ಹೊನ್ನಾವರ: ತಾಲೂಕಿನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಓರ್ವ ಪರಾರಿಯಾಗಿದ್ದು, ಸಂಬಂಧ ಪೋಲಿಸ ಠಾಣೆಲ್ಲಿ ಪ್ರಕರಣ ದಾಖಲಾಗಿದೆ., ಆಟೋ ಚಾಲಕನಾಗಿರುವ ಭಟ್ಕಳ ತಾಲೂಕಿನ ಮದೀನಾ ಕಾಲೋನಿಯ 26 ವರ್ಷದ ಅಬ್ರಾರ್ ಇಬ್ರಾಹಿಂ ಶೇಖ್, ಕಾಸರಕೋಡ ಟೋಂಕಾ ಕ್ರಾಸ ನಿವಾಸಿ ಸಮೀರ ಮಹಮ್ಮದ್ ಅಲಿ ಪಂಡಿತ ಬಂಧಿತ ಆರೋಪಿಗಳು. ಮೂವರು ಆರೋಪಿಗಳು ಶುಕ್ರವಾರ ರಾತ್ರಿ 9 ಗಂಟೆಯ ಸುಮಾರಿಗೆ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾದ ಮಸೀದಿ ಹತ್ತಿರ ಶರಾವತಿ ನದಿ ತೀರದ ಬಳಿ ಗಾಂಜಾ ಮಾರುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಹೊನ್ನಾವರ ಠಾಣೆ ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿದ್ದಾರೆ. ಈ ವೇಳೆ ಓರ್ವ ಪರಾರಿಯಾಗಿದ್ದಾನೆ.
ಒಟ್ಟು 500 ಗ್ರಾಂ ತೂಕದ ಸುಮಾರು 10,000/- ರೂಪಾಯಿ ಮೌಲ್ಯದ 30 ಗಾಂಜಾ ಮಾದಕ ವಸ್ತು ಇರುವ ಪ್ಯಾಕೆಟ್ ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಇವರು ತಮ್ಮ ಬಳಿ ಇಟ್ಟುಕೊಂಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಹೊನ್ನಾವರ ಠಾಣೆ ಪೊಲೀಸರು ದಾಳಿ ನಡೆಸಿದಾಗ ಅಬ್ರಾರ್ ಇಬ್ರಾಹಿಂ ಶೇಖ್ ಮತ್ತು ಸಮೀರ ಮಹಮ್ಮದ್ ಅಲಿ ಪಂಡಿತ ಸೆರೆ ಸಿಕ್ಕಿದ್ದು ಒರ್ವ ಪರಾರಿಯಾಗಿದ್ದಾನೆ. ಹೊನ್ನಾವರ ಪೊಲೀಸರು 30 ಗಾಂಜಾ ಪ್ಯಾಕೆಟ್‌ಗಳು, ಒಂದು ತಕ್ಕಡಿ, ಗಾಂಜಾ ಸಾಗಾಟಕ್ಕೆ ಬಳಸಿದ ನೋಂದಣಿ ಸಂಖ್ಯೆ ಇರದ ಸುಮಾರು 25 ಸಾವಿರ ರೂ. ಮೌಲ್ಯದ ಸ್ಕೂಟರ್ ವಶಕ್ಕೆ ಪಡೆದಿದ್ದಾರೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಕಾನೂನು ಮತ್ತು ಸುವ್ಯವಸ್ಥೆಯ ಪಿಎಸ್‌ಐ ಅಶೋಕ ಕುಮಾರ ಜಿ. ಎಲ್, ಅವರು ತನಿಖೆ ತೀವ್ರ ಗೊಳಿಸಿದ್ದು ಪರಾರಿಯಾದವರ ಪತ್ತೆಗೆ ಬಲೆ ಬೀಸಿದ್ದಾರೆ.
” ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777,,,, INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ