ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಮಟಾದಲ್ಲಿ ಕನ್ನಡ ಭಾಷಾ ಶಿಕ್ಷಕರ ವಿಶೇಷ ಕಾರ್ಯಾಗಾರ

ಕುಮಟಾ : ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕುಮಟಾ, ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಮಟಾ ಹಾಗೂ ಪ್ರೌಢ ಶಾಲಾ ಕನ್ನಡ ಶಿಕ್ಷಕರ ಸಂಘ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ 2020-21 ನೇ ಸಾಲಿನ 10 ನೇ ತರಗತಿಯ ಪರಿಷ್ಕøತಗೊಂಡ ವಿಷಯದ ಪಠ್ಯ ವಸ್ತುವಿನ ನಿರ್ವಹಣೆಯ ಕುರಿತು ರೂಪಿಸಿದ ಕ್ರಿಯಾ ಯೋಜನೆಯನ್ನು ತರಗತಿಯಲ್ಲಿ ಅನುಷ್ಠಾನಗೊಳಿಸಲು ಕುಮಟಾ ತಾಲೂಕಾ ಪ್ರೌಢ ಶಾಲೆಗಳ ಕನ್ನಡ ಭಾಷಾ ಶಿಕ್ಷಕರ ಕಾರ್ಯಾಗಾರವನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಮಟಾದಲ್ಲಿ ನಡೆಸಲಾಯಿತು.

ಸಭಾಧ್ಯಕ್ಷರು, ಕನ್ನಡ ಸಂಘದ ಅಧ್ಯಕ್ಷರು ಆದ ಶ್ರೀ ಪಾಂಡುರಂಗ ವಾಗ್ರೇಕರರವರು ಡಿ.ವಿ.ಜಿ ಹಾಗೂ ಪು.ತಿ.ನ. ರವರ ಜನ್ಮದಿನವನ್ನು ನೆನಪಿಸುತ್ತಾ, ಡಿ.ವಿ.ಜಿ.ಯವರ ಕಗ್ಗದ ನುಡಿಯನ್ನು ಹಾಗೂ ಪು.ತಿ.ನ. ರವರ ಗೀತ ನಾಟಕದ ತುಣುಕನ್ನು ನೆನಪಿಸುತ್ತಾ ಶಿಕ್ಷಕರಿಗೆ ಶುಭಕೋರುತ್ತಾ ಎಸ್.ಎಸ್.ಎಲ್.ಸಿ ಫಲಿತಾಂಶ ಶೇಕಡಾ ನೂರು ನಮ್ಮೆಲ್ಲರ ಗುರಿಯಾಗಬೇಕೆಂಬ ಆಶಾಭಾವನೆ ವ್ಯಕ್ತಪಡಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿಗಳಾದ ರೇಖಾ ನಾಯ್ಕ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಕನ್ನಡವೇ ಸಕಲ ವಿಷಯಗಳಿಗೂ ಮೂಲಾಧಾರ. ಕನ್ನಡ ಶಿಕ್ಷಕರ ಕುರಿತು ಹೆಮ್ಮೆಯ ಅಭಿಮಾನದ ಮಾತನಾಡಿದರು.

ಪ್ರಾಸ್ತವಿಕ ಮಾತನಾಡಿದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ನೊಡಲ್ ಅಧಿಕಾರಿಗಳು ಆದ ಶ್ರೀ ವಿನೋದ ನಾಯಕ ರವರು ಮಾತನಾಡಿ ಮಾನ್ಯ ಉಪನಿರ್ದೇಶಕರು, ಕಾರವಾರರವರು ಜಿಲ್ಲಾಮಟ್ಟದಲ್ಲಿ ಸಿದ್ಧಪಡಿಸಿದ ಎಸ್.ಎಸ್.ಎಲ್.ಸಿ ಪ್ರಥಮ, ದ್ವಿತೀಯ, ತೃತೀಯ ವಿಷಯದ ಕ್ರಿಯಾ ಯೋಜನೆಗೆ ತಕ್ಕಂತೆ ಪಾಠೋಪಕರಣಗಳನ್ನು ಸಿದ್ಧಪಡಿಸಬೇಕೆಂದು ಹಾಗೂ ಕಳೆದ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ವಿಶ್ಲೇಷಣೆಯನ್ನು ಮಾಡಬೇಕೆಂದು ಹಾಗೂ ಗುಣಾತ್ಮಕ ಕಲಿಕೆಗೆ ಅವಶ್ಯವಿರುವ ಯೋಜನೆಯನ್ನು ಇಂದಿನ ಕಾರ್ಯಾಗಾರದಲ್ಲಿ ಕೈಗೊಳ್ಳಬೇಕೆಂದು ತಿಳಿಸಿದರು.

ಕಾರ್ಯಾಗಾರಕ್ಕೆ ಭೇಟಿ ನೀಡಿದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಆರ್.ಎಲ್. ಭಟ್ಟ ರವರು ಎಸ್.ಎಸ್.ಎಲ್. ಪರೀಕ್ಷೆಯಲ್ಲಿ ಶಿಕ್ಷಕರು ಶೇಕಡಾ 100 ಫಲಿತಾಂಶ ಹಾಗೂ ಗುಣಾತ್ಮಕ ಫಲಿತಾಂಶವನ್ನು ನೀಡಲು ಪ್ರಯತ್ನಿಸಬೇಕೆಂದು ತಿಳಿಸಿದರು.

ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಲ್ಲೇಕೇರಿ ವಿದ್ಯಾರ್ಥಿಗಳು ಶುಶ್ರಾವ್ಯವಾಗಿ ಪ್ರಾರ್ಥನೆಯನ್ನು ಹಾಡಿ ಸಭೆಗೆ ಶುಭ ಕೋರಿದರೆ, ಅದೇ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ನಯನಾ ನಾಯಕರು ಸರ್ವರನ್ನು ಸ್ವಾಗತಿಸಿದರು. ನಿರ್ಮಲ ಕಾಮತ ಅಳ್ವೆಕೋಡಿಯ ಶಿಕ್ಷಕರಾದ ಸುಬ್ರಾಯ ಪಟಗಾರರವರು ಎಲ್ಲರನ್ನು ವಂದಿಸಿದರು. ಸರ್ಕಾರಿ ಪ್ರೌಢ ಶಾಲೆ ಅಘನಾಶಿನಿಯ ಶಿಕ್ಷಕಿಯರಾದ ಶ್ರೀಮತಿ ಗೀತಾ ಪಟಗಾರರವರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಿಸಿದರು.

ಶ್ರೀ ವಿನೋದ ನಾಯಕ, ಶ್ರೀ ಪಾಂಡುರಂಗ ವಾಗ್ರೇಕರ, ಶ್ರೀ ಎಸ್.ಜಿ.ಭಟ್ಟರವರು ಭೋದನೆ ವಿಷಯವನ್ನು ಅನುಕೂಲಿಸಿದರು. ಕುಮಟಾ ತಾಲೂಕಿನ ಎಲ್ಲಾ ಪ್ರೌಢ ಶಾಲಾ ಕನ್ನಡ ಶಿಕ್ಷಕರು ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ಪರಸ್ತ್ರೀಯರ ವ್ಯಾಮೋಹ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Exit mobile version