Important
Trending

14 ವರ್ಷ ಪ್ರಾಯದ ಶಾಲಾ ಬಾಲಕಿಯೋರ್ವಳನ್ನು ಪುಸಲಾಯಿಸಿ ಸಂಪರ್ಕ: ಇಬ್ಬರ ಬಂಧನ

ಭಟ್ಕಳ: ತಾಲೂಕಿನ ಶಿರಾಲಿ ಚಿತ್ರಾಪುರದಲ್ಲಿ ನಡೆದ 14 ವರ್ಷ ಪ್ರಾಯದ ಶಾಲಾ ಬಾಲಕಿಯೋರ್ವಳನ್ನು ಪುಸಲಾಯಿಸಿ, ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಗರ್ಭಿಣಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಶಿರಸಿ ಮೂಲದ ರವಿ ಪಟಗಾರ (35) ಹಾಗೂ ಇಲ್ಲಿನ ಶಿರಾಲಿ ಗುಡಿಹಿತ್ತಲ್ ನಿವಾಸಿ ಶಿವರಾಜು ನಾಯ್ಕ (22) ಎಂದು ಗುರುತಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬಾಲಕಿಯ ತಾಯಿಯು ನೀಡಿದ ದೂರಿನಲ್ಲಿ ರವಿ ಪಟಗಾರ ಎಂಬಾತನ ಮೇಲೆ ದೂರು ನೀಡಲಾಗಿತ್ತಾದರೂ, ವಿಚಾರಣೆಯ ವೇಳೆ ಶಿವರಾಜು ನಾಯ್ಕನ ಹೆಸರೂ ಬೆಳಕಿಗೆ ಬಂದಿತ್ತು. 9ನೇ ತರಗತಿಯನ್ನು ಓದುತ್ತಿದ್ದ ಪಕ್ಕದ ಸಿಗಂಧೂರು ಮೂಲದ ಸಂತ್ರಸ್ತ ಶಾಲಾ ಬಾಲಕಿಯು ಈ ಹಿಂದೆ ತನ್ನ ತಾಯಿಯೊಂದಿಗೆ ಚಿತ್ರಾಪುರದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದಳು. ನಂತರ ಮುರುಡೇಶ್ವರ ತೆರ್ನಮಕ್ಕಿಯಲ್ಲಿ ಇನ್ನೊಂದು ಮನೆಯನ್ನು ಬಾಡಿಗೆಗೆ ಪಡೆದು ನೆಲೆಸಿದ್ದರು. ಸಂತ್ರಸ್ತ ಬಾಲಕಿಯು ತನ್ನ ಗೆಳತಿಯ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದು, ಆರೋಪಿಗಳೊಂದಿಗಿನ ಪರಿಚಯ ಸ್ನೇಹಕ್ಕೆ ತಿರುಗಿ ಆಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಸದ್ಯ ಸಂತ್ರಸ್ತ ಬಾಲಕಿಯು ಕಾರವಾರ ಸಾಂತ್ವನ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ  ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್  ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button