Follow Us On

WhatsApp Group
Focus News
Trending

ವಿಶ್ವಕನ್ನಡ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಭಟ್ಕಳದ ಸಾಮಾಜಿಕ ಹೋರಾಟಗಾರ ಈರಾ ನಾಯ್ಕ್ ಚೌತನಿ

ಭಟ್ಕಳ : ವಿಶ್ವ ದರ್ಶನ ಕನ್ನಡ ದಿನ ಪತ್ರಿಕೆ ಹುಬ್ಬಳ್ಳಿ ವತಿಯಿಂದ ಕೊಡಮಾಡುವ 2024 ನೆ ಸಾಲಿನ ವಿಶ್ವ ಕನ್ನಡ ಸೇವಾ ರತ್ನ ರಾಷ್ಟ್ರ ಪ್ರಶಸ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಸಾಮಾಜಿಕ ಹೋರಾಟಗಾರ ಈರಾ ಡಿ ನಾಯ್ಕ ಚೌಥನಿ ಅವರಿಗೆ ಲಭಿಸಿದೆ.

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ರೈತ ಸಮುದಾಯ ಭವನದಲ್ಲಿ ಇತ್ತಿಚೆಗೆ ನಡೆದ 4 ನೇ ಭಾವೈಕ್ಯತೆಯ ಸಮ್ಮೇಳನದಲ್ಲಿ ಗಜೇಂದ್ರಗಡದ ಶ್ರೀ ಕಾಲಜ್ಞಾನ ಬ್ರಹ್ಮ ಬಸವಮಹಾನಂದ ಸ್ವಾಮೀಜಿಗಳ ಸಮ್ಮುಖದಲ್ಲಿ ವಿಶ್ವ ಕನ್ನಡ ಸೇವಾ ರತ್ನ ಪ್ರಶಸ್ತಿಯನ್ನು ಸಂಘಟಕರಾದ ಡಾ.ಎಸ್.ಎಸ್ ಪಾಟೀಲ್ ಹುಬ್ಬಳ್ಳಿ ಅವರು ಈರಾ ನಾಯ್ಕ ಚೌಥನಿಯವರಿಗೆ ನೀಡಿ ಗೌರವಿಸಿದರು. ಈರಾ ನಾಯ್ಕ್ ಚೌತನಿ ಅವರ ದಶಕಗಳ ಕಾಲದ ಸಮಾಜಸೇವೆ , ಕನ್ನಡ ಪರ ಹೋರಾಟ ಮತ್ತು ಸಾಮಾಜಿಕ ಚುಟುವಟಿಕೆಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ವಿಸ್ಮಯ ನ್ಯೂಸ್, ಈಶ್ವರ ನಾಯ್ಕ, ಭಟ್ಕಳ

Back to top button