Follow Us On

WhatsApp Group
Focus News
Trending

ಫೆ.27 ರಂದು ಗಾಂವಕರ ಮೆಮೋರಿಯಲ್ ಫೌಂಡೇಶನ್ ಕಾರ್ಯಕ್ರಮ

9 ರ ಪ್ರತಿಭಾ ಪುರಸ್ಕಾರಕ್ಕೆ 10 ತಾಲೂಕಿನ 11 ಯುವ ಸಾಧಕರು
ರಾಷ್ಟ್ರ ನಿರ್ಮಾಣದಲ್ಲಿ ಯುವ ಜನಾಂಗದ ಪಾತ್ರ : ವಿಶೇಷ ಉಪನ್ಯಾಸ

ಅಂಕೋಲಾ : ಹತ್ತಾರು ವಿಧಾಯಕ ಕಾರ್ಯಕ್ರಮಗಳ ಮೂಲಕ ನಾಡಿನಾದ್ಯಂತ ಗಮನ ಸೆಳೆಯುತ್ತಿರುವ ಬಾಸಗೋಡಿನ ದಿ.ಬೊಮ್ಮಯ್ಯ ಗಾಂವಕರ ಸ್ಮರಣಾರ್ಥ ಅವರ ಕುಟುಂಬ ವರ್ಗದವರು ಸ್ಥಾಪಿಸಿದ ಗಾಂವಕರ ಮೆಮೋರಿಯಲ್ ಫೌಂಡೇಶನ್ 9ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಫೆ.27ರ ಶನಿ ವಾರ ಸಂಜೆ 4 ಗಂಟೆಗೆ ಪಟ್ಟಣದ ಸ್ವಾತಂತ್ರ್ಯ ಸ್ಮಾರಕಭವನದ ಸಾಧನಾ ವೇದಿಕೆಯಲ್ಲಿ ಜಿಲ್ಲೆಯ 10 ತಾಲೂಕುಗಳ 11 ಯುವ ಸಾಧಕರಿಗೆ ಪ್ರತಿಭಾ ಪುರಸ್ಕಾರ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈ ಕುರಿತು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಪೌಂಡೇಶನ ಅಧ್ಯಕ್ಷ ದೇವಾನಂದ ಬಿ. ಗಾಂವಕರ, ತಮ್ಮ ಫೌಂಡೇಶನ್ ವತಿಯಿಂದ ಕಳೆದ 8 ವರ್ಷಗಳಲ್ಲಿ ಜಿಲ್ಲೆಯ ವಿವಿಧ ಸಮುದಾಯದ, ನಾನಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಒಟ್ಟೂ 69 ಯುವ ಪ್ರತಿಭೆಗಳನ್ನು ಗೌರವಿಸಲಾಗಿದ್ದು, ಈ ವರ್ಷ ಮತ್ತೆ 11 ಸಾಧಕರನ್ನು ಗೌರವಿಸಲು ಹೆಮ್ಮೆ ಎನ್ನಿಸುತ್ತಿದೆ.

ಅದೇ ರೀತಿ ಪಾರ್ಲಿಮೆಂಟ್‍ನಲ್ಲಿ ಇತ್ತೀಚಿಗೆ ತನ್ನ ವಾಕ್‍ಚಾತುರ್ಯದ ಮೂಲಕ ದೇಶದ ಗಮನ ಸೆಳೆದಿರುವ ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಶರ್ವಾಣಿ ಗೌಡ ಇವರಿಂದ ‘ರಾಷ್ಟ್ರ ನಿರ್ಮಾಣದಲ್ಲಿ ಯುವ ಜನಾಂಗದ ಪಾತ್ರ’ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದ್ದು, ಯುವ ಜನರು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮಾರಂಭದ ಯಶಸ್ಸಿಗೆ ಸಹಕರಿಸುವಂತೆ ಕೋರಿ ಕೊಂಡರು.

ಸಮಿತಿ ಸದಸ್ಯ ಗೋಪಾಲ ಆರ್.ನಾಯಕ ಮಾತನಾಡಿ, ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮಕ್ಕೂ ಪೂರ್ವ ಯುವ ಕಲಾವಿದ ಪುನಿತ ನಾಯ್ಕ ಹನುಮಟ್ಟಾ ಇವರಿಂದ ಸ್ತ್ರೀವೇಷ ಯಕ್ಷ ನೃತ್ಯ ನಡೆಯಲಿದೆ. ಸುಮಧುರ ಗೀತೆಗಳ ಮೂಲಕ ಹೆಸರಾಗಿ ರುವ ಮೀನಾಕ್ಷಿ ಪಾಟೀಲ ಕಾರವಾರ ಇವರು ವಿಶೇಷ ಹಾಡುಗಳನ್ನು ಹಾಡಲಿದ್ದಾರೆ ಎಂದರು. ವಿಘ್ನೇಶ ಬಾಲಚಂದ್ರ ನಾಯಕ ಬಾಸಗೋಡ ವಂದಿಸಿದರು.

9 ರ ಪ್ರತಿಭಾ ಪುರಸ್ಕಾರಕ್ಕೆ 10 ತಾಲೂಕಿನ 11 ಯುವ ಸಾಧಕರು :

ಅಬ್ದುಲ್ ಮಥಿನ್ ಯಲ್ಲಾಪುರ (ಕೌಶಲ್ಯ), ಋತ್ವಿಕ್ ಶಂಕರ ಮೇಸ್ತ ಹೊನ್ನಾವರ(ಕರಾಟೆ), ಶ್ರೇಯಾ ರಾಯ್ ವೆರ್ಣೇಕರ್ ಕಾರವಾರ (ವಾಸ್ತುಶಿಲ್ಪ), ಶಾಲಿನಿ ಶಾಯರ್ ಸಿದ್ದಿ ಹಳಿಯಾಳ(ಕುಸ್ತಿ),ಅಂಕೋಲಾದ ವಿಜಯಶ್ರೀ ವಾಸುದೇವ ನಾಯಕ(ಆಡಳಿತ), ಚೈತ್ರಾ ನಾಗಪ್ಪ ನಾಯ್ಕ(ನೌಕಾಸೇನೆ), ಅನಿರುದ್ಧ ಅರವಿಂದ ನಾಯಕ ಕುಮಟಾ (ವಾಯುಸೇನೆ) ಮಂಜುನಾಥ ಲಕ್ಷ್ಮಣ ಪಾಟೀಲ ದಾಂಡೇಲಿ(ಛಾಯಾಗ್ರಹಣ), ಮಂಜುಶ್ರೀ ಗುರುರಾಜ್ ಭಟ್ಕಳ(ನೃತ್ಯ),ಜಯಾನಂದ ಡೇರೇಕರ್ ಜೋಯಿಡಾ (ಶಿಕ್ಷಣ), ಸೀಮಾ ವಿವೇಕ ಹೆಗಡೆ ಶಿರಸಿ(ಉದ್ಯಮ).

ಈ ಸಂದರ್ಭದಲ್ಲಿ ಗೌರವ ಕಾರ್ಯದರ್ಶಿ ರಘುವೀರ ಗಾಂವಕರ, ಸದಸ್ಯರಾದ ವಿನಯ ನಾಯಕ, ಗೌರೀಶ ನಾಯಕ, ವನಿತಾ ಗಾಂವಕರ, ಚೈತ್ರಾ ನಾಯಕ, ಯಮುನಾ ಗಾಂವಕರ, ಸಚಿನ ಗುನಗಾ, ರವಿ ನಾಯಕ, ಅಕ್ಷಯ ಗಾಂವಕರ, ದಿಶಾ ನಾಯಕ, ವಿಘ್ನೇಶ ನಾಯಕ, ರಾಕು ನಾಯಕ, ಉಪಸ್ಥಿತರಿದ್ದರು.

ಮುಂದಿನ ವರ್ಷ ದಶಮಾನೋತ್ಸವ ಆಚರಣೆಗೆ ಸಿದ್ದಗೊಳ್ಳುತ್ತಿರುವ ಗಾಂವಕರ ಫೌಂಡೇಶನ, ತಾಲೂಕಿನ ಹಾಗೂ ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಿಕ್ಸೂಚಿಯಾಗುವಂತೆ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‍ಸಿ) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಯುವ ಶಕ್ತಿಗಳು ಆತ್ಮಸ್ಥೈರ್ಯದಿಂದ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಮಾರ್ಗದರ್ಶನ ನೀಡುವುದು ಮತ್ತು ಪರೀಕ್ಷಾ ಪೂರ್ವ ತರಬೇತಿ ಮತ್ತಿತರ ವಿಷಯಗಳು ಕುರಿತು ತಿಳುವಳಿಕಾ ಶಿಬಿರ ಏರ್ಪಡಿಸಿ, ಈ ಹಿಂದೆ ಫೌಂಡೇಶನ್ ವತಿಯಿಂದ ಪುರಸ್ಕರಿಸಲ್ಪಟ್ಟ ಐಎಎಸ್, ಐಆರ್‍ಎಸ್ ಹುದ್ದೆಗಳಲ್ಲಿರುವವರು ಮತ್ತು ಇತರೇ ಅನುಭವಿಗಳಿಂದ ಸಂವಾದ ಮಾದರಿಯ ಕಾರ್ಯಕ್ರಮ ಆಯೋಜಿಸಲು ಯೋಚಿಸಲಾಗಿದೆ- ದೇವಾನಂದ ಗಾಂವಕರ ಅಧ್ಯಕ್ಷರು ಗಾಂವಕರ ಮೆಮೋರಿಯಲ್ ಫೌಂಡೇಶನ್, ಬಾಸಗೋಡ

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

 ಶ್ರೀ ಕಟೀಲು ದುರ್ಗಾಪರಮೇಶ್ವರಿ  ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್  ಮೊಬೈಲ್ : 9964108888,,,, INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

Back to top button