ಮಣ್ಕುಳಿಯ ಗ್ರಾಮಸ್ಥರಿಂದ ಹಿಂದೂ ರುದ್ರ ಭೂಮಿ ಪರಿಸರದಲ್ಲಿ ಸ್ವಚ್ಛತೆ ಕಾರ್ಯಕ್ರಮ

ಭಟ್ಕಳ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ತಾಲೂಕಿನ ಬೆಳಲಖಂಡ ರಸ್ತೆಯಲ್ಲಿರುವ ಮಣ್ಕುಳಿ ಹಿಂದೂ ರುದ್ರ ಭೂಮಿಯನ್ನು ಇಲ್ಲಿನ ಸುತ್ತ ಮುತ್ತಲಿನ ಗ್ರಾಮಸ್ಥರು ಸೇರಿ ರವಿವಾರದಂದು ಸ್ವಚ್ಛತೆ ಮಾಡುವುದರ ಮೂಲಕ ಶ್ರಮದಾನ ಮಾಡಿದರು.

ಸರ್ಕಾರ ಸ್ವಚ್ಛ ಭಾರತ ಅಭಿಯಾನ ಹೆಸರಿನಲ್ಲಿ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಾರ್ವಜನಿಕರ ಸಹಕಾರ ಇಲ್ಲದೆ ವಿಫಲವಾಗಿವೆ. ಆದರೆ ಸ್ವಯಂ ಪ್ರೇರಣೆಯಿಂದ ಇಲ್ಲಿನ ಮಣ್ಕುಳಿ, ಬೆಳಲಖಂಡ, ದೇವಡಿಗಕೇರಿಯ ಗ್ರಾಮಸ್ಥರು ಕೈಗೊಂಡ ಈ ಕಾರ್ಯ ಇತರರಿಗೆ ಮಾದರಿಯಾಗಬೇಕೆಂಬ ಉದ್ದೇಶದಿಂದ ಪ್ರತಿ ವರ್ಷವೂ ಇಲ್ಲಿನ ಬೆಳಲಖಂಡ ರಸ್ತೆಯಲ್ಲಿರುವ ಮಣ್ಕುಳಿ ಹಿಂದೂ ರುದ್ರ ಭೂಮಿಯನ್ನು ಸ್ವಚ್ಛತೆ ಮಾಡುತ್ತಾ ಬಂದಿದ್ದಾರೆ

ಅದರಂತೆ ಈ ವರ್ಷವೂ ಕೂಡ ಗ್ರಾಮಸ್ಥರು ಸರಿ ಸುಮಾರು 90-100 ಮಂದಿ ಸ್ಮಶಾನಕ್ಕಿಳಿದು ಶವ ಸಂಸ್ಕಾರದ ಸಂಧರ್ಭದಲ್ಲಿ ಶವದ ಮೇಲಿದ್ದ ಹೂವು ಇನ್ನಿತರ ವಸ್ತುಗಳನ್ನು ಒಂದೇ ಕಡೆ ಹಾಕದೆ ಅಲ್ಲಲ್ಲಿ ಎಸೆದು ಹೋಗಿದ್ದ ವಸ್ತುಗಳನ್ನು ಹಾಗೂ ರುದ್ರ ಭೂಮಿಯ ಸುತ್ತ ಮುತ್ತಲು ಬೆಳೆದ ಆಳೆತ್ತರದ ಗಿಡಗಂಟಿಗಳನ್ನು ಕತ್ತರಿಸಿ ಒಂದೆಡೆ ಸೇರಿಸಿ ಸ್ವಚ್ಛ ಮಾಡುವುದರ ಮೂಲಕ ಶ್ರಮದಾನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಣ್ಕುಳಿ,ಬೆಳಲಖಂಡ, ಮಣ್ಕುಳಿಯ ದೇವಡಿಗಕೇರಿ ಗ್ರಾಮಸ್ಥರು ಹಾಗೂ ಗ್ರಾಮದ ಮುಖ್ಯಸ್ಥರು ಶ್ರಮದಾನದಲ್ಲಿ ಭಾಗವಹಿಸಿದ್ದರು.

” ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version