Follow Us On

Google News
Important
Trending

ಭೀಕರ ಅಪಘಾತ: ಲಾರಿಯ ಹಿಂಬದಿ ಚಕ್ರ ಹಾಯ್ದು ಮೃತಪಟ್ಟ ಯುವಕ

ಅಂಕೋಲಾ: ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ರ ಬಾಳೆಗುಳಿ ವರದರಾಜ ಹೊಟೇಲ್ ಹತ್ತಿರ, ಲಾರಿಯ ಚಕ್ರ ಹಾಯ್ದು ,ವ್ಯಕ್ತಿ ಓರ್ವ ಧಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.. ತಾಲೂಕಿನ ಶಿರಕುಳಿ ಗ್ರಾಮದ ಪ್ರಮೋದ ನಾರಾಯಣ ನಾಯ್ಕ (19 ) ಮೃತ ದುರ್ದೈವಿ ಯುವಕನಾಗಿದ್ದಾನೆ. ಈತನು ಲಾರಿ ಕ್ಲೀನರ್ ಮತ್ತಿತರ ಚಿಕ್ಕ ಪುಟ್ಟ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದ್ದು, ಬೇರೊಂದು ಲಾರಿ ಚಕ್ರದಡಿ ಆಕಸ್ಮಿಕವಾಗಿ ಸಿಲುಕಿ ದುರ್ಮರಣ ಹೊಂದಿರುವುದು ವಿಧಿ ಲಿಖಿತವೇ ಸರಿ.

ರಸ್ತೆಯಲ್ಲಿ ಕಾರ್ ಅಡ್ಡಗಟ್ಟಿ ಗ್ಲಾಸ್ ಒಡೆದು ಸುಲಿಗೆ ಪ್ರಕರಣ: ಆರೋಪಿಗಳ ಬಂಧನ

ಅಂಕೋಲಾದ ವರದರಾಜ ಹೋಟೆಲ್ ಬಳಿ ಲಾರಿಯಿಂದ ಇಳಿದು ಹೋಗಿ ಉಪಹಾರ ಸೇವಿಸಿ ಇಲ್ಲವೇ ತನ್ನ ಬೇರೆ ಕೆಲಸ ಕಾರ್ಯ ಮುಗಿಸಿ, ಮತ್ತೆ ಲಾರಿ ಏರಿ ವಾಹನ ಚಲಾಯಿಸುತ್ತದಂತೆ ಈ ದುರ್ಘಟನೆ ಸಂಭವಿಸಿದೆ. ಸುದ್ದಿ ತಿಳಿದ ಅಂಕೋಲಾ ಪೊಲೀಸ್ ಠಾಣೆಯ ಸಂಚಾರ ವಿಭಾಗದ ಪಿ. ಎಸ್ ಐ ಸುನೀಲ ಹುಲ್ಲೊಳ್ಳಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ,ಅಪಘಾತ ಪಡಿಸಿದ ವಾಹನ ಚಾಲಕನನ್ನು ವಶಕ್ಕೆ ಪಡೆದು ಕಾನೂನು ಕ್ರಮ ಮುಂದುವರಿಸಿದ್ದಾರೆ.

ಘಟನಾ ಸ್ಥಳದಿಂದ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕ ಆಸ್ಪತ್ರೆಗೆ ಶವಾಗಾರಕ್ಕೆ ಸಾಗಿಸಿಲು ಸಾಮಾಜಿಕ ಕಾರ್ಯಕರ್ತ ಕನಸಿಗದ್ದೆಯ ವಿಜಯಕುಮಾರ್ ನಾಯ್ಕ, ಸ್ಥಳೀಯರಾದ ದತ್ತು, ಮೃತನ ಕುಟುಂಬ ಸಂಬoಧಿಗಳು, ಮತ್ತಿತರರು ಸಹಕರಿಸಿದರು. ಘಟನಾ ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button