ಮೊದಲ ಹೆಂಡತಿ ಕುಟುಂಬದವರೊಂದಿಗೆ ಜಗಳ ಪ್ರಕರಣ : ಅಮೆರಿಕಾ ಪೌರತ್ವ ಹೊಂದಿದ್ದ ಭಟ್ಕಳ ಮೂಲದ ವ್ಯಕ್ತಿ ಅರೆಸ್ಟ್ : ಭಾರತಕ್ಕೆ ಬಂದಿರುವ ಖಚಿತ ಮಾಹಿತಿ ಮೇಲೆ ಕಾರ್ಯಾಚರಣೆ
ಮೊದಲ ಹೆಂಡತಿಗೆ ತಲಾಕ್ ನೀಡಿದ ನಂತರ ಮಹಿಳೆಯ ಕುಟುಂಬದವರೊಂದಿಗೆ ಜಗಳ ಮಾಡಿಕೊಂಡ ಕಾರಣ ಇವರ ವಿರುದ್ಧ ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಈತ ತಲೆ ಮರೆಸಿಕೊಂಡಿದ್ದ
ಭಟ್ಕಳ: 2011 ಮತ್ತು 2013 ರ ನಡುವೆ ದಾಖಲಾದ ಹಳೆಯ ಪ್ರಕರಣವೊಂದಕ್ಕೆ ಸಂಬoಧಿಸಿದoತೆ ಭಟ್ಕಳ ಬಂದರ್ ರೋಡ್ 1ನೇ ಕ್ರಾಸ್ ನಿವಾಸಿಯಾಗಿರುವ ಅಮೇರಿಕಾದ ನಾಗರೀಕತ್ವ ಹೊಂದಿರುವ ಇರ್ಷಾದ್ ಕಾಜಿಯಾ ಅಲಿಯಾಸ್ ಅಲಿಶಾ(51) ಎಂಬುವವರನ್ನು ಭಟ್ಕಳದ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ಭಟ್ಕಳ ಪೊಲೀಸ್ ಸಹಾಯಕ ಅಧೀಕ್ಷಕರ ಕಚೇರಿ ಹೊರಡಿಸಿದ ಹೇಳಿಕೆಯ ಪ್ರಕಾರ, ಭಟ್ಕಲ್ ನಿವಾಸಿ ಇರ್ಷಾದ್ ಖಾಜಿ ಅಲಿಯಾಸ್ ಅಲಿ ಶಾ (51) ಗೆ ಯುಎಸ್ ಪೌರತ್ವ ಮತ್ತು ಒಸಿಐ [ಸಾಗರೋತ್ತರ ಪೌರತ್ವ] ಸ್ಥಾನಮಾನವಿದೆ. 2011 ಮತ್ತು 2013 ರ ನಡುವೆ ದಾಖಲಾದ ಕೆಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಇರ್ಷಾದ್ ಖಾಜಿಯವರ ಚಲನವಲನ ಬಗ್ಗೆ ನಿಗಾ ಇಟ್ಟಿದ್ದ ಪೊಲೀಸ್ ಇಲಾಖೆಯ ಗುಪ್ತಚರ ಇಲಾಖೆ ಅವರ ನಡವಳಿಕೆಯನ್ನು ಮೇಲ್ವಿಚಾರಣೆ ಮಾಡುತ್ತಿತ್ತು ಎನ್ನಲಾಗಿದ್ದು ಇತ್ತೀಚೆಗೆ ಭಾರತಕ್ಕೆ ಬಂದಿರುವ ಖಚಿತ ಮಾಹಿತಿಯ ಆಧಾರದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಭಟ್ಕಳ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ಪೆಕ್ಟರ್ ಭರತ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಎಚ್‌ಬಿ ಕುಡಗುಂಟಿ ಮತ್ತು ಪೊಲೀಸ್ ಗುಪ್ತಚರ ವಿಭಾಗದ ನರೈನ್ ನಾಯಕ್, ಮಖ್ದೂಮ್ ಸಬ್ ಪೇಟ್ ಖಾನ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಹೆಂಡತಿಗೆ ತಲಾಕ್ ನೀಡಿದ ನಂತರ ಮಹಿಳೆಯ ಕುಟುಂಬದವರೊಂದಿಗೆ ಜಗಳ ಮಾಡಿಕೊಂಡ ಕಾರಣ ಇವರ ವಿರುದ್ಧ ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಭಟ್ಕಳ ಪೊಲೀಸರ ಕ್ರಮವನ್ನು ಶ್ಲಾಘಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವ್‌ರಾಜು ಟ್ವೀಟ್ ಮಾಡಿದ್ದು ಯುಎಸ್ ಪಾಸ್ಪೋರ್ಟ್ ಮತ್ತು ಒಸಿಐ ಸ್ಥಾನಮಾನ ಹೊಂದಿರುವ ಇರ್ಷಾದ್ ಅಹ್ಮದ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು. ಅವರು ಭಟ್ಕಳದಲ್ಲಿರುವುದನ್ನು ಖಚಿತಪಡಿಸಿ
ಕೊಂಡು ಬಂಧಿಸಲಾಗಿದ್ದಾರೆ ಎಂದಿದ್ದಾರೆ. ಈತನ ವಿರುದ್ಧ 2011 ಮತ್ತು 2013ರ ಅವಧಿಯಲ್ಲಿ ಕೌಂಟುಂಬಿಕ ಜಗಳ, ಬೆದರಿಕೆ ಇತ್ಯಾದಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಈತ ತಲೆ ಮರೆಸಿಕೊಂಡಿದ್ದ.
ಇರ್ಷಾದ್ ಖಾಜಿಯಾ ಅಲಿಯಾಸ್ ಅಲಿಷಾ ಅಮೇರಿಕಾದಲ್ಲಿ ವಾಸವಾಗಿದ್ದು ಅಲ್ಲಿಯೆ ವ್ಯಾಪಾರ ಮಾಡಿಕೊಂಡಿದ್ದು ಅಮೆರಿಕದ ಪೌರತ್ವವನ್ನು ಪಡೆದಿದ್ದಾರೆ. ಕೆಲ ಕೌಟುಂಬಿಕ ಸಮಸ್ಯೆಗಳಿಂದಾಗಿ ವಿವಾದಿತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದು ಅವರ ಹಲವು ವಿಡಿಯೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಕೂಡ ಆಗಿದ್ದವು. ಅಲ್ಲದೆ ಇತ್ತಿಚೆಗೆ ಭಟ್ಕಳದ ಜಮಾಅತುಲ್ ಮುಸ್ಲಿಮೀನ್ ಸಂಸ್ಥೆಯ ಷರಿಯಾ ನ್ಯಾಯಾಲದ ಕುರಿತಂತೆ ಆಕ್ಷೇಪಾರ್ಹ ಪತ್ರವೊಂದನ್ನು ಬರೆದು ಇಲ್ಲಿನ ಪ್ರಮುಖ ವ್ಯಕ್ತಿಗಳಿಗೆ ರವಾನಿಸಿದ್ದೂ ಕೂಡ ವಿವಾದವಾಗಿತ್ತು.
ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ