ಪಾಂಡುರಂಗ ನಾಯ್ಕ ವಿಧಿವಶ

ಅಂಕೋಲಾ : ಲಕ್ಷ್ಮೇಶ್ವರ ಗ್ರಾಮದ ಪಾಂಡುರಂಗ ಜೀವು ನಾಯ್ಕ (72) ಗುರುವಾರ ಬೆಳಗಿನ ಜಾವ ವಿಧವಶರಾದರು. ಮನೆಯಲ್ಲಿ ಮಲಗಿದ್ದ ವೇಳೆ ಎದೆ ನೋವು ಕಾಣಿಸಿಕೊಂಡು, ಪಟ್ಟಣದ ಖಾಸಗಿ ಆಸ್ಪತ್ರೆಗೆ ಸಾಗಿಸುವರಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಮೃತ ಪಾಂಡುರಂಗ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜವಾನನಾಗಿ ಧೀರ್ಘಾವಧಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ತಮ್ಮ ಹಾಸ್ಯಪ್ರವೃತ್ತಿ ಮೂಲಕ ಮನೆ ಮಾತಾಗಿದ್ದ ಇವರು ಕೃಷಿ, ಜನಪದ ಕಲೆಗಳ ಮೂಲಕವು ಗುರುತಿಸಿಕೊಂಡಿದ್ದರು. ಸಮಾಜದ ಎಲ್ಲಾ ವರ್ಗಗಳೊಂದಿಗೆ ಪ್ರೀತಿ ಭಾಂದವ್ಯದಿಂದ ಬಾಳಿಬದುಕಿದ್ದ ಇವರು ಅಪಾರವಾದ ದೈವಭಕ್ತಿ ಹೊಂದಿದ್ದರು.

ಮೃತರು, ಮಗ ಪ್ರಶಾಂತ ನಾಯ್ಕ, ಸೊಸೆ ಪೂಜಾ ನಾಯ್ಕ, ಮಗಳು ಪವಿತ್ರಾ ಸೂರಜ್ ನಾಯ್ಕ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗ ತೊರದಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version