ಅಂಕೋಲಾ : ಶ್ರೀ ಬಾರ್ಕೂರು ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ವಿದ್ಯಾವಾಚಸ್ಪತಿ ವಿಶ್ವಸಂತೋಷ ಭಾರತಿ ಶ್ರೀಪಾದರವರು ಭವ್ಯ ಭಾರತದ ಸನಾತನ ಧರ್ಮವನ್ನು ಪ್ರಚಲಿತಗೊಳಿಸಲು ಜಿಲ್ಲೆಯ ಹಲವೆಡೆ ಪ್ರವಾಸ-ಪ್ರವಚನ ಮಾಲಿಕೆ ಹಮ್ಮಿಕೊಂಡಿದ್ದು, ಫೆ.14 ರವಿವಾರ ಅಂಕೋಲಾ ಪಟ್ಟಣದ ಸ್ವಾತಂತ್ರ ಸ್ಮಾರಕ ಭವನದ ಹೊರ ಆವರಣದಲ್ಲಿ, ನೆರೆದ ಭಕ್ತರು ಮತ್ತು ಸಾರ್ವಜನಿಕರಿಗೆ ರಾಮನ 2 ಮುಖಗಳ ದರ್ಶನ ಮಾಡಿಸಿದರು.
ವಿಶೇಷ ಪ್ರವಚನ ನೀಡಿದ ಗುರುಗಳು ರಾಮ ಎನ್ನುವ ಪದ ಕೇವಲ ನಾಮಮಾತ್ರವಾಗಿರದೇ, ಈ ಪ್ರಪಂಚವೇ ರಾಮ ಎಂಬ ಅರ್ಥದಲ್ಲಿ 7 ನಕ್ಷತ್ರಗಳು, 7 ಖಂಡ, 7 ಸಮುದ್ರ, ಹೀಗೆ ಸಪ್ತ ಅಂಕೆಯ ಮಹತ್ವ ತಿಳಿಸಿ 7ರಲ್ಲಿ ರಾಮನ ವಿಶೇಷತೆ ವಿವರಿಸಿದರಲ್ಲದೇ ರಾಮಾಯಣದ ವಿವಿಧ ಅಧ್ಯಾಯಗಳನ್ನು ವಿಶ್ಲೇಷಿಸಿ ರಾಮನ ¨ಗ್ಗೆ ಇರುವ ವಿತಂಡವಾದದ ಮೂಲಕ 1 ಮುಖ ಮತ್ತು ಧರ್ಮ ಮಾರ್ಗದ ಮರ್ಯಾದ ಪುರುಷೋತ್ತಮ ರಾಮನ ಬಗ್ಗೆ ಮತ್ತು ಭಕ್ತಿಭಾವನೆ ಪುಟಿದೇಳುವಂತೆ ಮಾಡಿ ಹಾಗೂ ಭರತ ಖಂಡದಲ್ಲಿ ಜನಿಸಿದ ನಾವೆಲ್ಲರೂ ಧನ್ಯರೆಂಬ ಭಾವನೆ ಮೂಡುವಂತೆ ಪ್ರೇರೇಪಿಸಿದರಲ್ಲದೇ ರಾಮ ಮಂದಿರ ನಿರ್ಮಾಣ ರಾಷ್ಟç ದೇಗುಲದ ನಿಮಾರ್ಣವೆಂದರು.
ಬಾರ್ಕೂರು ಮಹಾಸಂಸ್ಥಾನದ ಉತ್ತರಕನ್ನಡ ಘಟಕದ ಜಿಲ್ಲಾಧ್ಯಕ್ಷ ಡಿ.ಎನ್.ನಾಯಕ ಸ್ವಾಗತಿಸಿದರು. ಸಮಿತಿಯ ಪ್ರಮುಖರಾದ ವಕೀಲ ನಾಗರಾಜ ನಾಯಕ ಆಶಯ ನುಡಿಗಳನ್ನಾಡಿದರು, ಅತಿಥಿಗಳಾದ ರಾಮು ಅರ್ಗೇಕರ ಸಾಂಧರ್ಬಿಕವಾಗಿ ಮಾತನಾಡಿ ಸಮುದಾಯ ಮತ್ತು ಸಂಘಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಸಮಿತಿಯ ಸದಸ್ಯ ಎನ್.ಕೆ.ನಾಯಕ, ವಿವಿಧ ಸಮಾಜದ ಪ್ರತಿನಿಧಿಗಳಾದ ದೇವಿದಾಸ ಸುವರ್ಣ, ಲೀಲಾವತಿ ನಾಯ್ಕ, ಎನ್.ಬಿ ಮಹಾಲೆ, ಹೊನ್ನಪ್ಪಯ್ಯ ಗುನಗಾ, ವಿಜಯಕುಮಾರ ನಾಯ್ಕ ಕನಸಿಗದ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಗದೀಶ ನಾಯಕ ಹೊಸ್ಕೇರಿ ಮತ್ತು ರಾಜೇಶ ನಾಯಕ ಸೂರ್ವೆ ನಿರೂಪಿಸಿದರು. ಬಾರ್ಕೂರು ಸಂಸ್ಥಾನದ ಭಕ್ತರು, ನಾಡವರ ಸಮಾಜ ಬಂಧುಗಳು, ಇತರೇ ಸಾರ್ವಜನಿಕರು ಪಾಲ್ಗೊಂಡಿದ್ದರು.
ಸಂತೋಷವಾಯಿತೆಂದ ಶಾಸಕಿ : ಅನ್ಯ ಕಾರ್ಯಕ್ರಮದ ನಿಮಿತ್ತ ದಾರಿಯಲ್ಲಿ ಹೊರಟ್ಟಿದ್ದ ಶಾಸಕಿ ದೂರದಿಂದಲೇ ಪ್ರವಚನ ಕಾರ್ಯಕ್ರಮ ನಡೆಯುತ್ತಿರುವುದನ್ನು ಗಮನಿಸಿ, ಕಾರಿನಿಂದ ಇಳಿದು ವೇದಿಕೆಯ ಮುಂಭಾಗದಲ್ಲಿ ಬಹುಹೊತ್ತು ಕುಳಿತು ಪ್ರವಚನ ಆಲಿಸಿದರಲ್ಲದೇ, ಗುರುಗಳ ಪಾಂಡಿತ್ಯ ಪೂರ್ಣ ಮಾತುಗಳಿಗೆ ತಲೆದೂಗಿ ಚಪ್ಪಾಳೆ ಮೂಲಕ ಹರ್ಷ ವ್ಯಕ್ತಪಡಿಸಿದರು. ಪ್ರವಚನ ಮುಕ್ತಾಯದ ನಂತರ ಶ್ರೀಗಳ ಪೀಠದ ಬಳಿ ತೆರಳಿ ಪಲಪುಷ್ಪ ನೀಡಿ ಗೌರವಿಸಿದರಲ್ಲದೇ, ಸಂತೋಷ ಗುರುಗಳ ಹತ್ತಿರದ ದರ್ಶನ ಮತ್ತು ಶ್ರೀಗಳ ಪ್ರವಚನದ ಮೂಲಕ ರಾಮನ ಮುಖ ದರ್ಶನದ ಭಾಗ್ಯ ದೊರೆತಿರುವುದಕ್ಕೆ ತನಗೆ ಸಂತೋಷವಾಯಿತೆಂದರು. ಶ್ರೀಗಳು ಶಾಸಕಿ ರೂಪಾಲಿ ನಾಯ್ಕ ಮತ್ತು ನೆರೆದ ಭಕ್ತರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777,,,, INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777