Follow Us On

WhatsApp Group
Important
Trending

ಇಬ್ಬರು ಶಿಕ್ಷಕರು, ಓರ್ವ ಶಿಕ್ಷಕಿಯ ‘ಖಾಸಗಿ’ ವಿಡಿಯೋ ಲೀಕ್: ಶಾಲೆಯಲ್ಲಿ ನಡೆದಿದ್ದಾರೂ ಏನು? ಶಿಕ್ಷಣ ಇಲಾಖೆಯಿಂದ ತನಿಖೆಗೆ ಆದೇಶ

ಗುರುವಿನ ಸ್ಥಾನದಲ್ಲಿದ್ದ ಶಿಕ್ಷಕರೇ ಹೀಗೆ ಮಾಡಿದರೆ ಹೇಗೆ?
ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ ಹಲವು ಚರ್ಚೆ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಇಲಾಖೆ
ಕಠಿಣ ಕಾನೂನು ಕ್ರಮಕೈಗೊಳ್ಳುವ ಎಚ್ಚರಿಕೆ

ಯಲ್ಲಾಪುರ: ಶಾಲೆ ಅಂದ್ರೆ ಅದು ದೇವಾಲಯವಿದ್ದಂತೆ. ವಿದ್ಯಾರ್ಥಿಗಳ ಪಾಲಿಗಂತೂ ಶಾಲೆಯೇ ದೇವಾಲಯ ಎಂಬ ಮಾತಿದೆ. ಶಿಕ್ಷಕರೇ ವಿದ್ಯಾರ್ಥಿಗಳ ಪಾಲಿಗೆ ದೇವರು. ಆದ್ರೆ, ಬೇಲಿಯೇ ಎದ್ದು ಹೋಲ ಮೇಯ್ದರೆ ಹೇಗೆ? ಶಿಕ್ಷಕರ ಸ್ಥಾನದಲ್ಲಿದ್ದು ಗುರುವಾಗಿ ಉತ್ತಮ ಸಂಸ್ಕಾರ, ಸಂಸ್ಕøತಿ ಕಲಿಸಬೇಕಾದವರು, ಅನೈತಿಕತೆಯ ದಾರಿ ಹಿಡಿದರೆ, ಅನಾಹುತ ತಪ್ಪಿದ್ದಲ್ಲ. ತಾಲೂಕಿನ ಪ್ರೌಢಶಾಲೆಯೊಂದರ ಇಬ್ಬರು ಶಿಕ್ಷಕರು ಓರ್ವ ಮಹಿಳಾ ಶಿಕ್ಷಕಿ ಬಗ್ಗೆ ಕೆಲವೊಂದು ಸುದ್ದಿಗಳು ಈಗ ಎಲ್ಲೆಡೆ ಹರಿದಾಡುತ್ತಿದೆ.

ತಾಲೂಕಿನ ಶಾಲೆಯೊಂದರ ಇಬ್ಬರು ಶಿಕ್ಷಕರು ಮತ್ತು ಓರ್ವ ಶಿಕ್ಷಕಿಯ ಕೆಲವೊಂದು ಖಾಸಗಿ ರಹಸ್ಯಗಳು ಲೀಕ್ ಆಗಿದ್ದು, ಈ ಮೂವರ ಚಿತ್ರ ಈಗ ಎಲ್ಲೆಡೆ ಹರಿದಾಡುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲೂ ಚರ್ಚೆ ನಡೆಯುತ್ತಿದೆ.

ಶಾಲೆಯಲ್ಲಿಯೇ ಈ ಮೂವರು ಅನುಚಿತವಾಗಿ ನಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಇದನ್ನ ನೋಡಿದವರೇ ಬಹಿರಂಗ ಪಡೆಸಿದ್ದಾರೆ ಎಂಬ ಮಾತುಗಳು ಕೇಳಿಬುರುತ್ತಿದೆ. ಕೆಲವೊಂದು ಮೂಲಗಳ ಪ್ರಕಾರ ಶಿಕ್ಷಕಿಯ ಮೊಬೈಲ್ ಹಾಳಾಗಿತ್ತು. ಇದನ್ನು ರೀಪೇರಿಗೆಂದು ಕೊಟ್ಟಿದ್ದರು. ಈ ವೇಳೆ ಖಾಸಗಿ ಕ್ಲಿಪ್ ಗಳು ಲೀಕ್ ಆಗಿದೆ ಎನ್ನಲಾಗಿದೆ.

ಘಟನೆಯಿಂದ ತಮ್ಮೂರಿನ ಶಾಲೆಯ ಹೆಸರಿಗೆ ಧಕ್ಕೆ ಬಂದಿದೆ ಎಂದು ಗ್ರಾಮಸ್ಥರು ಚಿಂತಿಸುತ್ತಿದ್ದಾರೆ. ಅಲ್ಲದೆ, ಇಂಥ ಶಿಕ್ಷಕರನ್ನು ಇಟ್ಟುಕೊಂಡು ಶಾಲೆಗೆ ವಿದ್ಯಾರ್ಥಿಗಳನ್ನು ಕಳುಹಿಸುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ವಿಷಯ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಕೂಡಾ ಕಠಿಣ ಕಾನೂನು ಕ್ರಮಕ್ಕೆ ಸೂಚಿಸಿದ್ದಾರೆ ಎನ್ನಲಾಗಿದೆ.

ಈ ಮೂವರು ಶಿಕ್ಷಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎನ್ನುವ ಕೂಗು ಬಲಗೊಳ್ಳುತ್ತಲೇ ಶಿಕ್ಷಣ ಇಲಾಖೆಯೂ ತನಿಖೆಗೆ ಮುಂದಾಗಿದೆ. ಈ ಪ್ರಕರಣದ ತನಿಖೆಗಾಗಿ ಮೂವರು ಸದಸ್ಯರ ಕಮೀಟಿಯೊಂದನ್ನು ರಚಿಸಲಾಗಿದೆ. ಈ ಕಮಿಟಿಯಲ್ಲ ಇಬ್ಬರು ಪ್ರೌಢಶಾಲೆಯ ಕಮಿಟಿ ಸದಸ್ಯರು ಮತ್ತು ಒಬ್ಬ ಶಿಕ್ಷಣ ಇಲಾಖೆಯ ಅಧಿಕಾರಿ ಇರಲಿದ್ದಾರೆ. ಈ ಪ್ರಕರಣದ ತನಿಖೆಯನ್ನು ಇದೇ ಕಮಿಟಿ ಸಮಗ್ರವಾಗಿ ಮಾಡಲಿದ್ದು, ಪ್ರಕರಣ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಲಿದೆ. ಒಂದು ವೇಳೆ ಆರೋಪ ಸಾಬೀತಾದರೆ, ಕಠಿಣ ಕಾನೂನು ಕ್ರಮ ಕೈಗೊಳ್ಳಲು ಇಲಾಖೆ ನಿರ್ಧರಿಸಿದೆ.

ಒಟ್ನಲ್ಲಿ ಇಂಥ ಘಟನೆಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುವ ಶಿಕ್ಷಕರಿಗೂ ಕಳಂಕ ತರುವುದರಲ್ಲಿ ಸಂಶಯವಿಲ್ಲ. ಜೊತೆಗೆ ಶಾಲೆಯ ಘನತೆಗೂ ಕಪ್ಪುಚುಕ್ಕೆಯಾಗಿ ಪರಿಣಮಿಸುತ್ತದೆ. ಗುರುವಿನ ಸ್ಥಾನದಲ್ಲಿದ್ದ ಈ ಶಿಕ್ಷಕರು ಅಸಭ್ಯವಾಗಿ ನಡೆದುಕೊಂಡಿದ್ದೇ ಆದಲ್ಲಿ ಕಠಿಣ ಕಾನೂನು ಕ್ರಮಕೈಗೊಂಡು, ಬುದ್ಧಿ ಕಲಿಸಬೇಕು. ಮುಂದೆ ಇಂಥ ಪ್ರಕರಣಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

” ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777,,,, INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button