Big News
Trending

ಹಪ್ತಾ ವಸೂಲಿ ಆರೋಪ: ಶ್ರೀ ರಾಮ ಸೇನೆ ರಾಜ್ಯ ಉಪಾಧ್ಯಕ್ಷ ಜಯಂತ ನಾಯ್ಕ ಬಂಧನ: ಘಟನೆ ಬಗ್ಗೆ ಪ್ರಮೋದ್ ಮುತಾಲಿಕ್ ಹೇಳಿದ್ದೇನು?

ನೇತ್ರಾಣಿ ಸ್ಕೂಬಾ ಡೈವಿಂಗ್ ಮಾಲೀಕನ ಬಳಿ ಹಪ್ತಾ ಕೇಸ್, ಬೆದರಿಕೆ ಪ್ರಕರಣ
ಬಂಧನದ ಬಗ್ಗೆ ಪ್ರಮೋದ ಮುತಾಲಿಕ್ ಹೇಳಿದ್ದೇನು?
ಶ್ರೀ ರಾಮ ಸೇನೆ ರಾಜ್ಯ ಉಪಾಧ್ಯಕ್ಷರ ಬಂಧನಕ್ಕೆ ಕಾರಣವೇನು?

ಭಟ್ಕಳ: ಶ್ರೀ ರಾಮ ಸೇನೆ ರಾಜ್ಯ ಉಪಾಧ್ಯಕ್ಷ ಜಯಂತ ನಾಯ್ಕ ವಿರುದ್ಧ ಮುರುಡೇಶ್ವರದಲ್ಲಿ ಕಳೆದ ತಿಂಗಳು ನೇತ್ರಾಣಿ ಸ್ಕೂಬಾ ಡೈವಿಂಗ್ ಮಾಲೀಕನ ಬಳಿ ಹಪ್ತಾ ವಸೂಲಿ ಕೇಳಿ, ಜೀವ ಬೆದರಿಕೆ ಹಾಕಿರುವ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬ0ಧ ಜಯಂತ್ ನಾಯ್ಕ ಅವರನ್ನು ಗುರುವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಮುರ್ಡೇಶ್ವರದ ನೇತ್ರಾಣಿ ಸ್ಕೂಬಾ ಡೈವಿಂಗ್ ನ ಮಾಲೀಕ ಗಣೇಶ ಹರಿಕಾಂತ ನೀಡಿದ ದೂರಿನ್ವಯ ಆರೋಪಿ ಶ್ರೀ ರಾಮ ಸೇನೆ ರಾಜ್ಯ ಉಪಾಧ್ಯಕ್ಷ ಜಯಂತ ಗೋಯ್ದ ನಾಯ್ಕ ಅವರನ್ನು ಬಂಧಿಸಲಾಗಿದೆ. ಜನವರಿ 2 ರಂದು ಮುರುಡೇಶ್ವರದ ಸಮುದ್ರ ತೀರದಲ್ಲಿರುವದನ್ನು ಗಮನಿಸಿದ ಆರೋಪಿ ನೇರವಾಗಿ ನನ್ನ ಬಳಿ ಬಂದು ಅವಾಚ್ಯ ಶಬ್ದದಿಂದ ಬೈದ್ದು ನಿಂದಿಸಿ ಸ್ಕೂಬಾ ಡೈವಿಂಗ್ ಹಾಗೂ ಉತ್ತರ ಕನ್ನಡ ಸಿರಿ ಉತ್ಪನ್ನಗಳ ಅಂಗಡಿಯನ್ನು ನಡೆಸಬೇಕಾದರೆ ತಿಂಗಳಿಗೆ ಹಪ್ತಾ ನೀಡಬೇಕೆಂದು ಬೆದರಿಕೆಯೊಡಿದ್ದಾನೆ. ಒಂದು ವೇಳೆ ಹಣ ನೀಡದಿದ್ದಲ್ಲಿ ಅಂಗಡಿ ಹಾಗೂ ಸ್ಕೂಬಾ ಡೈವಿಂಗ್ ಮುಚ್ಚಿಸುವುದಾಗಿ ಬೆದರಿಸಿ ನಿನ್ನ ವಿರುದ್ದ ಜಿಲ್ಲಾಧಿಕಾರಿಗೆ, ಪೊಲೀಸ್ ಇಲಾಖೆಗೆ ಹಾಗೂ ಸಂಬ0ದಪಟ್ಟ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿ ಮುಚ್ಚಿಸುತ್ತೇನೆಂದು ಹೇಳಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹಾಗೂ ಸ್ಕೂಬಾ ಡೈವಿಂಗಗೆ ತರಬೇತಿ ನೀಡುವ ತರಬೇತುದಾರರಿಗೂ ಜೀವ ಬೆದರಿಕೆ ಹಾಕಿದ ಕಾರಣ ಅವರು ಸಹ ಕೆಲಸಕ್ಕೆ ಬರುತ್ತಿಲ್ಲವಾಗಿದೆ. ಹಾಗೂ ಮುರುಡೇಶ್ವರಕ್ಕೆ ಬರುವ ಪ್ರವಾಸಿಗರಿಗೆ ಸ್ಕೂಬಾ ಡೈವಿಂಗ್ ಬಗ್ಗೆ ತಪ್ಪು ಮಾಹಿತಿ ನೀಡಿ ಪ್ರವಾಸಿಗರು ಸ್ಕೂಬಾ ಡೈವಿಂಗ್ ಗೆ ಬಾರದಂತೆ ಮಾಡಿ ಆರ್ಥಿಕವಾಗಿ ನಷ್ಟ ಅನುಭವಿಸುವಂತೆ ಆಗಿದೆ ಎಂದು ದೂರುದಾರ ದೂರುದಾರ ಗಣೇಶ ಹರಿಕಾಂತ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣವನ್ನು ಪಿಎಸ್‌ಐ ಸಿ.ಆರ್.ಪುಟ್ಟಸ್ವಾಮಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರದಂದು ರಾತ್ರಿ ಆರೋಪಿ ಜಯಂತ ನಾಯ್ಕ ನನ್ನು ಪೊಲೀಸರು ಬಂಧಿಸಿ ಕಾರವಾರದ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ.

ಬಂಧನದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮೋದ್ ಮುತಾಲಿಕ್: ಶ್ರೀ ರಾಮ ಸೇನೆ ರಾಜ್ಯಾಧ್ಯಕ್ಷ ಪ್ರತಿಕ್ರಿಯೆ ನೀಡಿದ್ದು ಜಯಂತ ನಾಯ್ಕ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ ಹರಿಕಾಂತ ಕೆಲವೊಂದು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವ ಬಗ್ಗೆ ದಾಖಲೆ ಕಲೆ ಹಾಕಿದ್ದರು. ಈ ಬಗ್ಗೆ ದೂರು ಸಹ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಯಂತ ನಾಯ್ಕ ಅವರನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಈ ದೂರು ನೀಡಿದ ಅವರನ್ನು ಬಂಧಿಸಿದ್ದಾರೆ. ವ್ಯವಸ್ಥಿತವಾಗಿ ಜಯಂತ ನಾಯ್ಕ ಅವರನ್ನು ಹತ್ತಿಕ್ಕುವ ಕೆಲಸವಾಗಿದೆ. ಇನ್ನು ಎರಡು ದಿನದಲ್ಲಿ ಭಟ್ಕಳಕ್ಕೆ ಬರಲಿದ್ದು, ಗಣೇಶ ಹರಿಕಾಂತ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಅವರನ್ನು ಬಂಧಿಸುವ0ತೆ ಒತ್ತಾಯಿಸಲಿದ್ದೇವೆ. ನಮ್ಮ ಬಳಿ ದಾಖಲೆ ಇದ್ದು, ಪೋಲಿಸರು ಗಣೇಶ ಹರಿಕಾಂತ ಅವರ ಒತ್ತಡದಕ್ಕೆ ಮಣಿದಂತೆ ಕಾಣುತ್ತದೆ ಎಂದು ಆರೋಪಿಸಿದ್ದಾರೆ.

” ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777,,,, INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777


ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button