭ್ರಮದಿoದ ನೆರವೇರಿತು.

ಮಹಾ ಶಿವರಾತ್ರಿಯ ವಿಶೇಷವಾಗಿ ಶ್ರೀ ದೇವರ ಸನ್ನಿದಾನಕ್ಕೆ ಮುಂಜಾನೆಯಿAದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಸರತಿ ಸಾಲಿನಲ್ಲಿ ನಿಂತು ಧಾರಾನಾಥನಿಗೆ ಸ್ವಹಸ್ತಗಳಿಂದ ಜಲಾಭಿಷೇಕ, ಪಂಚಾಮೃತಾಭಿಷೇಕ, ರುದ್ರಾಭಿಷೇಕ ಪೂಜೆ ಹಾಗೂ ಫಲಸಮರ್ಪಣೆ, ಮಂಗಳಾರತಿ ಸೇವೆ ಸಲ್ಲಿಸಿ ಕೃತಾರ್ಥರಾದರು.

ಈ ಸಂಬoಧ ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತನಾಡಿದ ದೇವಾಲಯದ ಪೂಜಾ ಸೇವಾ ಸಮಿತಿಯ ಅಧ್ಯಕ್ಷರಾದ ವಿ.ಕೆ ಭಟ್ ಅವರು, ಪಂಚಕ್ಷೇತ್ರಗಳಲ್ಲಿ ಒಂದಾದ ಶ್ರೀ ಧಾರಾನಾಥ ದೇವಾಲಯವು ಪುರಾಣ ಪ್ರಸಿದ್ದ ಕ್ಷೇತ್ರವಾಗಿದೆ. ರಾವನಣನು ಆತ್ಮಲಿಂಗವನ್ನು ಕಿತ್ತು ಎಸೆದಾಗ ಒಂದು ಭಾಗ ಧಾರೇಶ್ವರಲ್ಲಿ ಬಿದ್ದು ಭೂ ಸ್ಪರ್ಶವಾಗಿದ್ದರಿಂದ ಈ ಮಹಾ ಶಿವರಾತ್ರಿಯಂದು ಶಿವನು ಭೂಲೋಕ್ಕೆ ಬರುತ್ತಾನೆ ಎನ್ನುವ ಪ್ರತೀತಿ ಇರುವುದರಿಂದ ಶಿವ ಕ್ಷೇತ್ರವು ಎಲ್ಲಿ ಇದೆಯೋ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪೂಜೆಯನ್ನು ಸಲ್ಲಿಸುತ್ತಾರೆ ಎಂದರು.

ಶ್ರೀ ಧಾರಾನಾಥ ದೇವಾಲಯದ ಮೋಕ್ತೆಸರರಾದ ಎಲ್.ಎಮ್ ಪ್ರಭು ಅವರು ಮಾತನಾಡಿ, ಮಹಾ ಶಿವರಾತ್ರಿಯ ವಿಶೇಷವಾಗಿ ಶ್ರೀ ಧಾರಾನಾಥ ದೇವಾಲಯಕ್ಕೆ ಪ್ರತಿ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಮುಂಜಾನೆ 3:30 ಕ್ಕೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ರಾತ್ರಿ 10 ಘಂಟೆಯವರೆಗೂ ದರ್ಶನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬಂದAತಹ ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆ, ನೀರಿನ ವ್ಯವಸ್ಥೆ, ಪಾನಕದ ವ್ಯವಸ್ಥೆಯನ್ನು ಮಾಡಲಾಗಿದೆ. ಯಾವುದೇ ಭಕ್ತರಿಗೂ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಭಕ್ತರಾದ ಆನಂದ ಆಚಾರ್ಯ ಮಾತನಾಡಿ, ಪ್ರತಿ ವರ್ಷವೂ ಈ ಕ್ಷೇತ್ರಕ್ಕೆ ನಾವು ಬರುತ್ತೇವೆ. ಒಳ್ಳೆಯ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಪವಿತ್ರವಾದ ಈ ಮಹಾಶಿವರಾತ್ರಿಯ ದಿನ ಶಿವನ ದರ್ಶನ ಪಡೆದು ಅನುಗ್ರಹಕ್ಕೆ ಪಾತ್ರರಾಗಿ ಎಂದು ತಿಳಿಸುತ್ತಾ ಸಕಲ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟ ದೇವಾಲಯದ ಆಡಳಿತ ಮಂಡಳಿಯ ಕಾರ್ಯವೈಕರಿಯ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅಂತೆಯೆ ಕುಮಟಾದ ಕುಂಭೇಶ್ವರದಲ್ಲಿಯೂ ಕೂಡ ಮಹಾಶಿವರಾತ್ರಿಯಮದು ಜನಸಾಗರವೇ ಹರಿದು ಬಂದಿತ್ತು. ಭಕ್ತರು ದೇವರಿಗೆ ಪೂಜೆ ಹಾಗೂ ಫಲಸಮರ್ಪಣೆ, ಮಂಗಳಾರತಿ ಸೇವೆ ಸಲ್ಲಿಸಿ ಕೃತಾರ್ಥರಾದರು. ಒಟ್ಟಾರೆ ಶಿವರಾತ್ರಿಯಂದು ವಿಶ್ವದಾದ್ಯಂತ ಇರುವ ಶಿವನನ್ನು ಭಕ್ತರು ಭಕ್ತಿಯಿಂದ ಪೂಜಿಸಿ, ಪ್ರಾರ್ಥನೆ ಮತ್ತು ಮಂತ್ರಗಳನ್ನು ಪಠಿಸುವ ಮೂಲಕ, ಉಪವಾಸ, ಧ್ಯಾನ, ರಾತ್ರಿಯಿಡೀ ಜಾಗರಣೆ ಮಾಡುವ ಮೂಲಕ ತಮ್ಮ ಭಕ್ತಿಯನ್ನು ತೋರಿಸಿದ್ದಾರೆ.

ವಿಸ್ಮಯ ನ್ಯೂಸ್, ನಾಗೇಶ ದೀವಗಿ, ಕುಮಟಾ

Back to top button