ಜೋಪಡಿ ವಾಸಿಗಳ ಮೇಲೆ ಪೊಲೀಸ ಕಣ್ಣು ? ಬಯಲೇ ಶೌಚ-ಆಲಯ! ಹೆಚ್ಚುತ್ತಿರುವ ಕಳ್ಳತನ ಪ್ರಕರಣ ಬೇಧಿಸಲು ಹರಸಾಹಸ
ಮನೆ ಕಳ್ಳತನಕ್ಕಾಗಿ ವ್ಯಾಪಾರ ಮತ್ತಿತರ ಉದ್ದೇಶದಿಂದ ಸ್ಥಳೀಯ ಚಿತ್ರಣ ಮತ್ತು ಮಾಹಿತಿಯನ್ನು ಕಲೆ ಹಾಕುವ ಇಲ್ಲವೇ ಕಳ್ಳರಿಗೆ ತಿಳಿಸುವ ವ್ಯವಸ್ಥಿತ ಜಾಲ ಇರುವ ಸಂಶಯ ವ್ಯಕ್ತವಾಗುತ್ತಿದ್ದು, ಪ್ರಕರಣ ಭೇದಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ. ಕೆಲ ಪ್ರಕರಣಗಳ ಕುರಿತು ಠಾಣೆಗೆ ದೂರು ಸಲ್ಲಿಸದಿರುವುದು ಸಹ ಕಳ್ಳರಿಗೆ ವರದಾನವಾದಂತಾಗಿದೆ.
ಅಂಕೋಲಾ : ಪುರಸಭೆ ವ್ಯಾಪ್ತಿಯ ಪೂರ್ಣ ಪ್ರಜ್ಞಾ ಕಾಲೇಜಿನ ಪಕ್ಕದ ಬಯಲು ಪ್ರದೇಶದಲ್ಲಿ ಜೋಪಡಿ (ಟೆಂಟ್)ಗಳಲ್ಲಿ ನೂರಾರು ಜನರು ವಾಸವಾಗಿದ್ದು, ಅಲ್ಲಿಯ ಕೆಲವರ ವರ್ತನೆ ಬಗ್ಗೆ ದೂರು ಹಾಗೂ ಸಂಶಯದ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಠಾಣೆಗೆ ಕರೆಯಿಸಿ, ಸಿಪಿಐ ಕೃಷ್ಣಾನಂದ ನಾಯಕ ಮತ್ತು ಸಿಬ್ಬಂದಿಗಳು ಗುರುತು ಪತ್ರ, ಇನ್ನಿತರ ದಾಖಲೆ ಪರಿಶೀಲಿಸಿದರು.
ಅಲೆಮಾರಿಗಳು :ಕಳೆದ ನಾಲ್ಕಾರು ವರ್ಷಗಳಿಂದ ಆಗಾಗ ಇಲ್ಲಿ ವಾಸಿಸುತ್ತಿರುವ ಈ ಅಲೆಮಾರಿ ಜನಾಂಗ ದವರು ಪಾತ್ರೆ ಮತ್ತಿತರ ಮಾರಾಟ ಮಾಡಿಕೊಂಡು ಹಳ್ಳಿ ಹಳ್ಳಿಗೆ ಸಂಚರಿಸುತ್ತಿರುತ್ತಾರೆ. ಇಲ್ಲಿಯ ಕೆಲವರ ವರ್ತನೆ ಬಗ್ಗೆ ಸಾರ್ವಜನಿಕ ವಲಯದಿಂದ ಸಂಶಯದ ಮಾತುಗಳು ಕೇಳಿ ಬರುತ್ತಿದೆ.
ಬಯಲೇ ಶೌಚ-ಆಲಯ ! ? : ಈ ಅಲೆಮಾರಿಗಳು ವಾಸವಾಗಿರುವ ಪ್ರದೇಶದ ಬಳಿ ಸಾರ್ವಜನಿಕರ ಶೌಚಾ ಲಯ ಇಲ್ಲದಿರುವುದು, ದೂರ ಇರಬಹುದಾದ ಶೌಚಾಲಯಕ್ಕೆ ತೆರಳಲು ಮನಸ್ಸು ಮಾಡದ ಇವರು ಬಯಲಿನಲ್ಲಿಯೇ ಶೌಚ ಮಾಡುವುದರಿಂದ, ಸುತ್ತಲಿನ ವಾತಾವರಣ ಗಬ್ಬು ನಾರುವಂತಾಗಿದೆ. ಶನಿವಾರ ಸಂತೆ ವ್ಯಾಪಾರಕ್ಕೆ ಆಗಮಿಸುವ ಹೊರ ಜಿಲ್ಲೆಯ ಕೆಲ ವ್ಯಾಪಾರಸ್ಥರು ಸಹ ಇಲ್ಲಿಯೇ ಬಂದು ಶೌಚ ಮಾಡುವದರಿಂದ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗುತ್ತಿದೆ. ಅಕ್ಕಪಕ್ಕದಲ್ಲಿಯೇ ಶಾಲಾ ಕಾಲೇಜುಗಳು, ದೇವಸ್ಥಾನ, ಜನವಸತಿ ಪ್ರದೇಶವಿರುವುದರಿಂದ ಪುರಸಭೆಯವರು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಹೆಚ್ಚುತ್ತಿರುವ ಕಳ್ಳತನ ಪ್ರಕರಣ : ಕಳೆದೆರಡು ದಿನಗಳ ಹಿಂದೆ ಶೆಟಗೇರಿ ಕ್ರಾಸ್‍ನ ನಡೆದ ನಿವೃತ್ತ ಎಸಿಎಫ್‍ನ ಮನೆಗಳ್ಳತನ ಪ್ರಕರಣ ಸೇರಿದಂತೆ ಇತ್ತೀಚಿಗೆ ತಾಲೂಕಿನಲ್ಲಿ ನಡೆದ ಹಲವು ಮನೆಗಳ್ಳತನ ಪ್ರಕರಣಗಳು, ಕುಟುಂಬ ಸದಸ್ಯರ್ಯಾರು ಮನೆಯಲ್ಲಿ ವಾಸವಿರದ ವೇಳೆ ಹೆಚ್ಚಾಗಿ ನಡೆದಿದೆ. ಈ ಎಲ್ಲಾ ಕಳ್ಳತನಕ್ಕೆ ಸ್ಥಳೀಯರ ಸಹಕಾರದ ನಂಟು ಇಲ್ಲವೇ ಮನೆ ಕಳ್ಳತನಕ್ಕಾಗಿ ವ್ಯಾಪಾರ ಮತ್ತಿತರ ಉದ್ದೇಶದಿಂದ ಸ್ಥಳೀಯ ಚಿತ್ರಣ ಮತ್ತು ಮಾಹಿತಿಯನ್ನು ಕಲೆ ಹಾಕುವ ಇಲ್ಲವೇ ಕಳ್ಳರಿಗೆ ತಿಳಿಸುವ ವ್ಯವಸ್ಥಿತ ಜಾಲ ಇರುವ ಸಂಶಯ ವ್ಯಕ್ತವಾಗುತ್ತಿದ್ದು, ಪ್ರಕರಣ ಭೇದಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ. ಕೆಲ ಪ್ರಕರಣಗಳ ಕುರಿತು ಠಾಣೆಗೆ ದೂರು ಸಲ್ಲಿಸದಿರುವುದು ಸಹ ಕಳ್ಳರಿಗೆ ವರದಾನವಾದಂತಾಗಿದೆ.
ವಿವಿಧ ಪ್ರಕರಣಗಳ ತನಿಖೆ ಹಾಗೂ ಮುನ್ನೆಚ್ಚರಿಕೆ ದೃಷ್ಟಿಯಿಂದ ಪೊಲೀಸರು ಮಾಹಿತಿ ಕಲೆ ಹಾಕು ತ್ತಿದ್ದಾರೆ. ಅದಕ್ಕೆ ಪೂರಕ ವೆಂಬಂತೆ ಹೊರ ಜಿಲ್ಲೆ ಮತ್ತಿತರ ವ್ಯಾಪಾರಸ್ಥರ ಚಲನ ವಲನದ ಮೇಲೆ ಕಣ್ಣಿಟ್ಟಿ ರುವ ಪೊಲೀಸರು ಹಲವರ ಗುರುತು ಪತ್ರ ಇನ್ನಿತರ ದಾಖಲೆ ಪರಿಶೀಲಿಸುತ್ತಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಎಚ್ಚರಿಸುತ್ತಿದ್ದಾರೆ. ಹವಾಲ್ದಾರ ಮೋಹದಾಸ ಶೇಣ್ವಿ, ಮಾರುತಿ ಕೇಣಿ, ಸಿಬ್ಬಂದಿ ಶ್ರೀಕಾಂತ ಪರಿಶೀಲಿಸಿದರು.
ನಾವು ಅಲೆಮಾರಿಗಳಾಗಿದ್ದು, ನಮ್ಮ ತಾತನ ಕಾಲದಿಂದಲೂ ಹೊಟ್ಟೆಪಾಡಿಗಾಗಿ ಚಿಕ್ಕಪುಟ್ಟ ವ್ಯಾಪಾರ ಮಾಡಿಕೊಂಡು ಊರೂರು ಅಲೆಯುತ್ತಿರುತ್ತೇವೆ. ಪೊಲೀಸರು ಇಂದು ನಮ್ಮನ್ನು ಕರೆದು ಮಕ್ಕಳ ಶಿಕ್ಷಣ, ಪರಿಸರ ಸ್ವಚ್ಛತೆಯಂತ ವಿಷಯಗಳ ಕುರಿತು ಎಚ್ಚರಿಸಿದ್ದು, ಇಲಾಖೆ ಜೊತೆ ನಾವು ಸಹಕಾರ ನೀಡಲು ಸಿದ್ದರಿದ್ದೇವೆ ಎಂದು ಜೋಪಡಿ ನಿವಾಸಿಯೊರ್ವನು ತಿಳಿಸಿದ್ದಾನೆ.
ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ