ಕುಗ್ರಾಮದಿಂದ ಬಂದ ಹಾಲಕ್ಕಿ ಹುಡುಗನಿಗೆ ಡಾಕ್ಟರೇಟ್ ಗೌರವ: ಜರ್ಮನಿಯ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ

ಕುಮಟಾ: ತಾಲೂಕಿನ ಮಾವಳ್ಳಿಯಂತಹ ಕುಗ್ರಾಮದ, ಹಾಲಕ್ಕಿ ಸಮಾಜದ ಬಡ ಕೃಷಿಕರ ಕುಟುಂಬದಲ್ಲಿ ಜನಿಸಿದ ಮಹೇಶ ಮಂಜುನಾಥ ಗೌಡ ಅವರು, ತಮ್ಮ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಮತ್ತು ಪದವಿಯನ್ನು ಕುಮಟಾ ತಾಲೂಕಿನಲ್ಲಯೇ ಮುಗಿಸಿ, ಮಂಗಳೂರಿನ ವಿಶ್ವವಿದ್ಯಾಲಯದಲ್ಲಿ ಎಮ್.ಎಸ್.ಸಿ ಪದವಿಯನ್ನು ಪೂರ್ಣಗೊಳಿಸಿ ಹಾಗೂ ಪ್ರತ್ಯುನ್ನತ ಶಿಕ್ಷಣದಲ್ಲಿ ಪಿ.ಎಚ್.ಡಿ ಅಧ್ಯಯನ ಮಾಡಿ, ಮಂಗಳೂರು ವಿಶ್ವ ವಿದ್ಯಾಲಯದ 2020 ನೇ ವರ್ಷದ ಘಟಕೋತ್ಸವದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.

ಡಾ. ಮಹೇಶ ಮಂಜುನಾಥ ಗೌಡ ಮಾವಳ್ಳಿ ಇವರು ಈಗ ಜರ್ಮನಿಯಲ್ಲಿ ಪ್ರತ್ಯುನ್ನತ ವಿಜ್ಞಾನ ಸಂಸ್ಥೆಯಲ್ಲಿ ವ್ಯದ್ಯಕೀಯ ವಿಜ್ಞಾನಿಯಾಗಿ ಸೇವೆಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇವರು ನಡೆಸುತ್ತಿರುವ ವೃತ್ತಿಯಲ್ಲಿ ಇನ್ನೂ ಹೆಚ್ಚಿನ ಯಶಸ್ಸು ದೊರಕಲಿ ಎಂದು ಕುಟುಂಬಸ್ಥರು ಸಮಸ್ಥ ಹಾಲಕ್ಕಿ ಸಮಾಜ ಬಾಂಧವರು ಹಾಗೂ ಊರ ನಾಗರಿಕರು ಶುಭಹಾರೈಸಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

ಹತ್ತಾರು ಕ್ಷೇತ್ರದಲ್ಲಿ ಇದೆ ಉದ್ಯೋಗಾವಕಾಶ. ಗ್ಲೋಬಲ್ ಕನ್ಸಲ್ಟೆನ್ಸಿ ಸರ್ವೀಸಸ್, ಇಂಡಿಯಾ , 7TH, SSLC, PUC, DIPLOMA, ITI, D.ED, B.ED, ANY DEGREE, ANY PG, PH.D,ANY PROFESSIONAL COURSES ಆದವರು ಸಂಪರ್ಕಿಸಿ.ಖಾಸಗಿ, ರಾಜ್ಯ & ಕೇಂದ್ರ ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗಾವಕಾಶ . ಇಂದೇ ಸಂಪರ್ಕಿಸಿ: 9880179177ಪ್ರಧಾನ ಕಚೇರಿ ಶಿರಸಿ

Exit mobile version