Important
Friday, March 28, 2025, 5:28 PM
ಬೇಸಿಗೆ ರಜೆ ನಿಮಿತ್ತ 20 ದಿನಗಳ ಸಂಗೀತ ಸಂಸ್ಕಾರ ಶಿಬಿರ
Important
Monday, March 24, 2025, 4:19 PM
ಬೆಟ್ಟಿಂಗ್ ಭರಾಟೆ ಜೋರು : ಪ್ರತಿ ತಾಲೂಕಿನಲ್ಲಿ ಪೊಲೀಸ್ ಇಲಾಖೆಯಿಂದ ತೀವ್ರ ನಿಗಾ
Important
Friday, March 21, 2025, 11:25 AM
ಹೌದು, ಕೆಲದಿನಗಳ ಹಿಂದಷ್ಟೇ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳತಿಯೊಂದಿಗೆ ಮಾತನಾಡಿದ ವಾಟ್ಸಾಪ್ ಆಡಿಯೋ ಇದೀಗ ವೈರಲ್ ಆಗಿದೆ. ವಿಧ್ಯಾರ್ಥಿನಿಯೊಬ್ಬಳು ಬಸ್ ನಲ್ಲಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುವ ವಿದ್ಯಾರ್ಥಿ ಹಾಗೂ ಕಂಡಕ್ಟರ್ ಬಗ್ಗೆ ಅಶ್ಲೀಲವಾಗಿ ಮಾತನಾಡನಾಡಿರುವ ಆಡಿಯೋ ಇದಾಗಿದೆ.
ಇಲ್ಲಿ ಕಂಡೆಕ್ಟರ್ ಮಾಡಿರುವುದು ತಪ್ಪು ಖಂಡಿತ. ಆದರೆ, ವಿದ್ಯಾರ್ಥಿನಿಯರು ಮಾತನಾಡಿರುವ ರೀತಿ ನೋಡಿದರೆ ಖಂಡಿತ, ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಈ ಆಡಿಯೋದಲ್ಲಿ ಭಟ್ಕಳ ಮುರ್ಡೇಶ್ವರದ ವಿಷಯ ಪ್ರಸ್ತಾಪವಾಗಿದೆ. ಈ ರೀತಿ ಮಾತನಾಡಿದ ವಿದ್ಯಾರ್ಥಿಗಳು ಪ್ರತಿದಿನ ಭಟ್ಕಳಕ್ಕೆ ಕಾಲೇಜಿಗೆ ತೆರಳುವವರು ಎಂಬುದು ಅವರ ಮಾತಿನಿಂದ ಸ್ಪಷ್ಟವಾಗಿದೆ.
ಟ್ರೋಲ್ ಪೇಜ್ ಗಳಲ್ಲಿ ಹಾಗೂ ಭಟ್ಕಳ ಯುವಕರ ವಾಟ್ಸಾಪ್ ಸ್ಟೇಟಸ್ ಗಲ್ಲಿ ಕಂಡೆಕ್ಟರ್ ಯಾರೆಂಬ ಟ್ರೆಂಡಿಂಗ್ ಹವಾ ಜೋರಾಗಿದ್ದು ಯುವತಿ ಆಡಿಯೋದಲ್ಲಿ ಹೇಳಿರೋ ಪ್ರಕಾರ ಬಸ್ ಭಟ್ಕಳ ಘಟಕಕ್ಕೆ ಸೇರಿದ್ದು ಎನ್ನಲಾಗಿದೆ.ಈ ರೀತಿ ದುರ್ವರ್ತನೆ ತೋರುವ ಕಂಡೆಕ್ಟರ್ ಅನ್ನು KSRTC ಘಟಕ ಯಾರೆಂಬುದು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ವಿಶೇಷ ಸೂಚನೆ: ಮಾದ್ಯಮದ ಸಾಮಾಜಿಕ ಜವಾಬ್ದಾರಿಯನ್ನು ವಿದ್ಯಾರ್ಥಿನಿಯ ಭವಿಷ್ಯದ ಹಿತದೃಷ್ಟಿಯಿಂದ ಈ ಆಡಿಯೋವನ್ನು ಪ್ರಸಾರ ಮಾಡಲಾಗಿಲ್ಲ.
ವಿಸ್ಮಯ ನ್ಯೂಸ್ ,ಭಟ್ಕಳ