Follow Us On

WhatsApp Group
Big News
Trending

ವಿಷ್ಣುಗುಪ್ತ ವಿಶ್ವವಿದ್ಯಾಪೀಠದಿಂದ ಹಾಲಕ್ಕಿ, ಮುಕ್ರಿ ಸಮಾಜಕ್ಕೆ ಎರಡು ವಿಶೇಷ ಗುರುಕುಲ: 2021-22ನೇ ಶೈಕ್ಷಣಿಕ ವರ್ಷಆರನೇತರಗತಿ ಆರಂಭ

ಗೋಕರ್ಣ: ಧರ್ಮಜಾಗೃತಿ ಹಾಗೂ ಭಾರತೀಯ ಸಂಸ್ಕøತಿಯ ಪುನರುತ್ಥಾನದ ಉದ್ದೇಶದಿಂದ ಶ್ರೀರಾಮಚಂದ್ರಾಪುರ ಮಠ ಆರಂಭಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಈ ವರ್ಷ ಹಾಲಕ್ಕಿ ಗುರುಕುಲ ಮತ್ತುಚಂದ್ರಗುಪ್ತಗುರುಕುಲ ಎರಡು ವಿಶಿಷ್ಟ ಗುರುಕುಲಗಳನ್ನು ಸಮಾಜಕ್ಕೆ ಸಮರ್ಪಿಸುತ್ತಿದೆ.

ವಿವಿವಿ ಈಗಾಗಲೇ ಆರಂಭಿಸಿರುವ ಗುರುಕುಲಗಳಿಗೆ ಸಮಾಜದಿಂದಅದ್ಭುತ ಸ್ಪಂದನೆ ವ್ಯಕ್ತವಾಗಿದ್ದು, ಬೆಳೆಯುವ ಕುಡಿಗಳ ಉತ್ಸಾಹದಿಂದ ಸ್ಫೂರ್ತಿ ಪಡೆದು ಹಾಲಕ್ಕಿ ಸಂಸ್ಕøತಿಯ ಸಂರಕ್ಷಣೆ ಮತ್ತು ಸಂವರ್ಧನೆಉದ್ದೇಶದಿಂದ ಹಾಲಕ್ಕಿ ಗುರುಕುಲ ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದ ಮುಕ್ರಿ ಸಮಾಜದ ಸರ್ವಾಂಗೀಣಅಭಿವೃದ್ಧಿಉದ್ದೇಶದಚಂದ್ರಗುಪ್ತ ಗುರುಕುಲಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದಗೋಕರ್ಣದಲ್ಲಿಆರಂಭಿಸಲಾಗುತ್ತಿದೆ.

ಚಂದ್ರಗುಪ್ತಚಕ್ರವರ್ತಿ ನೈಜವಾಗಿ ನಿಮ್ನವರ್ಗಕ್ಕೆ ಸೇರಿದವ. ಆದರೆ ಸಂಸ್ಕಾರ- ಶಿಕ್ಷಣ ನೀಡಿಚಾಣಕ್ಯಆತನನ್ನುಚಕ್ರವರ್ತಿಯಾಗಿ ಬೆಳೆಸಿದ್ದರಿಂದ ಸ್ಫೂರ್ತಿ ಪಡೆದು ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸಮಾಜದಒಂದು ನಿರ್ಲಕ್ಷಿತ ವರ್ಗವಾದ ಮುಕ್ರಿಜನಾಂಗದ ಮಕ್ಕಳನ್ನು ಸವ್ಯಸಾಚಿ ಮುಖಂಡರನ್ನಾಗಿ ಬೆಳೆಸುವ ಪಣತೊಟ್ಟಿದೆ.

ಈ ಎರಡು ವಿಶೇಷ ಗುರುಕುಲಗಳಿಗಾಗಿಯೇ ಸುಮಾರು 10 ಕೋಟಿರೂಪಾಯಿ ಅಂದಾಜು ವೆಚ್ಚದಲ್ಲಿ ಈ ಎರಡೂ ಸಮುದಾಯಗಳ ವೈಶಿಷ್ಟ್ಯಗಳ ಮೇಲೆ ಬೆಳಕು ಚೆಲ್ಲುವ ಪರಿಸರವನ್ನು ನಿರ್ಮಿಸಿ ಗುರುಕುಲ ಸ್ಥಾಪಿಸಲಾಗುತ್ತಿದೆ.

ಎರಡೂ ಗುರುಕುಲಗಳಲ್ಲಿ 2021-22ನೇ ಶೈಕ್ಷಣಿಕ ವರ್ಷಆರನೇತರಗತಿ ಆರಂಭಿಸಲಾಗುತ್ತದೆ. ಭಾರತೀಯ ಪಾರಂಪರಿಕ ಶಿಕ್ಷಣದ ಜತೆಗೆಎನ್‍ಐಓಎಸ್ ಪಠ್ಯಕ್ರಮದಆಧುನಿಕ ಶಿಕ್ಷಣವನ್ನು ನೀಡಲು ಉದ್ದೇಶಿಸಲಾಗಿದೆ. ಇಲ್ಲಿ ಸನಿವಾಸ ಶಿಕ್ಷಣದ ಜತೆಗೆ ಪ್ರತಿ ದಿನ ತಮ್ಮ ಮನೆಗಳಿಂದಲೇ ಬಂದುಅಧ್ಯಯನ ಮಾಡಲೂ ಅವಕಾಶ ಕಲ್ಪಿಸಲಾಗುತ್ತಿದೆ.

ಎರಡೂ ಗುರುಕುಲಗಳಲ್ಲಿ ಆಯಾ ಸಮಾಜದ ವಿಶಿಷ್ಟ ಕಲೆ, ಸಂಸ್ಕøತಿ, ಆಚಾರ- ವಿಚಾರ, ಆಹಾರ- ವಿಹಾರ, ಸಂಪ್ರದಾಯ, ನಂಬಿಕೆಗಳ ಆಮೂಲಾಗ್ರ ಪರಿಚಯ ಮಾಡಿಕೊಡುವಜತೆಗೆ ಹಿಂದೂ ಸಂಸ್ಕøತಿಯಉಚ್ಛಸಂಸ್ಕಾರ, ಉತ್ಕøಷ್ಟ ಸಮಕಾಲೀನ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಆಸ್ತಿಯಾಗಿ ಬೆಳೆಸುವುದು ಉದ್ದೇಶ. ಭಾರತದ ಪ್ರತಿಯೊಂದು ಪಾರಂಪರಿಕ ವಿದ್ಯೆಯೂ ಪಾಶ್ಚಿಮಾತ್ಯ ದಾಳಿಯ ಪ್ರಭಾವಕ್ಕೆ ಸಿಲುಕಿ ರೂಪುಗೆಟ್ಟಿದೆಅಥವಾಅರ್ಥ ಕಳೆದುಕೊಂಡಿದೆ. ಉಳಿದವು ಅಳಿವಿನ ಅಂಚಿನಲ್ಲಿವೆ. ಅಳಿದುಳಿದ ವಿದ್ಯೆಗಳ ಪುನರುಜ್ಜೀವನ ತಳಮಟ್ಟದಿಂದಲೇ ಆರಂಭಿಸಬೇಕೆಂಬ ಪರಿಕಲ್ಪನೆಯೊಂದಿಗೆ ಗುರುಕುಲಗಳು ಕಾರ್ಯಾರಂಭ ಮಾಡಿವೆ.

ಕೊರೋನಾ ಮಹಾಮಾರಿಯ ನಡುವೆಯೂ ಮೊದಲ ವರ್ಷವೇ ವಿವಿವಿ ಗುರುಕುಲಗಳಿಗೆ ಅದ್ಭುತ ಸ್ಪಂದನೆ ವ್ಯಕ್ತವಾಗಿದ್ದು, ಹಂತ ಹಂತವಾಗಿಉನ್ನತ ಶಿಕ್ಷಣಕ್ಕೆ ವಿವಿವಿ ತೆರೆದುಕೊಳ್ಳಲಿದೆ. ಈ ನಿಟ್ಟಿನಲ್ಲಿ ವಿವಿವಿ ವಿದ್ಯಾ ಪರಿಷತ್ ಹಾಗೂ ವ್ಯವಸ್ಥಾ ಪರಿಷತ್‍ಕಾರ್ಯಯೋಜನೆ ಹಾಕಿಕೊಂಡಿದ್ದು, ಪೂರ್ಣಪ್ರಮಾಣದಲ್ಲಿಕಾರ್ಯಾರಂಭವಾದಾಗ ವಿವಿವಿ ತಕ್ಷಶಿಲೆಯ ಪುನರವತರಣ ಎನಿಸಿಕೊಳ್ಳಲಿದೆ.

ಹಾಲಕ್ಕಿ ಗುರುಕುಲ: ಭಾರತೀಯ ಸಂಸ್ಕøತಿ ನೂರಾರು- ಸಾವಿರಾರುಜನಾಂಗ, ಬುಡಕಟ್ಟುಗಳ ಸಂಸ್ಕøತಿಯ ವಿಶ್ವರೂಪ. ಉತ್ತರಕನ್ನಡಜಿಲ್ಲೆಯಕಾರವಾರ, ಅಂಕೋಲ, ಕುಮಟಾ, ಹೊನ್ನಾವರ ತಾಲೂಕುಗಳಲ್ಲಿ ಅಧಿಕ ಸಂಖ್ಯೆಯಲ್ಲಿಕಂಡುಬರುವ ಹಾಲಕ್ಕಿ ಸಮಾಜದ ವಿಶಿಷ್ಟ ಪರಂಪರೆ, ಸಂಸ್ಕøತಿ, ಆಚಾರ- ವಿಚಾರ, ಜಾನಪದ ಸಂಸ್ಕøತಿ, ಕಲೆ, ಹಬ್ಬ ಹರಿದಿನಗಳ ಆಚರಣೆ, ಮಾತು, ವೇಷಭೂಷಣ, ಉಡುಗೆತೊಡುಗೆ, ಆಹಾರ- ವಿಹಾರಗಳ ಸಂರಕ್ಷಣೆ- ಸಂವರ್ಧನೆಯ ಮೂಲ ಉದ್ದೇಶದೊಂದಿಗೆ ಹಾಲಕ್ಕಿ ಗುರುಕುಲ ಸ್ಥಾಪನೆಯಾಗುತ್ತಿದೆ.

ಹಾಲಕ್ಕಿ ಜನಾಂಗ ಹುಟ್ಟಿ ಬೆಳೆದ ಪರಿಸರವನ್ನೇ ನಿರ್ಮಿಸಿ ಅವರ ಸಂಸ್ಕøತಿಯ ಶ್ರೇಷ್ಠತೆಯನ್ನು ಬಾಲ್ಯದಲ್ಲೇ ಮಕ್ಕಳಿಗೆ ಪರಿಚಯಿಸಿ ಅಭಿಮಾನ ಬೆಳೆಸಿ ಅವುಗಳ ಸಂರಕ್ಷಣೆಗೆ ಸಮಾಜಯೋಧರನ್ನು ಸೃಷ್ಟಿಸುವುದುಗುರುಕುಲದಆಶಯ. ಹಂತಹಂತವಾಗಿ ಹಾಲಕ್ಕಿ ಸಮಾಜದ ಬಗೆಗಿನ ಸಮಗ್ರಅಧ್ಯಯನಕ್ಕೆ ಶಾಶ್ವತಕೇಂದ್ರವಾಗಿಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

ಚಂದ್ರಗುಪ್ತಗುರುಕುಲ: ಸಮಗ್ರ ವಿಕಾಸಕ್ಕೆ ಸಮಗ್ರ ಶಿಕ್ಷಣವೊಂದೇ ಸಾಧನ; ಸಮಾಜದಯಾವ ವರ್ಗವೂಜ್ಞಾನಪರಂಪರೆಯಿಂದ ವಂಚಿತವಾಗಬಾರದು ಎಂಬ ಆಶಯದೊಂದಿಗೆ ಪರಿಶಿಷ್ಟರಿಗಾಗಿ ಅದರಲ್ಲೂ ವಿಶೇಷವಾಗಿ ಈ ಭಾಗದ ಮುಕ್ರಿ ಸಮಾಜದ ಸರ್ವಾಂಗೀಣಅಭಿವೃದ್ಧಿಉದ್ದೇಶದಿಂದಚಂದ್ರಗುಪ್ತನ ಹೆಸರಿನಗುರುಕುಲ ಆರಂಭಿಸಲಾಗುತ್ತಿದೆ.

ಈ ಭಾಗದಎರಡು ಹಿಂದುಳಿದ ಸಮಾಜಗಳಾದ ಹಾಲಕ್ಕಿ ಮತ್ತು ಮುಕ್ರಿ ಸಮಾಜಗಳು ಶ್ರೀಮಠದ ಪಾರಂಪರಿಕ ಶಿಷ್ಯವರ್ಗದಲ್ಲಿ ಸೇರಿದ್ದು, ಇವರಅಭಿವೃದ್ಧಿಯನ್ನು ಶ್ರೀಮo ಆದ್ಯತೆಯಾಗಿ ಪರಿಗಣಿಸಿದೆ. ಈ ಜನಾಂಗಗಳು ತಮ್ಮ ವೈಶಿಷ್ಟ್ಯ ಮತ್ತು ಸ್ವಂತಿಕೆಯನ್ನು ಉಳಿಸಿಕೊಂಡೇ, ಸಮಾಜದ ಮುಖ್ಯವಾಹಿನಿ ಸೇರುವಂತಾಗಬೇಕು ಎಂಬ ಉದ್ದೇಶದಿಂದಎನ್‍ಐಓಎಸ್ ಪಠ್ಯಕ್ರಮದಂತೆ ಸಮಕಾಲೀನ ಶಿಕ್ಷಣ ನೀಡುವಜತೆಗೆ, ಭಾರತೀಯ ಕಲೆ- ಸಂಸ್ಕøತಿಯ ಸಮಗ್ರ ಪರಿಚಯ, ಪಾರಂಪರಿಕ ಶಿಕ್ಷಣ, ವಿಶೇಷ ಕೌಶಲ, ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದಜೀವನ ಶಿಕ್ಷಣ ಬೋಧಿಸಲಾಗುತ್ತದೆ.

ವಿಸ್ಮಯ ನ್ಯೂಸ್, ಗೋಕರ್ಣ

Back to top button