ಮನೆಗೆ ಬಂದು ಕತ್ತು ಮುರಿದು ನಾಯಿಯ ಹೊತ್ತೊಯ್ದ ಚಿರತೆ: ಭಯಾನಕ ದೃಶ್ಯನೋಡಿದ ಮನೆಯವರಿಗೆ ಆತಂಕ

ಮನೆಗೆ ನುಗ್ಗಿದ ಚಿರತೆ ಅಂಗಳದಲ್ಲಿದ್ದ ಇದ್ದ ನಾಯಿಯ ಮೇಲೆ ಎರಗಿದೆ.  ನಾಯಿ ಕಿರುಚಿತ್ತಿದ್ದಾಗ ಮನೆಯವರು ಎಚ್ಚರಗೊಂಡಿದ್ದಾರೆ.ಅಷ್ಟರಲ್ಲೆ ಮನೆಯ ಅಂಗಳಕ್ಕೆ ನಾಯಿಯನ್ನು ಚಿರತೆ ಎಳೆದು ತಂದಿದೆ.

ಭಟ್ಕಳ:  ರಾತ್ರಿ ಮನೆಗೆ ನುಗ್ಗಿದ ಚಿರತೆಯೊಂದು ಅಂಗಳದಲ್ಲಿದ್ದ ನಾಯಿಯ ಕತ್ತು ಮುರಿದು ಹೊತ್ತೊಯ್ದ ಘಟನೆ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವೆಂಕಟಾಪುರ ಗ್ರಾಮದ ಕಂಡೆಕೊಡ್ಲು ನಡುರಾತ್ರಿ 2.30ರ ಸುಮಾರಿಗೆ ನಡೆದಿದೆ.  ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅನಂತ ದುರ್ಗಪ್ಪ ನಾಯ್ಕ ಎನ್ನುವವರ ಮನೆಗೆ ನುಗ್ಗಿದ ಚಿರತೆ ಅಂಗಳದಲ್ಲಿದ್ದ ಇದ್ದ ನಾಯಿಯ ಮೇಲೆ ಎರಗಿದೆ.  ನಾಯಿ ಕಿರುಚುತ್ತಿದ್ದಾಗ ಮನೆಯವರು ಎಚ್ಚರಗೊಂಡಿದ್ದಾರೆ.

ಅಷ್ಟರಲ್ಲೆ ಮನೆಯ ಅಂಗಳಕ್ಕೆ ನಾಯಿಯನ್ನು ಕತ್ತು ಮುರಿದು ಚಿರತೆ ಎಳೆದು ತಂದಿದೆ. ಮನೆಯ ಮಾಲಿಕರು ನೋಡುತ್ತಿರುವಂತೆ ಚಿರತೆ ನಾಯಿಯ ಹೊತ್ತೊಯ್ದಿದೆ.. ಚಿರತೆಯ ಆವೇಶ ಕಂಡ ಮನೆಯವರು ಬೆಚ್ಚಿಬಿದ್ದಿದ್ದು ಆತಂಕಗೊoಡಿದ್ದಾರೆ.. ವೆಂಕಟಾಪುರ ಗ್ರಾಮ ನಗರಕ್ಕೆ ಹೊಂದಿಕೊಡು ಇದ್ದು, ಇದು ಕಾಡಿನ ಪ್ರದೇಶವೂ ಅಲ್ಲ. ಇಲ್ಲಿಯೂ ಚಿರತೆ ದಾಳಿ ನಡೆಸುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಮನೆಯ ಮಾಲಿಕ ಅನಂತ ದುರ್ಗಪ್ಪ ನಾಯ್ಕ ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಮುಂಡಳ್ಳಿಯ ಬಳಿಯೂ ಚಿರತೆ ಪ್ರತ್ಯಕ್ಷ :  ತಾಲೂಕಿನ ಮುಂಡಳ್ಳಿಯ ನೀರಗದ್ದೆ ಬಳಿಯೂ ಮಾ.12ರ ನಡುರಾತ್ರಿ ಚಿರತೆ ಪ್ರತ್ಯಕ್ಷವಾಗಿದೆ. ಸ್ಥಳೀಯರು ಆತಂಕಗೊಡು ಅರಣ್ಯ ಇಲಾಖೆಗೆ ಮಹಿತಿ ನೀಡಿದ್ದಾರೆ. ಆರ್‌ಎಫ್‌ಒ ಸವಿತಾ ದೇವಾಡಿಗ ಈ ಕುರಿತು ಮಾಹಿತಿ ನೀಡಿದ್ದು ಕಾಡಿನಲ್ಲಿ ನೀರು ದೊರಯದೆ ಪ್ರಾಣಿಗಳು ನಡಿಗೆ ಲಗ್ಗೆ ಇಡುವ ಸಾಧ್ಯತೆ ಇವೆ.ಈ ಕುರಿತು ಸ್ಥಳೀಯರು ಮಹಿತಿ ನೀಡಿದ್ದಾರೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version