Focus News
Trending

ಅಂಕೋಲಾದಿಂದ ಸಾಗರಕ್ಕೆ ವರ್ಗಾವಣೆಗೊಂಡಿದ್ದ ಸಿಪಿಐ ಸಂತೋಷ ಶೆಟ್ಟಿ ತರೀಕೆರೆಗೆ: ಅಜ್ಮತ್ ಅಲಿ ಜಿ ಬದಲಿಗೆ ಶ್ರೀಕಾಂತ ತೋಟಗಿ ಅಂಕೋಲಾಕ್ಕೆ

ಅಂಕೋಲಾ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಬೇರೆ ಬೇರೆ ಠಾಣೆಗಳ ಒಟ್ಟೂ 42 ಪೊಲೀಸ್ ಇನ್ಸ ಪೆಕ್ಟರ್ (ಸಿವಿಲ್ )ರವರುಗಳ ವರ್ಗಾವಣೆಗೆ ಆದೇಶ ಮಾಡಲಾಗಿದ್ದು, ಆದೇಶ ಪಟ್ಟಿಯ 10ನೇ ಕ್ರಮಾಂಕದಲ್ಲಿರುವ, ಈ ಹಿಂದಿನ ಇಲಾಖಾ ಆದೇಶದಂತೆ ಅಂಕೋಲಾದಿಂದ ಸಾಗರ ಗ್ರಾಮಾಂತರ ವೃತ್ತಕ್ಕೆ ವರ್ಗಾವಣೆಗೊಂಡಿದ್ದ ಸಂತೋಷ ಶೆಟ್ಟಿ ಅವರನ್ನು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ನಗರ ಠಾಣೆಗೆ ವರ್ಗಾಯಿಸಲಾಗಿದೆ. ಇದೇ ವೇಳೆ ಅಂಕೋಲಾ ಠಾಣೆಗೆ ವರ್ಗಾವಣೆ ಆದೇಶದಲ್ಲಿದ್ದ ಆಜ್ಮತ್ ಅಲಿ ಜಿ ಅವರನ್ನು ರಾಯಚೂರು ಜಿಲ್ಲೆಯ ಸಿಗಂಧೂರಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. (ಕ್ರಮಾಂಕ 4 ರಲ್ಲಿರುವವರು ). ಈ ಹಿಂದಿನ ಇಲಾಖಾ ಆದೇಶದಂತೆ ಎ ಸಿ ಆರ್ ಬಿ ಗೆ ಸ್ಥಳ ನಿಯುಕ್ತಿ ಆದೇಶದಲ್ಲಿರುವ ಶ್ರೀಕಾಂತ ಎಫ್ ತೋಟಗಿ ಇವರನ್ನು ಲೋಕಸಭಾ ಚುನಾವಣಾ ಸಂಬಂಧಿತ ವರ್ಗಾವಣೆ ಪಟ್ಟಿಯ ( ಕ್ರಮಾಂಕ 3 ರಂತೆ ) ಅಂಕೋಲಾ ಪೊಲೀಸ್ ಠಾಣೆಗೆ ವರ್ಗಾಯಿಸಿ ಆದೇಶ ಮಾಡಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button