Important
Trending

KFD Disease: ದಿನೇ ದಿನೇ ಹೆಚ್ಚುತ್ತಿದೆ ಮಂಗನ ಕಾಯಿಲೆ: ಇದೀಗ ಒಂದೇ ದಿನ ಮತ್ತೆ 11 ಜನರಲ್ಲಿ ಸೋಂಕು

ಆತಂಕ ಮೂಡಿಸಿದ ಜ್ವರ

ಸಿದ್ದಾಪುರ: ತಾಲೂಕಿನಲ್ಲಿ ದಿನೇ ದಿನೇ ಮಂಗನ ಕಾಯಿಲೆಯ ( KFD Disease) ಪ್ರಕರಣಗಳ ಸಂಖ್ಯೆ ಉಲ್ಬಣಗೊಳ್ಳುತ್ತಿದ್ದು, ಒಂದೇ ದಿನ 11 ಜನರಲ್ಲಿ ಈ ಮಂಗನ ಕಾಯಿಲೆಯು ಪತ್ತೆಯಾಗಿದೆ. ತಾಲೂಕಿನ ಜಿಡ್ಡಿಯ ನಾಲ್ವರು, ಹೆಗ್ಗೆಕೊಪ್ಪದಲ್ಲಿ ಇಬ್ಬರಿಗೆ, ಹಲಗೇರಿ, ಕೊಂಡ್ಲಿ, ಕೋರ್ಲಕೈ, ಹಸರಗೋಡ ಹಾಗೂ ಕಲ್ಲೂರಿನಲ್ಲಿ ತಲಾ ಒಬ್ಬರು ಸೇರಿದಂತೆ 11 ಪ್ರಕರಣಗಳು ವರದಿಯಾಗಿದೆ. ತಾಲೂಕಿನಲ್ಲಿ ಈ ವರೆಗೆ ಒಟ್ಟು 31 ಜನರಲ್ಲಿ ಮಂಗನ ಕಾಯಿಲೆ ದೃಢಪಟ್ಟಿದೆ. ಮಂಗನ ಕಾಯಿಲೆ ಇದೀಗ ತಾಲೂಕಿನಾದ್ಯಂತ ಹರಡುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.

ಇದೇ ವೇಳೆ, ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲುರಿನಲ್ಲಿ ಮಂಗನ ಕಾಯಲೆಯ ( KFD Disease) ಕುರಿತು ಜಾಗ್ರತಿ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ. ಆರೋಗ್ಯ ಇಲಾಖೆಯ ಸರಿತಾ ನಾಯ್ಕ ಡಾ ಅಶ್ವಿನಿ .ಸವಿತಾ ನಾಯ್ಕ್ ಉಪಸ್ಥಿತರಿದ್ದು ಮಂಗನ ಕಾಯಲೆಯ ರೋಗದ ಗಂಭೀರತೆ ಲಕ್ಷಣಗಳು, ಮುಂಜಾಗ್ರತೆ, ಚುಚ್ಚುಮದ್ದು ಗಮನಿಸಬೇಕಾದ ಅಂಶಗಳು, ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸಿಕೊಟ್ಟರು . ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬ್ಯೂರೋ ರಿಪೋರ್ಟ ವಿಸ್ಮಯ ನ್ಯೂಸ್

Back to top button