Follow Us On

WhatsApp Group
Big News
Trending

ಹೊನ್ನಾವರದಲ್ಲಿ ‘ದಂಡಿ’ ಚಲನಚಿತ್ರದ ಮೂಹೂರ್ತ : ಚಿತ್ರೀಕರಣ ಪ್ರಾರಂಭ: ನಟ, ನಟಿಯರಿಂದ ಮೂಡಗಣಪತಿಗೆ ಪೂಜೆ

ಚಿತ್ರದ ಚಿತ್ರಿಕರಣಕ್ಕೆ ಚಾಲನೇ ದೊರೆಯಿತು. ಮೂಡಗಣಪತಿ ದೇವಾಲಯದ ಎದುರಿಗೆ ಪದ್ಮಶ್ರೀ ಪುರಸ್ಕ್ರತ ಸುಕ್ರಜ್ಜಿ ಅವರ ತಂಡದ ಪ್ರಥಮ ಚಿತ್ರಿಕರಣ ನಡೆಯಿತು. ಸ್ವಾತಂತ್ರ‍್ಯ ಸಂಗ್ರಾಮದ ಪೂರ್ವದ ಸಂದರ್ಭದಲ್ಲಿನ ಕಥಾವಸ್ತುವಿನ ದ್ರಶ್ಯಾವಳಿ ಸೆರೆಹಿಡಿಯಲಾಯಿತು..

ಹೊನ್ನಾವರ: ಕರ್ನಾಟಕ ಬಾರ್ಡೋಲಿ ಎಂದು ಕರೆಸಿಕೊಂಡ ಉತ್ತರಕನ್ನಡ ಜಿಲ್ಲೆಯ ಸ್ವಾತಂತ್ರ‍್ಯ ಹೋರಾಟದ ಕಥೆಯನ್ನು ಸಾರುವ ‘ದಂಡಿ’ ಚಲನಚಿತ್ರದ ಮೂಹೂರ್ತ ಹೊನ್ನಾವರ ಪಟ್ಟಣದ ಪ್ರಭಾತನಗರದ ಮೂಡಗಣಪತಿ ದೇವಸ್ಥಾನದಲ್ಲಿ ನಡೆಯಿತು. ಚಿತ್ರೀಕರಣ ಪ್ರಾರಂಭಕ್ಕು ಮೊದಲು ಚಿತ್ರತಂಡದಿoದ ಶ್ರೀ ಮೂಡಗಣಪತಿ ದೇವರಿಗೆ ಪೂಜೆ ಸಲ್ಲಿಸಲಾಯಿತು. ‘ದಂಡಿ’ ಸಿನಿಮಾದ ನಟ ಯುವಾನ್ ದೇವ್, ನಟಿ ಶಾಲಿನಿ ಭಟ್, ನಟಿ ತಾರ, ನಟ ಸುಚೇಂದ್ರ ಪ್ರಸಾದ್ , ನಿರ್ದೇಶಕ ವಿಶಾಲ್ ರಾಜ್ ,ನಿರ್ಮಾಪಕಿ ಉಷಾರಾಣಿ ಮತ್ತು ಸ್ಥಳೀಯರಾದ ದಾಮೋದರ್ ನಾಯ್ಕ ಸೇರಿದಂತೆ ಚಿತ್ರತಂಡದವರು ಶ್ರೀ ಮೂಡಗಣಪತಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಜಾನಪದ ಕೋಗಿಲೆ ಪದ್ಮಶ್ರೀ ಪುರಸ್ಕ್ರತ ಸುಕ್ರಜ್ಜಿ ಅವರ ತಂಡದ ಜಾನಪದ ಗೀತೆ,ಗುಮಟೆ ಪಾಂಗ್ ,ಯಕ್ಷ ಪಾತ್ರಧಾರಿಗಳು ಆಕರ್ಷಣಿಯವಾಗಿತ್ತು. ಚಿತ್ರಿಕರಣಕ್ಕೆ ಪದ್ಮಶ್ರೀ ಪುರಸ್ಕ್ರತ ಸುಕ್ರಜ್ಜಿ ಅವರಿಂದ ಚಾಲನೇ ದೊರೆಯಿತು. ‘ದಂಡಿ’ ಸತ್ಯಾಗ್ರಹದಲ್ಲಿ ಪ್ರಮುಖವಾಗಿ ಕಂಡು ಬಂದಿದ್ದ ಉಪ್ಪು ತಯಾರಿಕೆಯನ್ನು ಚಿತ್ರ ತಂಡ ಆಯ್ಕೆ ಮಾಡಿಕೊಂಡು ಅದೇ ರೀತಿಯಲ್ಲಿ ಮಡಕೆಯಲ್ಲಿ ಉಪ್ಪು ಬೇಯಿಸುವ ದ್ರಶ್ಯಕ್ಕೆ ಖ್ಯಾತ ಸಾಹಿತಿ ಅಂಕೋಲಾ ಮೂಲದ ಎನ್ ಆರ್ ನಾಯಕ ಅವರಿಂದ ಚಾಲನೇ ದೊರೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನಟ ಸುಚೇಂದ್ರ ಪ್ರಸಾದ ಮಾತನಾಡಿ,ಇದು ಅತ್ಯಂತ ಪರಣಾಮಕಾರಿಯಾದ ಚಿತ್ರ.ದಂಡಿ ಚಿತ್ರದ ಮೂಲಕ ಸತ್ಯಾಗ್ರಹದ ದಿನಗಳು ಸತ್ಯ ಅನುಷ್ಟಾನದ ಕಾಲಘಟ್ಟದಲ್ಲಿದ್ದೇವೆ ಎಂದರು.

ನಟಿ ತಾರ ಮಾದ್ಯಮದವರೋಂದಿಗೆ ಮಾತನಾಡಿ ಚಿತ್ರದಲ್ಲಿ ಸ್ವಾತಂತ್ರ‍್ಯ ಹೋರಾಟಗಾರರ ಸಾಕಿ,ಸಲಹುವ ಪಾತ್ರ ನನ್ನದಾಗಿದೆ. ಉತ್ತಮ ತಂಡದೊoದಿಗೆ ಕೆಲಸ ಮಾಡುತ್ತಿದ್ದೇನೆ.ದಂಡಿ ಚಿತ್ರತಂಡ ಕನ್ನಡ ಚಿತ್ರರಂಗಕ್ಕೆ ಇನ್ನೊಂದು ಮರುಜನ್ಮ ಕೊಡಲಿದೆ.ಹೊಸ ಇತಿಹಾಸ ನಿರ್ಮಿಸುವ ಚಿತ್ರಗಳ ಸಾಲಿಗೆ ಸೇರಲಿದೆ ಎನ್ನುವ ಭರವಸೆ ಇದೆ ಎಂದರು.

ಚಿತ್ರದ ನಿರ್ಮಾಪಕಿ ಉಷಾರಾಣಿ ಮಾತನಾಡಿ ಇದು ನಮ್ಮ ಕಲ್ಯಾಣಿ ಪ್ರೋಡಕ್ಷನನ ಚೋಚ್ಚಲ ಚಿತ್ರ . ಈ ಚಿತ್ರದಲ್ಲಿ ನನ್ನ ಮಗ ಹೀರೋಆಗಿ ಅಭಿನಯಿಸುತ್ತಿದ್ದಾನೆ . ನನ್ನ ಚೋಚ್ಚಲ ಚಿತ್ರವನ್ನು ವಿಶಾಲ್ ಸರ್ ನಿರ್ದೇಶನ ಮಾಡುತ್ತಿರುವುದ ನನ್ನ ಸೌಭಾಗ್ಯ . ತಾರಾ ಮೇಡಮ್ ಮತ್ತು ಸುಚೇಂದ್ರ ಪ್ರಸಾದ ಸರ್ ಅಂತವರು ನಮ್ಮ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಅದೃಷ್ಠ. ಈ ಚಿತ್ರ ಉಪ್ಪಿನ ಸತ್ಯಾಗ್ರಹದ ಕಥೆಯಾಗಿದ್ದು ಕಥೆ ತುಂಭಾ ಚನ್ನಾಗಿದೆ ಎಂದು ಹೇಳಿದರು.

ಚಿತ್ರದ ನಿರ್ದೇಶಕ ವಿಶಾಲ್ ರಾಜ್ ಮಾತನಾಡಿ ದಂಡಿ ಕಾದಂಬರಿ ಒದುವಾಗ ಪ್ರತಿಯೊರ್ವರಲ್ಲಿ ಸ್ವತಂತ್ರ ಹೋರಾಟದ ಕಿಚ್ಚು ಹಚ್ಚಿಸಿದ ಅನುಭವ ಬಂತು. ಈ ಭಾಗದವರು ಹಿಂಸಾಮಾರ್ಗಕ್ಕಿಳಿಯದೇ ಅಹಿಂಸಾಮಾರ್ಗದ ಹೋರಾಟವನ್ನು ಪರದೆ ಮೇಲೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಜಿಲ್ಲೆಯ ಶೇಕಡಾ 90% ರಷ್ಟು ಕಲಾವಿದರನ್ನು ಬಳಸಿಕೊಂಡು ಚಿತ್ರಿಕರಣ ಮುಗಿಸುವ ಯೋಜನೆಯಿದೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ, ಖ್ಯಾತ ಸಾಹಿತಿ ಎನ್ ಆರ್ ನಾಯಕ, ಹಿರಿಯ ಪತ್ರಕರ್ತ ಜಿ.ಯು ಭಟ್, ಕೃಷ್ಣಮೂರ್ತಿ ಹೆಬ್ಬಾರ್ ,ದಂಡಿ ಸಿನಿಮಾದ ಕಾದಂಬಕಾರಿಕಾರ ಡಾ.ರಾಜಶೇಖರ್ ಮಠಪತಿ, ನಟ ಯುವಾನ್ ದೇವ್, ನಟಿ ಶಾಲಿನಿ ಭಟ್, ನಟ ಸುಚೇಂದ್ರ ಪ್ರಸಾದ್ , ನಿರ್ದೇಶಕ ವಿಶಾಲ್ ರಾಜ್ ,ನಿರ್ಮಾಪಕಿ ಉಷಾರಾಣಿ ಮತ್ತು ಸ್ಥಳಿಯರಾದ ನಟ ದಾಮೋದರ್ ನಾಯ್ಕ, ನಿವೃತ್ತ ಉಪನ್ಯಾಸಕ ಎಸ್.ಡಿ ಹೆಗಡೆ, ಸಾಹಿತಿ ಶ್ರೀಪಾದ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

ತದನಂತರ ಚಿತ್ರದ ಚಿತ್ರಿಕರಣಕ್ಕೆ ಚಾಲನೇ ದೊರೆಯಿತು. ಮೂಡಗಣಪತಿ ದೇವಾಲಯದ ಎದುರಿಗೆ ಪದ್ಮಶ್ರೀ ಪುರಸ್ಕ್ರತ ಸುಕ್ರಜ್ಜಿ ಅವರ ತಂಡದ ಪ್ರಥಮ ಚಿತ್ರಿಕರಣ ನಡೆಯಿತು. ಸ್ವಾತಂತ್ರ‍್ಯ ಸಂಗ್ರಾಮದ ಪೂರ್ವದ ಸಂದರ್ಭದಲ್ಲಿನ ಕಥಾವಸ್ತುವಿನ ದ್ರಶ್ಯಾವಳಿ ಸೆರೆಹಿಡಿಯಲಾಯಿತು..

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ಪರಸ್ತ್ರೀಯರ ವ್ಯಾಮೋಹ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,

Back to top button